ಹೈದರಾಬಾದ್: ಮೂವರು ಕೊರೊನಾ ಶಂಕಿತರನ್ನು ಆಸ್ಪತ್ರೆಗೆ ರವಾನಿಸಲು ಕಸ ಸಾಗಿಸುವ ಟ್ರಕ್ ಬಳಸಿರುವ ಘಟನೆ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ನಡೆದಿದೆ. ಈ ಬಗ್ಗೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನಿರಾಶೆ ವ್ಯಕ್ತಪಡಿಸಿದ್ದಾರೆ.
ವಿಜಯನಗರ ಜಿಲ್ಲೆಯ ಜಾರ್ಜಪುಪೆಟದ ಬಿ.ಸಿ ಕಾಲೋನಿಯಲ್ಲಿ ಕಸದ ಟ್ರಕ್‌ನಲ್ಲಿ ಮೂವರು ಶಂಕಿತ ಕೋವಿಡ್ 19 ರೋಗಿಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಈ ಬಗ್ಗೆ ತಿಳಿದ ಟಿಡಿಪಿ ಮುಖ್ಯಸ್ಥ ಮತ್ತು ಮಾಜಿ ಆಂಧ್ರ ಸಿಎಂ ಈ ಘಟನೆಯನ್ನು ಖಂಡಿಸಿದ್ದಾರೆ.
ಕೊರೊನಾವೈರಸ್ ಬಗ್ಗೆ ಜನರಿಗೆ ಅರಿವಿಲ್ಲ, ಆದರೆ ಅಸಹಾಯಕ ರೋಗಿಗಳು ಇತರ ಅಪಾಯಕಾರಿ ಕಾಯಿಲೆಗಳಿಗೆ ತುತ್ತಾಗಬಹುದು. ಅವರನ್ನು ಮನುಷ್ಯರಂತೆ ಏಕೆ ಪರಿಗಣಿಸಲಾಗುವುದಿಲ್ಲ? ಎಂದು ಚಂದ್ರಬಾಬು ನಾಯ್ಡು ಟ್ವಿಟ್ಟರ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ವಿಜಯನಗರ ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (DMHO) ಡಾ.ರಮಣ ಕುಮಾರಿ ಈ ಬಗ್ಗೆ ತನಿಖೆಗೆ ಆದೇಶಿಸುವುದಾಗಿ ತಿಳಿಸಿದ್ದಾರೆ.
Appalling! Three #Covid_19 patients in BC Colony, Jarjapupeta in Vizianagaram Dist were seen taken to the hospital in a ‘Garbage vehicle’. Don’t know about #Coronavirus, but the helpless patients might contract other dangerous diseases. Why are they not being treated like humans? pic.twitter.com/FJ1sAfswGc
— N Chandrababu Naidu #StayHomeSaveLives (@ncbn) August 2, 2020
Published On - 11:44 am, Tue, 4 August 20