ವಿಚ್ಛೇದನಕ್ಕೆ ನಿರ್ಧಾರ: ನ್ಯಾಯಾಲಯದಲ್ಲಿ 12 ಲಕ್ಷ ರೂ. ಜೀವನಾಂಶಕ್ಕೆ ಒಪ್ಪದವಳು 11 ಸಾವಿರಕ್ಕೆ ಒಪ್ಪಿದ್ಹೇಗೆ?

|

Updated on: Dec 15, 2023 | 2:54 PM

ಪತಿ, ಪತ್ನಿ ಇಬ್ಬರೂ ಒಟ್ಟಿಗೆ ಬಾಳಲು ಸಿದ್ಧರಿರಲಿಲ್ಲ, ವಿಚ್ಛೇದನಕ್ಕೆ ಇಬ್ಬರಿಗೂ ಒಪ್ಪಿಗೆ ಇತ್ತು, ಆದರೆ ಪತಿ ಹೇಳಿದಷ್ಟು ಜೀವನಾಂಶಕ್ಕೆ ಪತ್ನಿಯ ಒಪ್ಪಿಗೆ ಇರಲಿಲ್ಲ. ಕೊನೆಗೂ ನ್ಯಾಯಾಧೀಶರು ಪ್ರಕರಣವನ್ನು ಇತ್ಯರ್ಥಪಡಿಸಿದ್ದಾರೆ. ಮಾಸಿಕ ಜೀವನಾಂಶಕ್ಕಾಗಿ ಪತಿ ವಿರುದ್ಧ ಪತ್ನಿ ದಾವೆ ಹೂಡಿದ್ದಳು. ಪತಿ 12 ಲಕ್ಷ ರೂ. ನೀಡಿ ಸಂಬಂಧವನ್ನು ಕೊನೆಗೊಳಿಸಲು ಬಯಸಿದ್ದ, ಆದರೆ ಪತ್ನಿ 15 ಲಕ್ಷ ರೂ. ನೀಡಬೇಕು ಎಂದು ಒತ್ತಾಯಿಸುತ್ತಿದ್ದಳು. 12 ಲಕ್ಷಕ್ಕೆ ಒಪ್ಪದವಳು 11 ಸಾವಿರ ರೂ. ಜೀವನಶಾಂಕ್ಕೆ ಒಪ್ಪಿದ್ದಾಳೆ.

ವಿಚ್ಛೇದನಕ್ಕೆ ನಿರ್ಧಾರ: ನ್ಯಾಯಾಲಯದಲ್ಲಿ 12 ಲಕ್ಷ ರೂ. ಜೀವನಾಂಶಕ್ಕೆ ಒಪ್ಪದವಳು 11 ಸಾವಿರಕ್ಕೆ ಒಪ್ಪಿದ್ಹೇಗೆ?
Follow us on

ಚಂಡೀಗಢ, ಡಿಸೆಂಬರ್ 15: ಪತಿ, ಪತ್ನಿ ಇಬ್ಬರೂ ಒಟ್ಟಿಗೆ ಬಾಳಲು ಸಿದ್ಧರಿರಲಿಲ್ಲ, ವಿಚ್ಛೇದನಕ್ಕೆ ಇಬ್ಬರಿಗೂ ಒಪ್ಪಿಗೆ ಇತ್ತು, ಆದರೆ ಪತಿ ಹೇಳಿದಷ್ಟು ಜೀವನಾಂಶಕ್ಕೆ ಪತ್ನಿಯ ಒಪ್ಪಿಗೆ ಇರಲಿಲ್ಲ. ಕೊನೆಗೂ ನ್ಯಾಯಾಧೀಶರು ಪ್ರಕರಣವನ್ನು ಇತ್ಯರ್ಥಪಡಿಸಿದ್ದಾರೆ. ಮಾಸಿಕ ಜೀವನಾಂಶಕ್ಕಾಗಿ ಪತಿ ವಿರುದ್ಧ ಪತ್ನಿ ದಾವೆ ಹೂಡಿದ್ದಳು. ಪತಿ 12 ಲಕ್ಷ ರೂ. ನೀಡಿ ಸಂಬಂಧವನ್ನು ಕೊನೆಗೊಳಿಸಲು ಬಯಸಿದ್ದ, ಆದರೆ ಪತ್ನಿ 15 ಲಕ್ಷ ರೂ. ನೀಡಬೇಕು ಎಂದು ಒತ್ತಾಯಿಸುತ್ತಿದ್ದಳು. 12 ಲಕ್ಷಕ್ಕೆ ಒಪ್ಪದವಳು 11 ಸಾವಿರ ರೂ. ಜೀವನಶಾಂಕ್ಕೆ ಒಪ್ಪಿದ್ದಾಳೆ.

ನ್ಯಾಯಾಧೀಶರು ಒಪ್ಪಂದಕ್ಕೆ ಬರಲು 2 ಲಕ್ಷದ ಮೇಲೆ ತಾವೇ 11 ಸಾವಿರವನ್ನು ನೀಡುವುದಾಗಿ ಹೇಳಿದಾಗ ಮಹಿಳೆ ಒಪ್ಪಿಕೊಂಡಿದ್ದಾಳೆ.
ಇದಕ್ಕೆ ಪತಿ ಕೂಡ ಒಪ್ಪಿದ್ದು 12 ಲಕ್ಷ 11 ಸಾವಿರದ ಒಪ್ಪಂದವಾಗಿದೆ. ಮೊದಲು 11 ಸಾವಿರ ರೂ. ನೀಡಿದ್ದು, ಬಳಿಕ ಉಳಿದ ಮೊತ್ತವನ್ನು ಪತಿ ಎರಡು ಹಂತಗಳಲ್ಲಿ ಪಾವತಿಸಬೇಕಿದೆ. ಪರಸ್ಪರ ಒಪ್ಪಿಗೆಯಿಂದ ಎರಡೂ ಕಡೆಯವರು ವಿಚ್ಛೇದನಕ್ಕೆ ಒಪ್ಪಿದ್ದಾರೆ.

ಮಹಿಳೆ ಸಿಆರ್​ಪಿಸಿ 125ರ ಅಡಿಯಲ್ಲಿ ಜೀವನಾಂಶಕ್ಕಾಗಿ ಪ್ರಕರಣವನ್ನು ದಾಖಲಿಸಿದ್ದಳು, ಪ್ರತಿ ತಿಂಗಳು ತನ್ನ ಪತಿ 80 ಸಾವಿರ ರೂ ನೀಡಬೇಕು ಎಂದು ಕೇಳಿದ್ದಳು.

ಮತ್ತಷ್ಟು ಓದಿ: ದಂಪತಿ ಪರಸ್ಪರ ಒಪ್ಪಿದರೂ ನಿಯಮದಂತೆ 18 ತಿಂಗಳ ಬಳಿಕ ವಿಚ್ಚೇದನ: ಹೈಕೋರ್ಟ್

ಒಟ್ಟಿಗೆ 4 ಲಕ್ಷ ರೂ. ಕೊಡುತ್ತೇನೆ ಎಂದರೂ ಆಕೆ ಕೇಳಲು ಸಿದ್ಧರಿರಲಿಲ್ಲ, ಬಳಿಕ 12 ಲಕ್ಷ ರೂ ಕೊಡುವುದಾಗಿ ಹೇಳಿದರೂ ಒಪ್ಪಿಕೊಂಡಿರಲಿಲ್ಲ. ಕೊನೆಯಲ್ಲಿ ನ್ಯಾಯಾಧೀಶರು 12 ಲಕ್ಷದ ಮೇಲೆ 11 ಸಾವಿರ ರೂ ತಾನೇ ನೀಡುವುದಾಗಿ ಹೇಳಿದರು ಅದಕ್ಕೆ ಮಹಿಳೆ ಒಪ್ಪಿಕೊಂಡಿದ್ದಾರೆ.

ಎಟಿಎಂನಿಂದ 11 ಸಾವಿರ ರೂ. ಡ್ರಾ ಮಾಡಿಕೊಂಡು ಬರುವಂತೆ ವಕೀಲರಿಗೆ ಹೇಳಿದ್ದು, 12 ಲಕ್ಷದ ಮೇಲೆ ಈ ಹಣವನ್ನೂ ಸೇರಿಸಿ ಕೊಡುವಂತೆ ತಿಳಿಸಿದ್ದಾರೆ. ಆಕೆ 2021ರಿಂದ ತಾಯಿ ಮನೆಯಲ್ಲಿಯೇ ಇದ್ದಾಳೆ, ಆಕೆಗೆ ಸಂಪಾದನೆಯಿಲ್ಲ ಸಹೋದರ, ಸಂಬಂಧಿ ಮೇಲೆ ಅವಲಂಬಿತರಾಗಿರುವುದಾಗಿ ಹೇಳಿದ್ದು, ಪತಿಯ  ವರ್ತನೆಯಿಂದ ಬೇಸತ್ತು ಬೇರೆ ಬೇರೆಯಾಗಿ ಬದುಕುವ ನಿರ್ಧಾರ ಮಾಡಿದ್ದಳು.

ಪತಿ ಖಾಸಗಿ ವಿಶ್ವವಿದ್ಯಾಲಯದಲ್ಲಿ ಉತ್ತಮ ಹುದ್ದೆಯಲ್ಲಿದ್ದಾರೆ ಎಂದು ಮಹಿಳೆ ಹೇಳಿದ್ದಾಳೆ. ಅವರ ತಿಂಗಳ ಆದಾಯ 56 ಸಾವಿರ ರೂ. ಇದಲ್ಲದೇ ವ್ಯಾಪಾರವಿದೆ ಮತ್ತು ಯುಪಿಯಲ್ಲಿ ಮಾವಿನ ತೋಟಗಳಿವೆ. ವಾರ್ಷಿಕ ಆದಾಯ 15 ರಿಂದ 18 ಲಕ್ಷ ರೂಪಾಯಿ. ಹಾಗಾಗಿ ಪ್ರತಿ ತಿಂಗಳು 80 ಸಾವಿರ ರೂಪಾಯಿ ವೆಚ್ಚ ಭರಿಸುವಂತೆ ಒತ್ತಾಯಿಸಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 2:28 pm, Fri, 15 December 23