ಹೈದರಾಬಾದ್: ಒಂದು ದಿನದ ಮಟ್ಟಿಗೆ 13 ಟಿಡಿಪಿ ಶಾಸಕರನ್ನು ಅಮಾನತು ಮಾಡಿ ಆಂಧ್ರ ವಿಧಾನಸಭೆ ಸ್ಪೀಕರ್ ತಮ್ಮಿನೆನಿ ಸೀತಾರಾಮ್ ಆದೇಶ ಹೊರಡಿಸಿದ್ದಾರೆ.
ಇಂದಿನಿಂದ (ನ.30) ಅರಂಭಗೊಂಡ ಆಂಧ್ರಪ್ರದೇಶ ವಿಧಾನಸಭೆ ಅಧಿವೇಶನದಲ್ಲಿ ನಿವಾರ್ ಚಂಡಮಾರುತದ ಸಂತ್ರಸ್ತರಿಗೆ ಪರಿಹಾರ ನೀಡುವಂ ವಿಚಾರದಲ್ಲಿ ಟಿಡಿಪಿ ಮತ್ತು ವೈಸಿಪಿ ಪಕ್ಷಗಳ ಸದಸ್ಯರ ನಡುವೆ ವಾಗ್ವಾದ ಶುರುವಾಗಿತ್ತು. ಈ ಹಿನ್ನೆಲೆಯಲ್ಲಿ ಸದನದ ಪೋಡಿಯಂ ಬಳಿ ಟಿಡಿಪಿ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಹಾಗೂ ಟಿಡಿಪಿ ಶಾಸಕರು ಪ್ರತಿಭಟನೆ ನಡೆಸಿದರು.
ಸಭೆ ನಡೆಸಲು ಅಡ್ಡಿಯುಂಟು ಮಾಡಿದ ಹಿನ್ನೆಲೆಯಲ್ಲಿ ಸ್ಪೀಕರ್ ತಮ್ಮಿನೆನಿ ಸೀತಾರಾಮ್, ಚಂದ್ರಬಾಬು ನಾಯಡು ಸೇರಿ 13 ಶಾಸಕರನ್ನು ಸದನದಿಂದ ಹೊರಗೆ ಕಳುಹಿಸುವಂತೆ ಆದೇಶಿಸಿದರು. ಸ್ಪೀಕರ್ ಆದೇಶದ ಮೇರೆಗೆ ಮಾರ್ಶಲ್ಗಳು, ಶಾಸಕರನ್ನು ಹೊತ್ತೊಯ್ದು ಸದನದಿಂದ ಹೊರಗೆ ಬಿಟ್ಟು ಬಂದರು.
ಚಂದ್ರಬಾಬು ನಾಯ್ಡು, ಅಚ್ಚಂನಾಯ್ಡು, ರಾಮಾನಾಯ್ಡು, ಅಶೋಕ, ವೆಲಗಪೂಡಿ ರಾಮಕೃಷ್ಣ, ಪಯ್ಯಾವುಲ ಕೇಶವ, ಬಾಲ ವೀರಾಂಜನೇಸ್ವಾಮಿ, ಆದಿರೆಡ್ಡಿ ಭವಾನಿ, ಅನಗಾನಿ ಸತ್ಯಪ್ರಸಾದ, ಜೋಗೇಶ್ವರರಾವ್, ಏಲೂರಿ ಸಾಂಬಶಿವರಾವ್, ರಾಮ್‌ರಾಜು, ಗದ್ದ ರಾಂಮೋಹನ್ ಹೊರಹಾಕಲ್ಪಟ್ಟ ಟಿಡಿಪಿ ಶಾಸಕರು.
ಇದನ್ನೂ ಓದಿ: ಚಂದ್ರಬಾಬು ನಾಯ್ಡು ‘ಅಮರಾವತಿ’ ಕನಸಿಗೆ ಕೊಡಲಿ ಏಟು ಕೊಟ್ಟ ಸಿಎಂ ಜಗನ್ ರೆಡ್ಡಿ
Published On - 5:37 pm, Mon, 30 November 20