Sign In

By signing in or creating an account, you agree with Associated Broadcasting Company's Terms & Conditions and Privacy Policy.

Narendra Modi: ಕಾರ್ಯಕರ್ತರ ಸಭೆಯಲ್ಲಿ ತಾಯಿಯನ್ನು ನೆನೆದು ಮೋದಿ ಭಾವುಕ

Narendra Modi: ಕಾರ್ಯಕರ್ತರ ಸಭೆಯಲ್ಲಿ ತಾಯಿಯನ್ನು ನೆನೆದು ಮೋದಿ ಭಾವುಕ

ವಿವೇಕ ಬಿರಾದಾರ
|

Updated on: Jun 05, 2024 | 7:44 AM

Narendra Modi Speech in Delhi BJP Office: ಚುನಾವಣಾ ಫಲಿತಾಂಶದ ಬಳಿಕ ಮಂಗಳವಾರ ಸಾಯಂಕಾಲ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಯಿತು. ಸಭೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಈ ವೇಳೆ ತಾಯಿಯನ್ನ ನೆನೆದು ಭಾವುಕರಾದರು.

ಸುದೀರ್ಘ ಎರಡು ತಿಂಗಳುಗಳ ಕಾಲ ನಡೆದ ಲೋಕಸಭೆ ಚುನಾವಣೆಗೆ ತೆರೆ ಬಿದ್ದಿದೆ. ಮಂಗಳವಾರ (ಜೂ.04) ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. 400 ಪಾರ್​ ಕನಸು ಕಂಡಿದ್ದ ಎನ್​ಡಿಎಗೆ 300ರ ಗಡಿ ದಾಟಲು ಸಹ ಸಾಧ್ಯವಾಗಿಲ್ಲ. ಎನ್​ಡಿಎ 292 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಈ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಪ್ಲಸ್​ ಆಗಿದೆ. ಇಂಡಿಯಾ ಮೈತ್ರಿಕೂಟ 234 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಚುನಾವಣಾ ಫಲಿತಾಂಶದ ಬಳಿಕ ಮಂಗಳವಾರ ಸಾಯಂಕಾಲ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ನನ್ನ ತಾಯಿ ನಿಧನದ ಬಳಿಕ ಇದು ಮೊದಲನೇ ಚುನಾವಣೆಯಾಗಿದೆ. ಆದರೆ, ದೇಶದ ಕೋಟಿ ಕೋಟಿ ತಾಯಿ, ಸಹೋದರಿಯರ ಆಶಿರ್ವಾದ ನನಗೆ ತಾಯಿ ಇಲ್ಲ ಎಂಬ ದುಃಖವನ್ನು ಮರೆಯುವಂತೆ ಮಾಡಿದೆ. ನಾನು ದೇಶದ ಯಾವುದೇ ಪ್ರದೇಶಕ್ಕೆ ಹೋದರೂ ಮಾತೆಯರು, ಸಹೋದರಿಯರು ಮತ್ತು ಮಕ್ಕಳು ನನಗೆ ಅಭೂತಪೂರ್ವ ಸ್ನೇಹ ಮತ್ತು ಆಶಿರ್ವಾದ ನೀಡಿದ್ದಾರೆ. ದೇಶದ ಇತಿಹಾಸದಲ್ಲಿ ಮಹಿಳೆಯರಿಂದ ಮತದಾನದ ರೆಕಾರ್ಡ್​ ಬ್ರೇಕ್​ ಆಗಿದೆ” ಎಂದು ಹೇಳಿದರು.