ಚೆನ್ನೈನ ವಿದ್ಯುತ್ ಸ್ಥಾವರ ಬಳಿ ಕಟ್ಟಡ ಕುಸಿತ: 9ಕ್ಕೂ ಹೆಚ್ಚು ಸಾವು

Under-construction building collapse at Chennai: ತಮಿಳುನಾಡಿನ ಚೆನ್ನೈ ಸಮೀಪದ ತಿರುವಳ್ಳೂರ್ ಜಿಲ್ಲೆಯಲ್ಲಿರುವ ಎಣ್ಣೋರ್ ಥರ್ಮಲ್ ಪವರ್ ಸ್ಟೇಷನ್​ನಲ್ಲಿ ಭೀಕರ ದುರ್ಘಟನೆ ಸಂಭವಿಸಿದೆ. ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ಕುಸಿದು ಹಲವರು ಸಾವನ್ನಪ್ಪಿದ್ದಾರೆ. ಸ್ಥಳದಲ್ಲೇ ನಾಲ್ವರು ಬಲಿಯಾಗಿದ್ದಾರೆ. ಆಸ್ಪತ್ರೆಗೆ ಸಾಗಿಸುವ ವೇಳೆ ಇನ್ನೂ ಐವರು ನಿಧನರಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರುವ ಅಪಾಯ ಇದೆ.

ಚೆನ್ನೈನ ವಿದ್ಯುತ್ ಸ್ಥಾವರ ಬಳಿ ಕಟ್ಟಡ ಕುಸಿತ: 9ಕ್ಕೂ ಹೆಚ್ಚು ಸಾವು
ನಿರ್ಮಾಣ ಹಂತದ ಕಟ್ಟಡ ಕುಸಿತ

Updated on: Sep 30, 2025 | 10:23 PM

ಚೆನ್ನೈ, ಸೆಪ್ಟೆಂಬರ್ 30: ಚೆನ್ನೈ ಸಮೀಪದ ಎಣ್ಣೋರ್ ಉಷ್ಣ ವಿದ್ಯುತ್ ಸ್ಥಾವರ ಘಟಕದೊಳಗೆ (Ennore Thermal Power Station) ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಹಲವು ಮಂದಿ ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ ಕನಿಷ್ಠ ಒಂಬತ್ತು ಮಂದಿ ಕಾರ್ಮಿಕರು ಈ ದುರ್ಘಟನೆಯಲ್ಲಿ ಬಲಿಯಾಗಿದ್ದಾರೆ. ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದರೆ, ಗಂಭೀರ ಗಾಯಗೊಂಡಿದ್ದ ಐವರು ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

ಇನ್ನೂ ಬಹಳ ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಟಾನ್ಲೀ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿ ಐವರು ಮೃತಪಟ್ಟಿರುವುದಲ್ಲದೆ ಇನ್ನೂ ಕೆಲವರು ಜೀವನ್ಮರಣ ಹೋರಾಟದಲ್ಲಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಇಸ್ರೇಲೀ ಪಠ್ಯಪುಸ್ತಕದಲ್ಲಿ ಭಾರತೀಯ ಯೋಧರ ಗುಣಗಾನ; ಹೈಫಾ ನಗರ ಮುಕ್ತಗೊಳಿಸಿದ್ದು ಬ್ರಿಟಿಷರಲ್ಲ, ಭಾರತೀಯ ಸೈನಿಕರು

ಎಣ್ಣಾರ್ ಥರ್ಮಲ್ ಪವರ್ ಸ್ಟೇಷನ್ ಚೆನ್ನೈ ಸಮೀಪದ ತಿರುವಳ್ಳೂರು ಜಿಲ್ಲೆಯ ಮೀಂಜೂರು ಬಳಿಯ ಊರನಂಪೆಡು ಗ್ರಾಮದಲ್ಲಿದೆ. ಈ ವಿದ್ಯುತ್ ಸ್ಥಾವರದ ನಾಲ್ಕನೇ ಹಂತದ ವಿಸ್ತರಣಾ ಕಾಮಗಾರಿ ಕೆಲವು ವರ್ಷಗಳಿಂದಲೂ ನಡೆಯುತ್ತಿದೆ. ಉತ್ತರ ಭಾರತ ಮೂಲದ ಬಹಳಷ್ಟು ಕಾರ್ಮಿಕರು ಕೆಲಸ ಮಾಡುತ್ತಿದ್ದರು.

ಇಂದು ಮಂಗಳವಾರ ಬಾಯ್ಲರ್ ವಿಭಾಗದಲ್ಲಿ ಬೃಹತ್ ಕಮಾನು ನಿರ್ಮಾಣ ಕಾರ್ಯದಲ್ಲಿ 30ಕ್ಕೂ ಹೆಚ್ಚು ಕಾರ್ಮಿಕರು ನಿರತರಾಗಿದ್ದರು. ಮುಂಗಾಗದಲ್ಲಿ ನಿರ್ಮಿಸಲಾಗಿದ್ದ ಸ್ಕಫೋಲ್ಡ್ ಕಳಚಿ ಬಿದ್ದಿತು. ಅನೇಕ ಕಾರ್ಮಿಕರು ಅವಶೇಷಗಳಡಿ ಸಿಲುಕಿಕೊಂಡರೆನ್ನಲಾಗಿದೆ.

ಇದನ್ನೂ ಓದಿ: ಮುಸ್ಲಿಮರೇ ಆಗಲಿ, ಯಾರೇ ಆಗಲಿ ಬಂಗಾಳಿಗಳಿಗೆ ಹಿಂದೂ ಸಂಸ್ಕೃತಿಯೇ ಅಡಿಪಾಯ: ತಸ್ಲಿಮಾ ನಸ್ರೀನ್

ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಚೆನ್ನೈನ ರಾಯಪುರಂನಲ್ಲಿರುವ ಸ್ಟಾನ್ಲೀ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಐವರು ಸಾವನ್ನಪ್ಪಿದರು. ಇಲ್ಲಿಯವರೆಗೆ ಸಾವಿನ ಸಂಖ್ಯೆ 9ಕ್ಕೆ ಏರಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:10 pm, Tue, 30 September 25