Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗು ಬಿಡ್ಡ ಚಂದ್ರಬಾಬು ಕುಟುಂಬದಲ್ಲಿ ಸಂಭ್ರಮ; ಎನ್​ಟಿಆರ್​​​ ಪ್ರತಿಮೆಗೆ ಪುಷ್ಟನಮನ ಸಲ್ಲಿಸಿದ ನಾಯ್ಡು

ತೆಲುಗು ಬಿಡ್ಡ ಚಂದ್ರಬಾಬು ಕುಟುಂಬದಲ್ಲಿ ಸಂಭ್ರಮ; ಎನ್​ಟಿಆರ್​​​ ಪ್ರತಿಮೆಗೆ ಪುಷ್ಟನಮನ ಸಲ್ಲಿಸಿದ ನಾಯ್ಡು

TV9 Web
| Updated By: ಸಾಧು ಶ್ರೀನಾಥ್​

Updated on: Jun 05, 2024 | 10:50 AM

ಪ್ಪಂನಲ್ಲಿ ಚಂದ್ರಬಾಬು ಗೆದ್ದಿದ್ದು, ಮಂಗಳಗಿರಿಯಲ್ಲಿ ಲೋಕೇಶ್ ಗೆದ್ದಿದ್ದಾರೆ. ನಂದಮೂರಿ ಕುಟುಂಬದಲ್ಲಿ ಹಿಂದೂಪುರದಿಂದ ಬಾಲಕೃಷ್ಣ ಮತ್ತು ವಿಶಾಖದಿಂದ ಭರತ್ ಸಂಸದರಾಗಿ ಗೆದ್ದಿದ್ದಾರೆ. ಚಂದ್ರಬಾಬು 1,18,623 ಮತಗಳೊಂದಿಗೆ ಅತ್ಯಧಿಕ ಮುನ್ನಡೆ ಸಾಧಿಸಿದ್ದಾರೆ.

ಮೈತ್ರಿಕೂಟದ ಗೆಲುವು ಬಹುತೇಕ ಖಚಿತವಾಗುತ್ತಿದ್ದಂತೆ ತೆಲುಗು ಬಾಂಧವರು ಸಂಭ್ರಮಿಸುತ್ತಿದ್ದಾರೆ. ಚಂದ್ರಬಾಬು ನಾಯ್ಡು ಕುಟುಂಬ ಸದಸ್ಯರೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಇನ್ನು ಮಾವ ಮಾಜಿ ಮುಖ್ಯಮಂತ್ರಿ, ಹಿರಿಯ ನಟ ನಂದಮೂರಿ ತಾರಕರಾಮರಾವ್​​ ಅವರ ಪ್ರತಿಮೆಗೆ ಪುಷ್ಟನಮನ ಸಲ್ಲಿಸಿದರು. ಒಟ್ಟು 175 ವಿಧಾನಸಭಾ ಕ್ಷೇತ್ರಗಳ ಪೈಕಿ ಆಡಳಿತಾರೂಢ ವೈಸಿಪಿ 13 ಸ್ಥಾನಗಳನ್ನು ಮಾತ್ರ ಗಳಿಸಿದ್ದು, ಮೈತ್ರಿಕೂಟ 162 ಸ್ಥಾನಗಳನ್ನು ಗೆದ್ದಿದೆ.

ಕುಪ್ಪಂನಲ್ಲಿ ಚಂದ್ರಬಾಬು ಗೆದ್ದಿದ್ದು, ಮಂಗಳಗಿರಿಯಲ್ಲಿ ಲೋಕೇಶ್ ಗೆದ್ದಿದ್ದಾರೆ. ನಂದಮೂರಿ ಕುಟುಂಬದಲ್ಲಿ ಹಿಂದೂಪುರದಿಂದ ಬಾಲಕೃಷ್ಣ ಮತ್ತು ವಿಶಾಖದಿಂದ ಭರತ್ ಸಂಸದರಾಗಿ ಗೆದ್ದಿದ್ದಾರೆ. ಚಂದ್ರಬಾಬು 1,18,623 ಮತಗಳೊಂದಿಗೆ ಅತ್ಯಧಿಕ ಮುನ್ನಡೆ ಸಾಧಿಸಿದ್ದಾರೆ.

ಮಂಗಳಗಿರಿಯಲ್ಲಿ ನಾರಾ ಲೋಕೇಶ್ 1,20,101 ಮತಗಳು, ಹಾಗೂ ಹಿಂದೂಪುರದಿಂದ ಸ್ಪರ್ಧಿಸಿದ್ದ ಬಾಲಕೃಷ್ಣ 1,07,250 ಮತಗಳನ್ನು ಪಡೆದಿದ್ದಾರೆ. ವಿಶಾಖ ಸಂಸದ ಸ್ಥಾನದಿಂದ ಸ್ಪರ್ಧಿಸಿದ್ದ ಭರತ್ ಕೂಡ ಬಹುಮತದಿಂದ ಮುನ್ನಡೆ ಸಾಧಿಸಿದ್ದಾರೆ.