ಚೆನ್ನೈನ 5 ಖ್ಯಾತ ಖಾಸಗಿ ಶಾಲೆ(Private School)ಗಳಿಗೆ ಅಪರಿಚಿತ ವ್ಯಕ್ತಿಯೊಬ್ಬ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ(Bomb Threat)ಯ ಸಂದೇಶ ರವಾನಿಸಿದ್ದು ಆತಂಕ ಸೃಷ್ಟಿಸಿದೆ. ಗೋಪಾಲಪುರಂ, ಜೆಜೆ ನಗರ, ಆರ್‌ಎ ಪುರಂ, ಅಣ್ಣಾನಗರ, ಪರಿಮಳ ಶಾಲೆಗಳಿಗೆ ಬೆದರಿಕೆ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸ್ನಿಫರ್ ಡಾಗ್‌ಗಳ ಸಹಾಯದಿಂದ ಪರೀಕ್ಷೆ ನಡೆಸುತ್ತಿದೆ. ಶಾಲಾ ಆಡಳಿತ ಮಂಡಳಿಯು ಸಂದೇಶ ಕಳುಹಿಸಿದ ನಂತರ ಪೋಷಕರು ಬಂದು ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ಈ ನಡುವೆ ಯಾರೂ ಭಯಪಡಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ. ಇ-ಮೇಲ್ ಮೂಲಕ ಬೆದರಿಕೆ ಕಳುಹಿಸಿದವರ ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ.
ಈ ಬಗ್ಗೆ ಮೆಟ್ರೋಪಾಲಿಟನ್ ಚೆನ್ನೈ ಕಾರ್ಪೊರೇಷನ್ ಪೊಲೀಸ್ ಎಕ್ಸ್ ಸೈಟ್ ಪ್ರಕಟಿಸಿರುವ ವರದಿಯಲ್ಲಿ, ಚೆನ್ನೈ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಶಿಕ್ಷಣ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಇರುವ ಇ-ಮೇಲ್ ಗಳು ಬಂದಿವೆ. ಮೇಲ್‌ನಲ್ಲಿ ಉಲ್ಲೇಖಿಸಲಾದ ಶಿಕ್ಷಣ ಸಂಸ್ಥೆಗಳಿಗೆ ಸ್ನಿಫರ್ ಡಾಗ್‌ಗಳ ತಂಡವನ್ನು ರವಾನಿಸಲಾಗಿದೆ. ಇ-ಮೇಲ್‌ಗಳನ್ನು ಕಳುಹಿಸಿದ ಆರೋಪಿಯನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಈ ಮಧ್ಯೆ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ, ಎಂದು ಚೆನ್ನೈ ಕಾರ್ಪೊರೇಷನ್ ಪೊಲೀಸರು ತಿಳಿಸಿದ್ದಾರೆ.
ದೆಹಲಿ ಪಬ್ಲಿಕ್ ಶಾಲೆ ಬಾಂಬ್ ಬೆದರಿಕೆ
ರಾಷ್ಟ್ರ ರಾಜಧಾನಿ ದೆಹಲಿಯ ಆರ್‌ಕೆ ಪುರಂ ಪ್ರದೇಶದ ದೆಹಲಿ ಪಬ್ಲಿಕ್ ಸ್ಕೂಲ್‌ಗೆ ಶುಕ್ರವಾರ ಬಾಂಬ್ ಬೆದರಿಕೆ(Bomb Threat) ಕರೆ ಬಂದಿದೆ. ಸುಮಾರು 10 ಗಂಟೆಗೆ ಕರೆ ಸ್ವೀಕರಿಸಿದ ನಂತರ ಮಕ್ಕಳನ್ನು ಸ್ಥಳಾಂತರಿಸಲಾಗಿದೆ. ಕರೆ ಬಂದ ಬಗ್ಗೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಕಳೆದ ಎರಡು ಗಂಟೆಗಳಿಂದ ಶೋಧ ಕಾರ್ಯ ನಡೆಯುತ್ತಿದೆ. ಆದರೆ, ಪೊಲೀಸರಿಗೆ ಇದುವರೆಗೆ ಯಾವುದೇ ಅನುಮಾನಾಸ್ಪದ ಸಂಗತಿಗಳು ಪತ್ತೆಯಾಗಿಲ್ಲ.
ಮತ್ತಷ್ಟು ಓದಿ: ಮುಂಬೈ: 6 ಕಡೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಂಗೆ ಬೆದರಿಕೆ ಕರೆ
ಮುಂಬೈನ 6 ಸ್ಥಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಕರೆ
ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಬಾಂಬ್ ಸ್ಫೋಟಿಸುವುದಾಗಿ ಅಪರಿಚಿತರು ಬೆದರಿಕೆ ಹಾಕಿದ್ದಾರೆ. ಮುಂಬೈನ 6 ಸ್ಥಳಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಮುಂಬೈ ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಂಗೆ ಅಪರಿಚಿತರು ಬೆದರಿಕೆ ಕರೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಗರದ 6 ಸ್ಥಳಗಳಲ್ಲಿ ಬಾಂಬ್‌ಗಳನ್ನು ಇರಿಸಲಾಗಿದೆ ಎಂಬ ಸುದ್ದಿ ತಿಳಿದ ತಕ್ಷಣ ಮುಂಬೈ ಸಂಚಾರ ಪೊಲೀಸ್ ನಿಯಂತ್ರಣ ಕೊಠಡಿಗೆ ತಲುಪಿತ್ತು.
ಈ ಮಾಹಿತಿಯನ್ನು ತಕ್ಷಣವೇ ಮುಂಬೈ ಪೊಲೀಸರಿಗೆ ನೀಡಲಾಯಿತು. ಮಾಹಿತಿ ಪಡೆದ ಮುಂಬೈ ಪೊಲೀಸರು ಸಂದೇಶ ಕಳುಹಿಸಿದವ ಬಗ್ಗೆ ಮಾಹಿತಿ ಪತ್ತೆ ಹಚ್ಚಲು ಆರಂಭಿಸಿದ್ದಾರೆ.
ಮುಂಬೈ ನಗರದಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆಯ ಫೋನ್ ಅಥವಾ ಸಂದೇಶ ಬಂದಿರುವುದು ಇದೇ ಮೊದಲಲ್ಲ. ಈ ಮೊದಲು ಮುಂಬೈ ಪೊಲೀಸ್ ಮತ್ತು ಕಂಟ್ರೋಲ್ ರೂಂಗೆ ಬೆದರಿಕೆಗಳು ಬಂದಿವೆ. ಆದರೆ ಯಾವುದನ್ನೂ ನೆಗ್ಲೆಕ್ಟ್ ಮಾಡುವಂತಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:57 pm, Thu, 8 February 24