ನ್ಯಾಯಮೂರ್ತಿಗಳ ನೇಮಕಾತಿ ತಡೆಹಿಡಿಯುವ ಕೇಂದ್ರದ ಕ್ರಮ ಗಂಭೀರ ಕಳವಳದ ವಿಷಯ: ಸುಪ್ರೀಂಕೋರ್ಟ್ ಕೊಲಿಜಿಯಂ

ತನ್ನ ಶಿಫಾರಸುಗಳನ್ನು ತಡೆಹಿಡಿಯಬಾರದು ಅಥವಾ ಕಡೆಗಣಿಸಬಾರದು ಎಂದು ಕೊಲಿಜಿಯಂ ಮಂಗಳವಾರ ಹೇಳಿದೆ. ಇದು ಅವರ ಜೇಷ್ಠತೆಗೆ ಭಂಗ ತರುತ್ತದೆ

ನ್ಯಾಯಮೂರ್ತಿಗಳ ನೇಮಕಾತಿ ತಡೆಹಿಡಿಯುವ ಕೇಂದ್ರದ ಕ್ರಮ ಗಂಭೀರ ಕಳವಳದ ವಿಷಯ: ಸುಪ್ರೀಂಕೋರ್ಟ್ ಕೊಲಿಜಿಯಂ
ಸುಪ್ರೀಂಕೋರ್ಟ್​
Follow us
ರಶ್ಮಿ ಕಲ್ಲಕಟ್ಟ
|

Updated on: Mar 22, 2023 | 9:40 PM

ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸು ಮಾಡಿರುವ ಅಭ್ಯರ್ಥಿಗಳ ಹೆಸರನ್ನು ಕೇಂದ್ರ ಸರ್ಕಾರ ತಡೆಹಿಡಿಯಬಾರದು ಎಂದು ಸುಪ್ರೀಂಕೋರ್ಟ್(Supreme Court) ಕೊಲಿಜಿಯಂ (Collegium )ಮಂಗಳವಾರ ಹೇಳಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (DY Chandrachud) ನೇತೃತ್ವದ ಕೊಲಿಜಿಯಂ, ವಕೀಲ ಆರ್ ಜಾನ್ ಸತ್ಯನ್ ಅವರನ್ನು ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶರನ್ನಾಗಿ ನೇಮಿಸುವ ಶಿಫಾರಸನ್ನು ಉಲ್ಲೇಖಿಸಿ ಈ ಹೇಳಿಕೆ ನೀಡಿದೆ. ಜನವರಿ 17 ರಂದು ಸತ್ಯನ್ ಅವರ ಹೆಸರನ್ನು ಕೊಲಿಜಿಯಂ ಪುನರುಚ್ಚರಿಸಿತು, ಆದರೆ ಸರ್ಕಾರವು ಇನ್ನೂ ನೇಮಕಾತಿಯನ್ನು ಅನುಮೋದಿಸಿಲ್ಲ.

ತನ್ನ ಶಿಫಾರಸುಗಳನ್ನು ತಡೆಹಿಡಿಯಬಾರದು ಅಥವಾ ಕಡೆಗಣಿಸಬಾರದು ಎಂದು ಕೊಲಿಜಿಯಂ ಮಂಗಳವಾರ ಹೇಳಿದೆ. ಇದು ಅವರ ಜೇಷ್ಠತೆಗೆ ಭಂಗ ತರುತ್ತದೆ. ಆದರೆ ಶಿಫಾರಸು ಮಾಡಿದವರು ನಂತರ ಅದರ ಪ್ರಯೋಜನ ಪಡೆಯುತ್ತಾರೆ. ಈ ಹಿಂದೆ ಶಿಫಾರಸು ಮಾಡಿದ ಅಭ್ಯರ್ಥಿಗಳ ಜೇಷ್ಠತೆಯ ನಷ್ಟವನ್ನು ಕೊಲಿಜಿಯಂ ಗಮನಿಸಿದೆ ಮತ್ತು ಇದು ಗಂಭೀರ ಕಳವಳದ ವಿಷಯವಾಗಿದೆ ಎಂದು ಅದು ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ದಿ ಕ್ವಿಂಟ್‌ನ ವರದಿಯನ್ನು ಸತ್ಯನ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗಿನಿಂದ ಇಂಟೆಲಿಜೆನ್ಸ್ ಬ್ಯೂರೋ ಅವರ ಬಗ್ಗೆ ಪ್ರತಿಕೂಲ ಕಾಮೆಂಟ್‌ಗಳನ್ನು ಮಾಡಿದೆ ಎಂದು ಜನವರಿ 17ರ ನಿರ್ಣಯದಲ್ಲಿ ಕೊಲಿಜಿಯಂ ಹೇಳಿತ್ತು. ಮಂಗಳವಾರ ಕೊಲಿಜಿಯಂ ನಾಲ್ವರು ನ್ಯಾಯಾಂಗ ಅಧಿಕಾರಿಗಳಾದ ಆರ್ ಶಕ್ತಿವೇಲ್, ಪಿ ಧನಬಾಲ್, ಚಿನ್ನಸಾಮಿ ಕುಮಾರಪ್ಪನ್ ಮತ್ತು ಕೆ ರಾಜಶೇಖರ್ ಅವರನ್ನು ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶರನ್ನಾಗಿ ಬಡ್ತಿ ಮಾಡುವ ಪ್ರಸ್ತಾಪವನ್ನು ಮಾಡಿದೆ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಹಿರಿಯ ವಕೀಲ ಹರ್‌ಪ್ರೀತ್ ಸಿಂಗ್ ಬ್ರಾರ್ ಅವರನ್ನು ನೇಮಿಸುವ ತನ್ನ ಶಿಫಾರಸನ್ನು ಅದು ಪುನರುಚ್ಚರಿಸಿತು.

ಜುಲೈ 25 ರಂದು ನೇಮಕಕ್ಕೆ ಸಿಂಗ್ ಅವರ ಹೆಸರನ್ನು ಮೊದಲು ಶಿಫಾರಸು ಮಾಡಲಾಗಿತ್ತು. ಕಳೆದ ಕೆಲವು ತಿಂಗಳುಗಳಲ್ಲಿ, ಕೊಲಿಜಿಯಂ ನ್ಯಾಯಾಧೀಶರನ್ನು ಶಿಫಾರಸು ಮಾಡುವ ತಾರ್ಕಿಕತೆ, ಸರ್ಕಾರದ ಬಳಿ ಬಾಕಿ ಇರುವ ಹೆಸರುಗಳು ಮತ್ತು ನ್ಯಾಯಾಂಗ ನೇಮಕಾತಿಗಳ ಕುರಿತು ಗುಪ್ತಚರ ಏಜೆನ್ಸಿಗಳ ಒಳಹರಿವಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುತ್ತಿದೆ.

ಇದನ್ನೂ ಓದಿ:ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಭೇಟಿಯಾಗಲಿದ್ದಾರೆ ಹೆಚ್​​ಡಿ ಕುಮಾರಸ್ವಾಮಿ; ಕಾರಣ ಇಲ್ಲಿದೆ

ಜನವರಿ 24 ರಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಗುಪ್ತಚರ ಬ್ಯೂರೋ ಮತ್ತು ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್‌ನ ಸೂಕ್ಷ್ಮ ವರದಿಗಳ ಕೆಲವು ಭಾಗಗಳನ್ನು ಬಿಡುಗಡೆ ಮಾಡಿರುವುದು “ಗಂಭೀರ ಕಳವಳಕಾರಿ ವಿಷಯ” ಎಂದು ಹೇಳಿದರು. ಸಾಮಾನ್ಯವಾಗಿ ಕೊಲಿಜಿಯಂ ಸಭೆಗಳಲ್ಲಿ ನಡೆದ ಚರ್ಚೆಗಳನ್ನು ಯಾವುದೇ ರೂಪದಲ್ಲಿ ದಾಖಲಿಸಲಾಗಿಲ್ಲ ಅಥವಾ ಬಿಡುಗಡೆ ಮಾಡಲಾಗುವುದಿಲ್ಲ. ಶಿಫಾರಸು ಮಾಡಿದ ಅಭ್ಯರ್ಥಿಗಳ ಹೆಸರನ್ನು ಮಾತ್ರ ಸಾರ್ವಜನಿಕ ಡೊಮೇನ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ