ಎಂಕೆ ಸ್ಟಾಲಿನ್ರ 70ನೇ ಹುಟ್ಟುಹಬ್ಬದಂದು ಚೆನ್ನೈನಲ್ಲಿ ಮೊದಲ ಬಾರಿಗೆ ನಡೆಯಲಿದೆ ಜಲ್ಲಿಕಟ್ಟು
ಕಾರ್ಯಕ್ರಮಕ್ಕೆ ಸುಮಾರು 20,000 ಜನರು ಬರುವ ನಿರೀಕ್ಷೆಯಿದೆ ಎಂದು ಸಚಿವರು ಹೇಳಿದರು. ಒಂದು ತಿಂಗಳ ಹಿಂದೆಯೇ ಸಿದ್ಧತೆ ಆರಂಭವಾಗಿದ್ದು, ಜನವರಿ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ.
ಸಾಮಾನ್ಯವಾಗಿ ಪೊಂಗಲ್ (Pongal) ಸಮಯದಲ್ಲಿ ತಮಿಳುನಾಡಿನ ಗ್ರಾಮೀಣ ಭಾಗಗಳಲ್ಲಿ ನಡೆಯುವ ಜನಪ್ರಿಯ ಗೂಳಿ ಪಳಗಿಸುವ ಕ್ರೀಡೆಯಾದ ಜಲ್ಲಿಕಟ್ಟನ್ನು (Jallikattu)ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಅವರ 70 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಮೊದಲ ಬಾರಿಗೆ ಚೆನ್ನೈನಲ್ಲಿ ಆಯೋಜಿಸಲಾಗುವುದು ಎಂದು ಡಿಎಂಕೆ ಸಚಿವರೊಬ್ಬರು ತಿಳಿಸಿದ್ದಾರೆ. ಮಾರ್ಚ್ 5 ರಂದು ಚೆನ್ನೈನ ಹೊರವಲಯದಲ್ಲಿರುವ ಪಡಪ್ಪೈನಲ್ಲಿ ಮೊದಲ ಬಾರಿಗೆ ಜಲ್ಲಿಕಟ್ಟು ಸ್ಪರ್ಧೆ ನಡೆಯಲಿದೆ. ತಮಿಳುನಾಡಿನಾದ್ಯಂತ ಸುಮಾರು 500 ಅತ್ಯುತ್ತಮ ಹೋರಿಗಳು ಮತ್ತು ಗೂಳಿ ಪಳಗಿಸುವವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವು ಚೆನ್ನೈ ನಗರ ಮತ್ತು ಉಪನಗರಗಳ ಜನರ ದೀರ್ಘಕಾಲದ ಆಸೆಯನ್ನು ಪೂರೈಸುತ್ತದೆ ಎಂದು ಗ್ರಾಮೀಣ ಕೈಗಾರಿಕೆಗಳ ಸಚಿವ ಟಿಎಂ ಅನ್ಬರಸನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಸುಮಾರು 20,000 ಜನರು ಬರುವ ನಿರೀಕ್ಷೆಯಿದೆ ಎಂದು ಸಚಿವರು ಹೇಳಿದರು. ಒಂದು ತಿಂಗಳ ಹಿಂದೆಯೇ ಸಿದ್ಧತೆ ಆರಂಭವಾಗಿದ್ದು, ಜನವರಿ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ.
ಉತ್ತಮ ಗೂಳಿಯ ಮಾಲೀಕರಿಗೆ ಕಾರು ಮತ್ತು ಉತ್ತಮ ಹೋರಿ ಪಳಗಿಸುವವರಿಗೆ ಮೋಟಾರ್ ಸೈಕಲ್ ನೀಡಲಾಗುವುದು.
ಈ ವರ್ಷ ಜಲ್ಲಿಕಟ್ಟು ಋತುವು ಪುದುಕೊಟ್ಟೈ ಜಿಲ್ಲೆಯಲ್ಲಿ ಕಳೆದ ವಾರ ಪ್ರಾರಂಭವಾಯಿತು. ಈ ಕ್ರೀಡೆಯು ಸಾಂಪ್ರದಾಯಿಕವಾಗಿ ಅಲಂಗನಲ್ಲೂರು, ಅವನಿಯಪುರಂ, ಮತ್ತು ಮಧುರೈನ ಪಾಲಮೇಡು ಮತ್ತು ದಕ್ಷಿಣ ತಮಿಳುನಾಡಿನ ಇತರ ಗ್ರಾಮಾಂತರ ಹಳ್ಳಿಗಳಲ್ಲಿ ಪೊಂಗಲ್ ಸುಗ್ಗಿಯ ಹಬ್ಬದ ಸಮಯದಲ್ಲಿ ನಡೆಯುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ