ತಿರುಪತಿಯಲ್ಲಿ ‘ಗೋವಿಂದ ಗೋವಿಂದ’ ಎಂಬ ಘೋಷ ಮಾತ್ರ ಮೊಳಗಬೇಕು: ಚಂದ್ರಬಾಬು ನಾಯ್ಡು

|

Updated on: Jun 13, 2024 | 2:07 PM

ತಿರುಮಲ ಒಂದು ಪವಿತ್ರ ಕ್ಷೇತ್ರ, ದೇವಸ್ಥಾನದ ಪಾವಿತ್ರ್ಯತೆಯನ್ನು ರಕ್ಷಿಸಬೇಕು ಹೀಗಾಗಿ ತಿರುಪತಿಯಲ್ಲಿ ಏಡುಕುಂಡಲವಾಡ ಸ್ವಾಮಿ ಗೋವಿಂದ ಗೋವಿಂದ ಎಂಬ ಘೋಷ ಮಾತ್ರ ಕೇಳಬೇಕೆಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹೇಳಿದರು. ಗುರುವಾರ ಬೆಳಗ್ಗೆ ಚಂದ್ರಬಾಬು ನಾಯ್ಡು ಕುಟುಂಬದ ಜತೆಯಲ್ಲಿ ತಿಮ್ಮಪ್ಪನ ದರ್ಶನ ಪಡೆದರು. ತಿರುಮಲ ಬೆಟ್ಟದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಟ್ಟದಲ್ಲಿ ಭಕ್ತರಿಗೆ ಶಾಂತಿಯುತವಾಗಿ ತಂಗಲು ಹಾಗೂ ದರ್ಶನಕ್ಕೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.

ತಿರುಪತಿಯಲ್ಲಿ ‘ಗೋವಿಂದ ಗೋವಿಂದ’ ಎಂಬ ಘೋಷ ಮಾತ್ರ ಮೊಳಗಬೇಕು: ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು
Follow us on

ತಿರುಮಲ ದೇವಸ್ಥಾನ ಹಿಂದೂಗಳಿಗೆ ಸೇರಿದ್ದು ಇಲ್ಲಿ  ರಾಜಕೀಯ ಹೇಳಿಕೆಗಳು, ಘೋಷಣೆಗಳು ಕೇಳಬಾರದು ಕೇವಲ ‘‘ಗೋವಿಂದ ಗೋವಿಂದ’’ ಎಂಬ ಘೋಷ ಮಾತ್ರ ಮೊಳಗಬೇಕು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್​ ಚಂದ್ರಬಾಬು ನಾಯ್ಡು(N Chandrababu Naidu) ಹೇಳಿದ್ದಾರೆ. ತಿರುಮಲ ಒಂದು ಪವಿತ್ರ ಕ್ಷೇತ್ರ, ದೇವಸ್ಥಾನದ ಪಾವಿತ್ರ್ಯತೆಯನ್ನು ರಕ್ಷಿಸಬೇಕು ಹೀಗಾಗಿ ತಿರುಪತಿಯಲ್ಲಿ ಏಡುಕುಂಡಲವಾಡ ಸ್ವಾಮಿ ಗೋವಿಂದ ಗೋವಿಂದ ಎಂಬ ಘೋಷ ಮಾತ್ರ ಕೇಳಬೇಕೆಂದರು.

ಗುರುವಾರ ಬೆಳಗ್ಗೆ ಚಂದ್ರಬಾಬು ನಾಯ್ಡು ಕುಟುಂಬದ ಜತೆಯಲ್ಲಿ ತಿಮ್ಮಪ್ಪನ ದರ್ಶನ ಪಡೆದರು. ತಿರುಮಲ ಬೆಟ್ಟದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಟ್ಟದಲ್ಲಿ ಭಕ್ತರಿಗೆ ಶಾಂತಿಯುತವಾಗಿ ತಂಗಲು ಹಾಗೂ ದರ್ಶನಕ್ಕೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಕಳೆದ ಐದು ವರ್ಷಗಳಲ್ಲಿ ಪವಿತ್ರ ದೇವಾಲಯದ ಪಾವಿತ್ರ್ಯತೆ ಹಾಳಾಗಿದೆ, ಶಕ್ತಿಶಾಲಿಗಳ ಮನೆ ಬಾಗಿಲಿಗೆ ದೇವರನ್ನು ಕೊಂಡೊಯ್ಯುವುದನ್ನು ಎಂದಾದರೂ ನೀವು ಕೇಳಿದ್ದೀರಾ. ಇಲ್ಲಿ ಡ್ರಗ್ಸ್​, ಮದ್ಯ ಮಾಂಸ ಸೇವನೆಗೆ ಅವಕಾಶ ಕಲ್ಪಿಸಲಾಗಿತ್ತು, ಕಳೆದ ಐದು ವರ್ಷಗಳಲ್ಲಿ ಬೆಟ್ಟದಲ್ಲಿ ಆಹಾರದ ಗುಣಮಟ್ಟವೂ ಹದಗೆಟ್ಟಿದೆ, ತಿರುಮಲ ಬೆಟ್ಟದಲ್ಲಿ ಗೋವಿಂದ ಗೋವಿಂದ ಘೋಷ ಕೇಳಬೇಕೇ ಹೊರತು ರಾಜಕೀಯ ಘೋಷಣೆಗಳಲ್ಲ ಎಂದರು.

ಮತ್ತಷ್ಟು ಓದಿ: AP CM Swearing in Ceremony: ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಚಂದ್ರಬಾಬು ನಾಯ್ಡು

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಚಂದ್ರಬಾಬು ನಾಯ್ಡು ವಿಶೇಷ ವಿಮಾನದಲ್ಲಿ ಕುಟುಂಬ ಸಮೇತ ತಿರುಮಲಕ್ಕೆ ಹೋಗಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:00 pm, Thu, 13 June 24