ಚೆನ್ನೈ: ನಾವು ನಿಜವಾಗಲೂ ಏನನ್ನಾದರೂ ಬಯಸಿದರೆ ಜಗತ್ತೇ ಅದಕ್ಕೆ ಸಂಚು ರೂಪಿಸುತ್ತೆದೆಯಂತೆ. ಹೀಗೊಂದು ಮಾತು ಚಾಲ್ತಿಯಲ್ಲಿದೆ. ಚೆನ್ನೈ ವಿದ್ಯಾರ್ಥಿನಿಯೊಬ್ಬಳ ಬಾಳಿನಲ್ಲಿ ಇದು ಅಕ್ಷರಶಃ ನಿಜವಾಗಿದೆ. ಆಕೆ ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ. ಈ ವಿಶೇಷ ಕಥೆಯ ಬಗ್ಗೆ ಇಲ್ಲಿದೆ ಮಾಹಿತಿ.
ಚೆನ್ನೈ ಸಮೀಪದಲ್ಲಿರುವ ಹಳ್ಳಿಯಿಂದ ಬಾಲಕಿಯೊಬ್ಬಳು ಬಿ.ಎಸ್ಸಿ ಅಗ್ರಿಕಲ್ಚರ್ ಕೋರ್ಸ್ ಕೌನ್ಸೆಲಿಂಗ್ನಲ್ಲಿ ಪಾಲ್ಗೊಳ್ಳುವವರಿದ್ದರು. ಚೆನ್ನೈನಲ್ಲೇ ಕೌನ್ಸಲಿಂಗ್ ನಡೆಯುತ್ತಿತ್ತು. ಹೀಗಾಗಿ ಅನಕ್ಷರಸ್ಥೆ ತಾಯಿ ಜೊತೆ ಮಗಳು ಚೆನ್ನೈನ ಅಣ್ಣಾ ಕೃಷಿ ವಿಶ್ವವಿದ್ಯಾಲಯಕ್ಕೆ ಎತ್ತಿನ ಗಾಡಿಯಲ್ಲಿ ಬಂದಿದ್ದರು. ಅಲ್ಲಿಗೆ ಬಂದಾಗ ಆಕೆಗೆ ಶಾಕಿಂಗ್ ಸುದ್ದಿ ಒಂದು ಕಾದಿತ್ತು. ಕೌನ್ಸೆಲಿಂಗ್ ಇರುವುದು ಚನ್ನೈನಲ್ಲಿ ಅಲ್ಲ- ಕೊಯಮತ್ತೂರಿನಲ್ಲಿ ಎನ್ನುವ ವಿಚಾರ ಅಲ್ಲಿಗೆ ಬಂದ ಮೇಲೆ ತಿಳಿದಿತ್ತು. ಯಾರೋ ನೀಡಿದ ತಪ್ಪು ಮಾಹಿತಿಯಿಂದ ವಿದ್ಯಾರ್ಥಿನಿ ಸಂಕಷ್ಟಕ್ಕೆ ಈಡಾಗಿದ್ದರು.
ಅಲ್ಲಿಗೆ ಮುಂಜಾನೆ ವಾಕಿಂಗ್ಗೆ ಬರುತ್ತಿದ್ದ ಕೆಲವರು ಆತಂಕದಲ್ಲಿರುವ ತಾಯಿ ಮಗಳನ್ನು ಗಮನಿಸಿದ್ದಾರೆ. ಸಮಸ್ಯೆ ಏನು ಎಂದು ಕೇಳಿದ್ದಾರೆ. ಆಗ ನಡೆದ ಘಟನೆ ಬಗ್ಗೆ ಅವರು ಅಲ್ಲಿಯವರಿಗೆ ವಿವರಿಸಿದ್ದಾರೆ. ಚೆನ್ನೈನಿಂದ ಕೊಯಮತ್ತೂರಿಗೆ ಪ್ರಯಾಣಿಸಲು 9 ಗಂಟೆ ಬೇಕು. ಮುಂಜಾನೆ ಹೊರಟರೂ ಕೌನ್ಸಲಿಂಗ್ ತಲುಪೋದು ಅಸಾಧ್ಯ. ತಾಯಿ-ಮಗಳ ಸ್ಥಿತಿ ನೋಡಿ ಅಲ್ಲಿಯವರು ಮರುಕ ವ್ಯಕ್ತಪಡಿಸಿದ್ದರು.
ಆಗ ನಡೆಯಿತು ಪವಾಡ
ನಿತ್ಯ ಆ ಭಾಗಕ್ಕೆ ವಾಕಿಂಗ್ ಬರುವವರು ಒಂದು ತಂಡ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿನ ಅದೃಷ್ಟ ಎಂಬಂತೆ ಕೊಯಮತ್ತೂರು ಸೆಂಟರ್ನ ಮುಖ್ಯಸ್ಥರ ಪರಿಚಯವಿದ್ದ ಒಬ್ಬರು ಆ ತಂಡದಲ್ಲಿದ್ದರು. ಕೊಯಮತ್ತೂರು ಸೆಂಟರ್ನ ಮುಖ್ಯಸ್ಥರರಿಗೆ ಫೋನ್ ಮಾಡಿ ಹುಡುಗಿ ಬರುವುದು ತಡವಾಗುತ್ತದೆ ಎಂದು ತಿಳಿಸಲಾಗಿತ್ತು. ಅವರಿಗೆ ಪ್ರತ್ಯೇಕ ಸಮಯ ಕೊಡಿ ಎಂದು ಕೋರಲಾಗಿತ್ತು. ಕೌನ್ಸಿಲರ್ ಕೂಡ ಇದಕ್ಕೆ ಒಪ್ಪಿದ್ದರು.
ವಾಕಿಂಗ್ ಬಂದವರಲ್ಲೇ ಒಬ್ಬರು ವಿಮಾನ ನಿಲ್ದಾಣಕ್ಕೆ ತೆರಳಲು ಕಾರ್ ಕಳುಹಿಸಿದ್ದರು. ಮತ್ತೊಬ್ಬರು ವಿಮಾನ ಟಿಕೆಟ್ ಬುಕ್ ಮಾಡಿಕೊಟ್ಟರು. ವಿಮಾನ ನಿಲ್ದಾಣದಿಂದ ಕ್ಯಾಂಪಸ್ಸಿಗೆ ಹೋಗಲು ಕಾರನ್ನು ಮತ್ತೊಬ್ಬರು ವ್ಯವಸ್ಥೆ ಮಾಡಿದ್ದರು. ಅಂತೂ ಆ ವಿದ್ಯಾರ್ಥಿನಿ ಕೌನ್ಸಿಲಿಂಗ್ಗೆ ಹಾಜರಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿ ಆ ಹುಡುಗಿಗೆ BSC ಅಗ್ರಿಕಲ್ಚರ್ ಸೀಟು ಸಿಕ್ಕಿದೆ.
Delhi Chalo ರೈತರಿಗೆ ದಿಲ್ಜಿತ್ ದೊಸಾಂಜ್ ಸಹಾಯ: 1 ಕೋಟಿ ದಾನ ನೀಡಿದ್ರೂ ಪ್ರಚಾರ ಬಯಸದ ನಟ