ನವದೆಹಲಿ: ಕೋವಿಡ್ ಅಟ್ಟಹಾಸದಿಂದ ಮುಂದೂಡಲ್ಪಟ್ಟಿದ್ದ ಚಂದ್ರಯಾನ-3 ಮಿಷನ್ಗೆ 2022ರ ಅಂತ್ಯದ ವೇಳೆಗೆ ಇಸ್ರೋ (ISRO) ಚಾಲನೆ ನೀಡುವ ಸಾಧ್ಯತೆಯಿದೆ. ಎಲ್ಲ ಸರಿಯಾಗಿದ್ದರೆ 2021ರ ಡಿಸೆಂಬರ್ನಲ್ಲಿ ಇಸ್ರೋದ ಬಹುನಿರೀಕ್ಷಿತ ಭಾರತದ ಮೊಟ್ಟ ಮೊದಲ ಮಾನವ ರಹಿತ ಗಗನಯಾನ ಉಡಾವಣೆಗೊಳ್ಳಬೇಕಿತ್ತು. ಆದರೆ, ಕೊರೋನಾದಿಂದಾಗಿ ಆ ಯೋಜನೆ ಮುಂದೂಡಲ್ಪಟ್ಟಿದ್ದು, 2022ರ ಜುಲೈ-ಆಗಸ್ಟ್ ಒಳಗೆ ಚಂದ್ರಯಾನ-3 ಚಾಲನೆಗೊಳ್ಳಲಿದೆ.
ಚಂದ್ರಯಾನ-3 ಗಗನಯಾನಕ್ಕೆ 2022ರ ಮೂರನೇ ತ್ರೈಮಾಸಿಕದ ವೇಳೆಗೆ ಚಾಲನೆ ನೀಡಲಾಗುವುದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಇಂದು ಹೇಳಿದ್ದಾರೆ. ಇಂದು ಲೋಕಸಭಾ ಕಲಾಪದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಜಿತೇಂದ್ರ ಸಿಂಗ್, ಕೊರೋನಾದಿಂದಾಗಿ ಚಂದ್ರಯಾನ-3ರ ಯೋಜನೆ ಮುಂದೂಡಲ್ಪಟ್ಟಿದೆ. ಅದಕ್ಕಾಗಿ ಇಸ್ರೋದ ವಿಜ್ಞಾನಿಗಳು ಈಗಾಗಲೇ ಸಿದ್ಧತೆ ನಡೆಸಿದ್ದಾರೆ. ಮುಂದಿನ ವರ್ಷ ಆಗಸ್ಟ್ ವೇಳೆಗೆ ಚಂದ್ರಯಾನ-3 ಉಡಾವಣೆಯಾಗಲಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಚಂದ್ರನ ಮೇಲ್ಭಾಗದಲ್ಲಿ ಲ್ಯಾಂಡರ್ ಅನ್ನು ಇಳಿಸುವ ಇಸ್ರೋದ ಚಂದ್ರಯಾನ-2ಗೆ 2019ರ ಜುಲೈ ತಿಂಗಳಲ್ಲಿ ಚಾಲನೆ ನೀಡಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಇಸ್ರೋದ ಪ್ರಯತ್ನ ವಿಫಲವಾಗಿತ್ತು. ಆದರೂ ಆಗಸ್ಟ್ ತಿಂಗಳಲ್ಲಿ ಆರ್ಬಿಟರ್ ಅನ್ನು ಚಂದ್ರನ ಕಕ್ಷೆಯಲ್ಲಿ ಇಳಿಸುವಲ್ಲಿ ಇಸ್ರೋ ಯಶಸ್ವಿಯಾಗಿತ್ತು.
ಚಂದ್ರಯಾನ-3 ಗಗನಯಾನಕ್ಕೆ ಈ ವರ್ಷದ ಡಿಸೆಂಬರ್ನಲ್ಲಿ ಮುಹೂರ್ತ ಫಿಕ್ಸ್ ಆಗಿತ್ತು. ಆದರೆ, ಕೊರೋನಾದಿಂದಾಗಿ ಅದು ಮುಂದೂಡಿಕೆಯಾಗಿತ್ತು. ಈ ಗಗನಯಾನಕ್ಕೆ 10,000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. 2022ರ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾಗುತ್ತವೆ. ಈ ನೆನಪಿನಲ್ಲಿ ಭಾರತದ ಬಹು ನಿರೀಕ್ಷಿತ ಚಂದ್ರಯಾನವೂ ಉಡಾವಣೆಯಾಗಲಿದೆ.
ಇದನ್ನೂ ಓದಿ: Chandrayaan 2 ಜುಲೈ 22 ಇಸ್ರೊಗೆ ಐತಿಹಾಸಿಕ ದಿನ; ಚಂದ್ರಯಾನ-2 ಬಗ್ಗೆ ಇಲ್ಲಿದೆ ಆಸಕ್ತಿಕರ ಸಂಗತಿ
(Chandrayaan 3 to be launched by ISRO in third quarter of 2022 Union Minister Jitendra Singh Announces)
Published On - 5:06 pm, Wed, 28 July 21