ಚೆನ್ನೈನ ಮುತ್ತುಕಾಡುನಲ್ಲಿ ಬರಲಿದೆ ತೇಲುವ ರೆಸ್ಟೋರೆಂಟ್, ಏನಿದರ ವಿಶೇಷತೆ?
ಚೆನ್ನೈನಿಂದ ಸುಮಾರು 36 ಕಿಮೀ ದೂರದಲ್ಲಿರುವ ಮುತ್ತುಕಾಡು ಬೋಟ್ ಹೌಸ್ ಈಗಾಗಲೇ ಪ್ರಮುಖ ಆಕರ್ಷಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.
ಚೆನ್ನೈ ನಗರದ ನಿವಾಸಿಗಳು ತೇಲುವ ರೆಸ್ಟೋರೆಂಟ್‌ನಲ್ಲಿ(floating restaurant) ಊಟದ ಅನುಭವವನ್ನು ಶೀಘ್ರದಲ್ಲೇ ಅನುಭವಿಸಬಹುದು. ಚೆನ್ನೈ ಪೂರ್ವ ಕರಾವಳಿ ರಸ್ತೆಯಲ್ಲಿರುವ ಮುತ್ತುಕಾಡು (Muttukadu)ಬೋಟ್ ಹೌಸ್‌ನಲ್ಲಿ ಹಿನ್ನೀರಿನ ನೌಕಾಯಾನ ನಡೆಸುವಾಗ ಈ ರೆಸ್ಟೋರೆಂಟ್ನ ಅನುಭವವನ್ನು ಸವಿಯಲಿದ್ದಾರೆ. ರಾಜ್ಯ ಪ್ರವಾಸೋದ್ಯಮ ಸಚಿವ ಕೆ.ರಾಮಚಂದ್ರನ್ ಶುಕ್ರವಾರ ದೋಣಿ ನಿರ್ಮಿಸಲು ಅಡಿಮರ ಹಾಕಿ ಚಾಲನೆ ನೀಡಿದ್ದಾರೆ. 125 ಅಡಿ ಉದ್ದ ಮತ್ತು 25 ಅಡಿ ಅಗಲದ ಬೋಟ್‌ನಲ್ಲಿ ಡಬಲ್ ಡೆಕ್ ರೆಸ್ಟೋರೆಂಟ್ ನಿರ್ಮಿಸುವ ಕೆಲಸ ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಸಚಿವರು ಹೇಳಿದರು, ಇದು ರಾಜ್ಯದ ಮೊದಲ ತೇಲುವ ರೆಸ್ಟೋರೆಂಟ್ ಆಗಲಿದೆ. ದೋಣಿಯ ಮೊದಲ ಮಹಡಿಯು ತೆರೆದ ಸ್ಥಳವನ್ನು ಹೊಂದಿರುತ್ತದೆ . ಹೊರಗಿನ ದೃಶ್ಯ ಆನಂದಿಸಲು ಮತ್ತು ಊಟ ಮಾಡಲು 100 ಜನರಿಗೆ ಆಸನವನ್ನು ವ್ಯವಸ್ಥೆ ಇದೆ. ದೋಣಿಯ ಕೆಳಗಿನ ಡೆಕ್ ನಲ್ಲಿ ಕೊಠಡಿಗಳು, ಅಡುಗೆಮನೆ ಮತ್ತು ಊಟದ ಪ್ರದೇಶವಿದ್ದು ಇದು ಹವಾನಿಯಂತ್ರಿತವಾಗಿರುತ್ತದೆ.
மாண்புமிகு தமிழ்நாடு முதல்வர் @mkstalin அவர்களின் நல்லாசிகளுடன், இன்று செங்கல்பட்டு மாவட்டம், முட்டுக்காடு படகு இல்லத்தில் மிதவை படகு உணவகம் கட்டுமான பணியை துவக்கிவைத்த போது. உடன் திருப்போரூர் MLA திரு.எஸ் பாலாஜி மற்றும் அரசு அலுவலர்கள் கலந்து கொண்டனர்.@arivalayam @DMKNilgiris pic.twitter.com/E5YRrWlBZq
— K Ramachandran (@Ramachandranmla) March 24, 2023
ತಮಿಳುನಾಡು ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮತ್ತು ಕೊಚ್ಚಿನ್‌ನ ಗ್ರ್ಯಾಂಡ್ನೂರ್ ಮೆರೈನ್ ಇಂಟರ್‌ನ್ಯಾಷನಲ್‌ನಿಂದ ಖಾಸಗಿ ಮತ್ತು ಸಾರ್ವಜನಿಕ ಕೊಡುಗೆ ಯೋಜನೆಯಡಿ ಈ ಯೋಜನೆಯನ್ನು 5 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತದೆ. ಇದು ನೆರೆಯ ಕೇರಳದ ಹಿನ್ನೀರಿನಲ್ಲಿ ಸಾಕಷ್ಟು ಪ್ರಸಿದ್ಧವಾಗಿರುವ ತೇಲುವ ರೆಸ್ಟೋರೆಂಟ್‌ಗಳಂತೆಯೇ ಇರುತ್ತದೆ. ಇದು ಮುತ್ತುಕಾಡುಗೆ ಭೇಟಿ ನೀಡಲು ಮತ್ತು ಹಿನ್ನೀರಿನಲ್ಲಿ ಸವಾರಿ ಮಾಡಲು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತದೆ ಎಂದು ಸಚಿವರು ಭರವಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ನನ್ನ ಹೆಸರು ಸಾವರ್ಕರ್ ಅಲ್ಲ; ನಾನು ಗಾಂಧಿ, ಕ್ಷಮೆ ಕೇಳಲ್ಲ: ರಾಹುಲ್ ಗಾಂಧಿ
ಚೆನ್ನೈನಿಂದ ಸುಮಾರು 36 ಕಿಮೀ ದೂರದಲ್ಲಿರುವ ಮುತ್ತುಕಾಡು ಬೋಟ್ ಹೌಸ್ ಈಗಾಗಲೇ ಪ್ರಮುಖ ಆಕರ್ಷಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ರೋಯಿಂಗ್, ವಿಂಡ್‌ಸರ್ಫಿಂಗ್, ವಾಟರ್ ಸ್ಕೀಯಿಂಗ್ ಮತ್ತು ಸ್ಪೀಡ್‌ಬೋಟ್ ರೈಡಿಂಗ್ ಅನ್ನು ನೀಡುವ ಜಲಕ್ರೀಡೆ ಸೌಲಭ್ಯವನ್ನು ಹೊಂದಿದೆ. ಇದು ತಮಿಳುನಾಡು ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಒಡೆತನದಲ್ಲಿದ್ದು, ನಿಗಮವೇ ನಿರ್ವಹಿಸುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ