NEET-UG Row: 1,563 ನೀಟ್​ ಅಭ್ಯರ್ಥಿಗಳ ಗ್ರೇಸ್​ ಅಂಕಗಳು ರದ್ದು, ಜೂನ್ 23ಕ್ಕೆ ಮರು ಪರೀಕ್ಷೆ

ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆಯೇ ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ ಮತ್ತೊಮ್ಮೆ ವಿಚಾರಣೆ ನಡೆಯಿತು. ಈ ಸಂದರ್ಭದಲ್ಲಿ, NEET-UG 2024 ರ 1,563 ಅಭ್ಯರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (NTA) ನಿರ್ಧಾರವನ್ನು ಹಿಂಪಡೆಯಲಾಗಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಅಂತಹ ಅಭ್ಯರ್ಥಿಗಳಿಗೆ ಜೂನ್ 23 ರಂದು ಮರು ಪರೀಕ್ಷೆಗೆ ಹಾಜರಾಗುವ ಆಯ್ಕೆಯನ್ನು ನೀಡಿದೆ. ಜುಲೈ 6 ರಂದು ನಡೆಯಲಿರುವ ಕೌನ್ಸೆಲಿಂಗ್ ಅನ್ನು ನಿಷೇಧಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.

NEET-UG Row: 1,563 ನೀಟ್​ ಅಭ್ಯರ್ಥಿಗಳ ಗ್ರೇಸ್​ ಅಂಕಗಳು ರದ್ದು, ಜೂನ್ 23ಕ್ಕೆ ಮರು ಪರೀಕ್ಷೆ
ಸುಪ್ರೀಂಕೋರ್ಟ್​
Follow us
ನಯನಾ ರಾಜೀವ್
|

Updated on:Jun 13, 2024 | 11:42 AM

ನೀಟ್ ಪರೀಕ್ಷೆ(NEET Exam)ಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆಯೇ ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ ಮತ್ತೊಮ್ಮೆ ವಿಚಾರಣೆ ನಡೆಯಿತು. ಈ ಸಂದರ್ಭದಲ್ಲಿ, NEET-UG 2024 ರ 1,563 ಅಭ್ಯರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (NTA) ನಿರ್ಧಾರವನ್ನು ಹಿಂಪಡೆಯಲಾಗಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಅಂತಹ ಅಭ್ಯರ್ಥಿಗಳಿಗೆ ಜೂನ್ 23 ರಂದು ಮರು ಪರೀಕ್ಷೆಗೆ ಹಾಜರಾಗುವ ಆಯ್ಕೆಯನ್ನು ನೀಡಿದೆ. ಜುಲೈ 6 ರಂದು ನಡೆಯಲಿರುವ ಕೌನ್ಸೆಲಿಂಗ್ ಅನ್ನು ನಿಷೇಧಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.

ನೀಟ್​ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಕೆಯಾಗಿರುವ ಮೂರು ಅರ್ಜಿಗಳ ವಿಚಾರಣೆ ಇಂದು ನಡೆದಿದೆ. ನೀಟ್ ಪರೀಕ್ಷೆ ನಡೆಸುವ ಸಂಸ್ಥೆಯಾಗಿರುವ ಎನ್​ಟಿಎ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ನೀಡಿದ ಗ್ರೇಸ್​ ಮಾರ್ಕ್​ಗಳ ಕುರಿತು ಇಂದು ಸುಪ್ರೀಂಕೋರ್ಟ್​ನಲ್ಲಿ ವಾದ ಮಂಡನೆ ನಡೆಯಿತು.

ಪರೀಕ್ಷೆಯ ರದ್ದತಿ ಹಾಗೂ ಮರು ಪರೀಕ್ಷೆ ಕುರಿತು ಸುಪ್ರೀಂ ವಿಚಾರಣೆ ನಡೆಸಿದ್ದು ಅಂತಿಮವಾಗಿ ಎನ್​ಟಿಎ ನೀಡಿರುವ ಗ್ರೇಸ್​ ಅಂಕಗಳನ್ನು ರದ್ದುಗೊಳಿಸಿ, ಜೂನ್ 23ಕ್ಕೆ ಮರುಪರೀಕ್ಷೆ ನಿರ್ಧಾರ ಕೈಗೊಳ್ಳಲಾಯಿತು.

ಮತ್ತಷ್ಟು ಓದಿ: ನೀಟ್​ ಪರೀಕ್ಷೆ ಅಕ್ರಮ ಪ್ರಕರಣ, ಕೌನ್ಸೆಲಿಂಗ್ ಮುಂದುವರೆಯುತ್ತೆ ಎಂದ ಸುಪ್ರೀಂ, ಎನ್​ಟಿಎಗೆ ನೋಟಿಸ್​ ಜಾರಿ

ಫಿಸಿಕ್ಸ್​ ವಾಲಾ ಸಿಇಒ ಅಲಖ್ ಪಾಂಡೆ ಅವರು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಗ್ರೇಸ್ ಅಂಕಗಳನ್ನು ನೀಡುವ ಎನ್​ಟಿಎ ನಿರ್ಧಾರ ತಪ್ಪು ಎಂದು ಹೇಳಿದ್ದರು.

ಸುಪ್ರೀಂಕೋರ್ಟ್​ ಎನ್​ಟಿಎಗೆ ನೋಟಿಸ್ ಜಾರಿ ಮಾಡಿತ್ತು. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್​-ಯುಜಿ) ವೇಳೆ ಪ್ರಶ್ನೆಪತ್ರಿಕೆ ಸೋರಿಕೆ ವರದಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ ಪರೀಕ್ಷೆಯಲ್ಲಿ ಯಶಸ್ವಿಯಾಗಿರುವ ವಿದ್ಯಾರ್ಥಿಗಳ ಕೌನ್ಸೆಲಿಂಗ್​ ನಿಲ್ಲಿಸಲು ನಿರಾಕರಿಸಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ನ್ಯೂನತೆಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್​ಟಿಎ)ಗೆ ನೋಟಿಸ್ ನೀಡಿತ್ತು.

ನ್ಯಾಯಮೂರ್ತಿ ವಿಕ್ರಮ್ ನಾಥ್​ ಹಾಗೂ ನ್ಯಾಯಮೂರ್ತಿ ಎ ಅಮಾನುಲ್ಲಾ ಅವರ ಪೀಠವು ಜುಲೈ 8 ರಂದು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣಗಳ ಪಟ್ಟಿ ಮಾಡಿದೆ. ಪರೀಕ್ಷೆಯ ಪಾವಿತ್ರ್ಯತೆಯನ್ನು ಪ್ರಶ್ನಿಸಲಾಗಿದೆ ಅದಕ್ಕೆ ನಮಗೆ ಉತ್ತರಗಳು ಬೇಕು ಎಂದು ಹೇಳಿದರು.

2024ನೇ ಸಾಲಿನ ನೀಟ್​-ಯುಜಿ ಪರೀಕ್ಷೆಯನ್ನು ಹೊಸದಾಗಿ ನಡೆಸಬೇಕು ಎಂದು ಕೋರಿ ಹಲವು ಅಭ್ಯರ್ಥಿಗಳು ಸುಪ್ರೀಂಕೋರ್ಟ್​ಗೆ ಮೊರೆ ಹೋಗಿದ್ದರು.

2024ನೇ ಸಾಲಿನ ನೀಟ್​ ಪರೀಕ್ಷೆಯು ಕಳೆದ ತಿಂಗಳ 5 ರಂದು ನಡೆದಿತ್ತು, ದೇಶದಲ್ಲಿರುವ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಆಯುಷ್ ಹಾಗೂ ಇತರೆ ಕೋರ್ಸ್​ಗಳ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಈ ಪರೀಕ್ಷೆಯನ್ನು ನಡೆಸಿತ್ತು.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:31 am, Thu, 13 June 24