AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲ್ಕತ್ತದಲ್ಲಿ ಇನ್ನೊಂದು ವಿಮಾನ ನಿಲ್ದಾಣಕ್ಕೆ ಮಮತಾ ಬ್ಯಾನರ್ಜಿ ಭೂಮಿ ಕೊಡುತ್ತಿಲ್ಲ: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಆರೋಪ

ಈಗಿರುವ ನೇತಾಜಿ ಸುಭಾಷ್​ ಚಂದ್ರ ಬೋಸ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 700 ಕೋಟಿ ರೂಪಾಯಿ ಹೂಡಿಕೆ ಮಾಡಲಾಗುತ್ತಿದೆ. ಅದರಲ್ಲಿ 300 ಕೋಟಿ ರೂಪಾಯಿ ವೆಚ್ಚದಲ್ಲಿ ಟೆಕ್ನಿಕಲ್​ ಬ್ಲಾಕ್​ (ಕಂಟ್ರೋಲ್​ ಟವರ್​)  ನಿರ್ಮಾಣ ಮಾಡಲಾಗುತ್ತಿದೆ ಎಂದೂ ಸಿಂಧಿಯಾ ಮಾಹಿತಿ ನೀಡಿದ್ದಾರೆ.

ಕೋಲ್ಕತ್ತದಲ್ಲಿ ಇನ್ನೊಂದು ವಿಮಾನ ನಿಲ್ದಾಣಕ್ಕೆ ಮಮತಾ ಬ್ಯಾನರ್ಜಿ ಭೂಮಿ ಕೊಡುತ್ತಿಲ್ಲ: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಆರೋಪ
ಜ್ಯೋತಿರಾದಿತ್ಯ ಸಿಂಧಿಯಾ
TV9 Web
| Updated By: Lakshmi Hegde|

Updated on: Feb 07, 2022 | 8:26 AM

Share

ಕೋಲ್ಕತ್ತದಲ್ಲಿ ಮತ್ತೊಂದು ಏರ್​ಪೋರ್ಟ್ (Airport in Kolkata)​ ನಿರ್ಮಾಣ ಮಾಡುವುದನ್ನು ಸೇರಿ, ಇಡೀ ಪಶ್ಚಿಮ ಬಂಗಾಳದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮಾಡಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ಕೋಲ್ಕತ್ತದಲ್ಲಿ ಏರ್​​ಪೋರ್ಟ್​ ನಿರ್ಮಾಣಕ್ಕೆ ಮಮತಾ ಬ್ಯಾನರ್ಜಿ ಸರ್ಕಾರ ಭೂಮಿಯನ್ನು ಕೊಡುತ್ತಿಲ್ಲ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಕೋಲ್ಕತ್ತದ ನೇತಾಜಿ ಸುಭಾಷ್​ ಚಂದ್ರ ಬೋಸ್ ವಿಮಾನ ನಿಲ್ದಾಣದಲ್ಲಿ ಅದರ ಸಾಮರ್ಥ್ಯಕ್ಕಿಂತಲೂ ಜಾಸ್ತಿ ಪ್ರಯಾಣಿಕರು ಬರುತ್ತಿದ್ದಾರೆ. ಹಾಗಾಗಿ ಇನ್ನೊಂದು ವಿಮಾನ ನಿಲ್ದಾಣದ ಅಗತ್ಯವಿದ್ದು, ಅದರ ಬಗ್ಗೆ ಆರು ತಿಂಗಳಿಂದಲೂ ಮಮತಾ ಬ್ಯಾನರ್ಜಿಯವರ ಬಳಿ ಕೇಳುತ್ತಲೇ ಇದ್ದೇನೆ. ಆದರೆ ಮಮತಾ ಬ್ಯಾನರ್ಜಿ ಯಾವುದೇ ಪ್ರತಿಕ್ರಿಯೆಯನ್ನೂ ನೀಡುತ್ತಿಲ್ಲ ಎಂದಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ನಾಗರಿಕ ವಿಮಾನಯಾನ ಅಭಿವೃದ್ಧಿಗಾಗಿ ನಮ್ಮ ನಾಗರಿಕ ವಿಮಾನಯಾನ ಸಚಿವಾಲಯವರು ವಿಸ್ತಾರವಾದ ಯೋಜನೆಗಳನ್ನು ಹೊಂದಿದೆ.  ಆದರೆ ಕೋಲ್ಕತ್ತದಲ್ಲಿ ರಾಜ್ಯ ಸರ್ಕಾರ ಭೂಮಿಯನ್ನೇ ಕೊಡದೆ, ನಾವು ಹೊಸ ಏರ್​​ಪೋರ್ಟ್​ನ್ನು ಕಟ್ಟುವುದಾದರೂ ಹೇಗೆ ಎಂದು ಸಿಂಧಿಯಾ ಪ್ರಶ್ನಿಸಿದ್ದಾರೆ. ಈಗಿರುವ ನೇತಾಜಿ ಸುಭಾಷ್​ ಚಂದ್ರ ಬೋಸ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 700 ಕೋಟಿ ರೂಪಾಯಿ ಹೂಡಿಕೆ ಮಾಡಲಾಗುತ್ತಿದೆ. ಅದರಲ್ಲಿ 300 ಕೋಟಿ ರೂಪಾಯಿ ವೆಚ್ಚದಲ್ಲಿ ಟೆಕ್ನಿಕಲ್​ ಬ್ಲಾಕ್​ (ಕಂಟ್ರೋಲ್​ ಟವರ್​)  ನಿರ್ಮಾಣ ಮಾಡಲಾಗುತ್ತಿದೆ. ಹಾಗೇ 265 ಕೋಟಿ ರೂ.ವೆಚ್ಚದಲ್ಲಿ ಟ್ಯಾಕ್ಸಿ ವೇ ನಿರ್ಮಿಸಲಾಗುತ್ತದೆ. ಇನ್ನು ವಿಮಾನ ನಿಲ್ದಾಣದ ಟರ್ಮಿನಲ್​ ಕಟ್ಟಡದೊಂದಿಗೆ ಮೆಟ್ರೋ ರೈಲ್ವೆ ಸಂಪರ್ಕಿಸಲು 110 ಕೋಟಿ ರೂಪಾಯಿ ಹೂಡಿಕೆ ಮಾಡಲಾಗುತ್ತದೆ ಎಂದೂ ಮಾಹಿತಿ ನೀಡಿದರು.

ಈಗಿರುವ ವಿಮಾನ ನಿಲ್ದಾಣದ ಕಟ್ಟಡ 2.5 ಕೋಟಿ ಜನರು ಬರವಂತೆ ಇದೆ. ಆದರೆ ಈ ಮಹಾನಗರದಿಂದ ವಿಮಾನ ಯಾನ ಕೈಗೊಳ್ಳುವವರು, ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 3.5 ಕೋಟಿ ಜನರು ಬರಬಹುದಾದಷ್ಟು ಸಾಮರ್ಥ್ಯವುಳ್ಳ ಒಂದು ವಿಮಾನ ನಿಲ್ದಾಣದ ಅಗತ್ಯವಿದೆ. ಈ ವಿಮಾನ ನಿಲ್ದಾಣ ಅಂದಾಜು 2 ಲಕ್ಷ ಚದರ್​ ಮೀಟರ್​ ವಿಸ್ತಾರದಲ್ಲಿ ಇರಬೇಕು ಎಂದೂ ಅವರು ಹೇಳಿದ್ದಾರೆ. ಅಂದಹಾಗೇ, ಕೇಂದ್ರ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಎರಡನೇ ಏರ್​ಪೋರ್ಟ್​​ಗೆ ದಕ್ಷಿಣ 24 ಪರಗಣ ಜಿಲ್ಲೆಯ ಭಂಗಾರ್​​ ಕೂಡ ಒಂದು ಸಂಭವನೀಯ ಸ್ಥಳವಾಗಿದೆ ಎಂದೂ ಹೇಳಲಾಗಿದೆ.

ಇದನ್ನೂ ಓದಿ: ಒಣ ನೆಲ್ಲಿಕಾಯಿ ತಿನ್ನುವ ಅಭ್ಯಾಸ ಇದೆಯೇ? ಆರೋಗ್ಯಕರ ಬದಲಾವಣೆಯ ಬಗ್ಗೆ ನೀವು ತಿಳಿಯಲೇಬೇಕು