Gayatri Prajapati: ಯುಪಿ ಜೈಲಿನಲ್ಲಿ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಮೇಲೆ ಹಲ್ಲೆ, ಚಾಕು ಇರಿತ
ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಜೈಲಿನಲ್ಲಿರುವ ಸಮಾಜವಾದಿ ಪಕ್ಷದ ಮಾಜಿ ಶಾಸಕ ಮತ್ತು ಮಾಜಿ ಸಚಿವ ಗಾಯತ್ರಿ ಪ್ರಸಾದ್ ಪ್ರಜಾಪತಿ ಮೇಲೆ ಸಹ ಕೈದಿಯೊಬ್ಬ ಹಲ್ಲೆ(Attack) ನಡೆಸಿರುವ ಘಟನೆ ನಡೆದಿದೆ. ಪ್ರಜಾಪತಿ ಅವರ ತಲೆಗೆ ಮತ್ತೊಬ್ಬ ಕೈದಿ ಹಲವು ಬಾರಿ ಹಲ್ಲೆ ನಡೆಸಿದ್ದಾನೆ.ದಾಳಿಯಲ್ಲಿ ಅವರಿಗೆ ಗಂಭೀರ ಗಾಯಗಳಾಗಿವೆ. ಜೈಲು ಅಧಿಕಾರಿಗಳು ತಕ್ಷಣ ಪ್ರಥಮ ಚಿಕಿತ್ಸೆ ನೀಡಿದ್ದಾರೆ.

ಲಕ್ನೋ, ಅಕ್ಟೋಬರ್ 01: ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಜೈಲಿನಲ್ಲಿರುವ ಸಮಾಜವಾದಿ ಪಕ್ಷದ ಮಾಜಿ ಶಾಸಕ ಮತ್ತು ಮಾಜಿ ಸಚಿವ ಗಾಯತ್ರಿ ಪ್ರಸಾದ್ ಪ್ರಜಾಪತಿ ಮೇಲೆ ಸಹ ಕೈದಿಯೊಬ್ಬ ಹಲ್ಲೆ(Attack) ನಡೆಸಿರುವ ಘಟನೆ ನಡೆದಿದೆ. ಪ್ರಜಾಪತಿ ಅವರ ತಲೆಗೆ ಮತ್ತೊಬ್ಬ ಕೈದಿ ಹಲವು ಬಾರಿ ಹಲ್ಲೆ ನಡೆಸಿದ್ದಾನೆ.ದಾಳಿಯಲ್ಲಿ ಅವರಿಗೆ ಗಂಭೀರ ಗಾಯಗಳಾಗಿವೆ. ಜೈಲು ಅಧಿಕಾರಿಗಳು ತಕ್ಷಣ ಪ್ರಥಮ ಚಿಕಿತ್ಸೆ ನೀಡಿದ್ದಾರೆ.
ಅವರ ಸ್ಥಿತಿ ಈಗ ಸ್ಥಿರವಾಗಿದೆ ಎಂದು ವರದಿಯಾಗಿದೆ. ಈ ಘಟನೆಯು ಜೈಲಿನ ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಘಟನೆಯ ನಂತರ, ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಗಾಯತ್ರಿ ಪ್ರಜಾಪತಿ ಅರ ಮೇಲೆ ಜೈಲಿನಲ್ಲಿ ನಡೆದ ಮಾರಕ ದಾಳಿ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು.
ಉತ್ತರ ಪ್ರದೇಶದಲ್ಲಿ ಎಲ್ಲಿಯೂ ಯಾರೂ ಸುರಕ್ಷಿತವಾಗಿಲ್ಲ. ಈ ದಾಳಿಯು ಗಾಯತ್ರಿಯವರ ಸುರಕ್ಷತೆಯ ಬಗ್ಗೆ ಮಾತ್ರವಲ್ಲದೆ ಇಡೀ ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಅಖಿಲೇಶ್ ಹೇಳಿದರು. ಈ ವಿಷಯದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು ಮತ್ತು ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದರು.
ಮತ್ತಷ್ಟು ಓದಿ: ಮುಂಬೈ: ತಂದೆ, ಅಜ್ಜನನ್ನು ಕೊಂದು ಚಿಕ್ಕಪ್ಪನ ಮೇಲೂ ಹಲ್ಲೆ ನಡೆಸಿದ ಯುವಕ
ಸಮಾಜವಾದಿ ಪಕ್ಷದ ರಾಷ್ಟ್ರೀಯ ವಕ್ತಾರ ಫಕ್ರುಲ್ ಹಸನ್ ಚಂದ್ ಕೂಡ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಜೈಲಿನಲ್ಲಿರುವ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಅವರ ಮೇಲಿನ ದಾಳಿಯ ಸುದ್ದಿ ಚಿಂತೆಗೀಡುಮಾಡಿದೆ.ಜೈಲು ಆಡಳಿತವು ಮಾಜಿ ಸಚಿವರಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡಬೇಕು ಎಂದು ಅವರು ಬರೆದಿದ್ದಾರೆ.ಜೈಲುಗಳಲ್ಲಿರುವ ಕೈದಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ ಮತ್ತು ಈ ನಿರ್ಲಕ್ಷ್ಯವನ್ನು ಸಹಿಸಲಾಗುವುದಿಲ್ಲ ಎಂದು ಚಂದ್ ಹೇಳಿದ್ದಾರೆ.
ಜೈಲಿನ ಬ್ಯಾರಕ್‌ನಲ್ಲಿ ಈ ದಾಳಿ ನಡೆದಿದೆ.ಸ್ವಚ್ಛಗೊಳಿಸುವ ಸಮಯದಲ್ಲಿ ಗಾಯತ್ರಿ ಪ್ರಜಾಪತಿ ಮತ್ತೊಬ್ಬ ಕೈದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ ಎಂದು ವರದಿಯಾಗಿದೆ. ಕೋಪಗೊಂಡ ಕೈದಿ ಕತ್ತರಿ ತೆಗೆದುಕೊಂಡು ಗಾಯತ್ರಿ ಪ್ರಜಾಪತಿಯ ತಲೆಗೆ ಪದೇ ಪದೇ ಹಲ್ಲೆ ನಡೆಸಿದ್ದಾರೆ.
ಇತರ ಕೈದಿಗಳು ಮತ್ತು ಕಾವಲುಗಾರರು ಎಚ್ಚರಿಕೆ ನೀಡಿದ ನಂತರ ದಾಳಿಕೋರನನ್ನು ಬಂಧಿಸಲಾಯಿತು. ಆರೋಪಿ ಕೈದಿಯನ್ನು ಕಠಿಣ ವಿಚಾರಣೆ ನಡೆಸಲಾಗುತ್ತಿದೆ ಮತ್ತು ಅವನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜೈಲು ಸೂಪರಿಂಟೆಂಡೆಂಟ್ ತಿಳಿಸಿದ್ದಾರೆ.
ಗಾಯತ್ರಿ ಪ್ರಸಾದ್ ಪ್ರಜಾಪತಿ ಅವರು ಅಖಿಲೇಶ್ ಯಾದವ್ ಸರ್ಕಾರದಲ್ಲಿ ಸಾರಿಗೆ, ಗಣಿಗಾರಿಕೆ ಮತ್ತು ನೀರಾವರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅತ್ಯಾಚಾರ ಪ್ರಕರಣದಲ್ಲಿ ಅವರು 2017 ರಿಂದ ಜೈಲಿನಲ್ಲಿದ್ದಾರೆ. ಸಮಾಜವಾದಿ ಪಕ್ಷವು ರಾಜ್ಯ ಸರ್ಕಾರವನ್ನು ಟೀಕಿಸಿದ್ದು, ಈ ದಾಳಿಯನ್ನು ಪಿತೂರಿ ಎಂದು ಕರೆದಿದೆ. ಕಳೆದ ಒಂಬತ್ತು ವರ್ಷಗಳಿಂದ ಗಾಯತ್ರಿ ಅವರ ಮೇಲೆ ಸುಳ್ಳು ಪ್ರಕರಣಗಳ ಮೂಲಕ ಒತ್ತಡ ಹೇರಲಾಗುತ್ತಿದೆ ಮತ್ತು ಈಗ ಅವರ ಜೀವಕ್ಕೆ ಅಪಾಯವಿದೆ ಎಂದು ಪಕ್ಷ ಹೇಳಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




