AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಸ್ಲಿಮರೇ ಆಗಲಿ, ಯಾರೇ ಆಗಲಿ ಬಂಗಾಳಿಗಳಿಗೆ ಹಿಂದೂ ಸಂಸ್ಕೃತಿಯೇ ಅಡಿಪಾಯ: ತಸ್ಲಿಮಾ ನಸ್ರೀನ್

Taslima Nasreen writes on Bengali culture: ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದಲ್ಲಿರುವ ಬಂಗಾಳಿಗಳಿಗೆ ಹಿಂದು ಸಂಸ್ಕೃತಿಯೇ ಮೂಲವಾಗಿದೆ. ಹಾಗಂತ ಬರಹಗಾರ್ತಿ ತಸ್ಲಿಮಾ ನಸ್ರೀನ್ ಹೇಳಿದ್ದಾರೆ. ಬಂಗಾಳದ ಹಿಂದೂ, ಮುಸ್ಲಿಮ್, ಕ್ರೈಸ್ತರು, ನಾಸ್ತಿಕರು ಯಾರೇ ಆಗಲೀ ಬಹುತೇಕ ಎಲ್ಲರ ಪೂರ್ವಿಕರು ಭಾರತೀಯ ಹಿಂದುವೇ ಎಂದಿದ್ದಾರೆ. ಚಿತ್ರ ಸಾಹಿತಿ ಜಾವೇದ್ ಅಖ್ತರ್ ಅವರು ಉತ್ತರಪ್ರದೇಶದ ಅವಧ್​ನಲ್ಲಿರುವ ಗಂಗಾ ಜುಮುನಿ ತೆಹಜೀಬ್ ಸಂಸ್ಕೃತಿಯನ್ನೂ ಉಲ್ಲೇಖಿಸಿದ್ದಾರೆ.

ಮುಸ್ಲಿಮರೇ ಆಗಲಿ, ಯಾರೇ ಆಗಲಿ ಬಂಗಾಳಿಗಳಿಗೆ ಹಿಂದೂ ಸಂಸ್ಕೃತಿಯೇ ಅಡಿಪಾಯ: ತಸ್ಲಿಮಾ ನಸ್ರೀನ್
ತಸ್ಲಿಮಾ ನಸ್ರೀನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 30, 2025 | 7:45 PM

Share

ನವದೆಹಲಿ, ಸೆಪ್ಟೆಂಬರ್ 30: ಹಿಂದೂ ಸಂಸ್ಕೃತಿಯೇ ಬಂಗಾಳಿಗಳ ಗುರುತು ಎಂದು ಬಾಂಗ್ಲಾದೇಶ ಮೂಲದ ಬರಹಗಾರ್ತಿ ತಸ್ಲಿಮಾ ನಸ್ರೀನ್ (Taslima Nasreen) ಹೇಳಿದ್ದಾರೆ. ಬಾಂಗ್ಲಾದೇಶದಲ್ಲಿರುವ ಮುಸ್ಲಿಮರನ್ನೂ ಒಳಗೊಂಡಂತೆ ಬಂಗಾಳಿಗಳ ಗುರುತಿಗೆ ಹಿಂದೂ ಸಂಸ್ಕೃತಿಯೇ ಮೂಲವಾಗಿದೆ ಎಂಬುದು ತಸ್ರೀನ್ ಅವರ ಅಭಿಪ್ರಾಯ.

‘ಬಂಗಾಳ ಸಂಸ್ಕೃತಿಗೆ ಮೂಲವಾಗಿರುವುದು ಹಿಂದೂ ಸಂಸ್ಕೃತಿಯೇ. ಇದನ್ನು ಮುಚ್ಚಿಡುವಂಥದ್ದು ಏನೂ ಇಲ್ಲ. ಇತಿಹಾಸದ ವಿವಿಧ ಹಂತದಲ್ಲಿ ನಾವು ಬಂಗಾಳಿಗಳು ಯಾವುದೇ ಧರ್ಮ ಅಥವಾ ತತ್ವವನ್ನು ಅಪ್ಪಿಕೊಂಡರೂ ನಮ್ಮ ರಾಷ್ಟ್ರೀಯ ಗುರುತು ಭಾರತವೇ ಆಗಿದೆ. ಭಾರತದ ಹಿಂದೂಗಳು, ಬೌದ್ಧರು, ಕ್ರೈಸ್ತರು, ಮುಸ್ಲಿಮರು, ಅಥವಾ ನಾಸ್ತಿಕರು, ಬಹುತೇಕ ಎಲ್ಲರ ಪೂರ್ವಿಕರು ಭಾರತೀಯ ಹಿಂದೂಗಳೇ ಆಗಿದ್ದಾರೆ’ ಎಂದು ಬಾಂಗ್ಲಾದೇಶದಿಂದ ಗಡೀಪಾರಾಗಿ ಭಾರತದ ಆಶ್ರಯದಲ್ಲಿರುವ ತಸ್ಲಿಮಾ ನಸ್ರೀನ್ ವಿವರಿಸಿದ್ದಾರೆ.

ಇದನ್ನೂ ಓದಿ: ಟಿಸಿಎಸ್​ನಲ್ಲಿ ಕೆಲಸ ಕಳೆದುಕೊಳ್ಳುವ ಉದ್ಯೋಗಿಗಳ ಸಂಖ್ಯೆ 12 ಸಾವಿರವಾ, 30 ಸಾವಿರವಾ?

‘ಒಬ್ಬ ಬಂಗಾಳಿಯು ಮುಸ್ಲಿಮನೇ ಆಗಿರಲಿ, ಆದರೆ ಅವನ ಸಂಸ್ಕೃತಿಯು ಅರೇಬಿಕ್ ಆಗಿರುವುದಿಲ್ಲ. ಆತನದ್ದು ಬಂಗಾಳಿ ಸಂಸ್ಕೃತಿ ಆಗಿರುತ್ತದೆ. ಆ ಸಂಸ್ಕೃತಿಗೆ ಮೂಲವಾಗಿರುವುದು ಹಿಂದೂ ಸಂಪ್ರದಾಯ. ಡೋಲು, ಸಂಗೀತ, ನೃತ್ಯ ಇವೆಲ್ಲವೂ ಬಂಗಾಳೀ ಸಂಸ್ಕೃತಿಯನ್ನು ಅಭಿವ್ಯಕ್ತಪಡಿಸುತ್ತವೆ. ಇದನ್ನೇ ಬಂಗಾಳಿ ಎನ್ನುವುದು. ಇದನ್ನು ನಿರಾಕರಿಸುವುದು ತನ್ನ ಅಸ್ತಿತ್ವ ನಿರಾಕರಿಸಿಕೊಂಡಂತೆ’ ಎಂದು ಲಜ್ಜಾ ಕಾದಂಬರಿಯ ಕರ್ತೃವೂ ಆದ ತಸ್ಲಿಮಾ ತಿಳಿಸಿದ್ದಾರೆ.

ಗಂಗಾ ಜಮುನಿ ತೆಹಜೀಬ್ ಸಂಸ್ಕೃತಿ ಮುಂದಿಟ್ಟ ಜಾವೇದ್ ಅಖ್ತರ್

ತಸ್ಲಿಮಾ ನಸ್ರೀನ್ ಅವರ ಬಂಗಾಳಿ ಸಂಸ್ಕೃತಿ ವಿಚಾರಕ್ಕೆ ಖ್ಯಾತ ಚಿತ್ರ ಸಾಹಿತಿ ಜಾವೇದ್ ಅಖ್ತರ್ ಸ್ಪಂದಿಸಿದ್ದಾರೆ. ಭಾರತೀಯ ಪರಂಪರೆಗಳ ಮೇಲೆ ಪರ್ಷಿಯನ್ ಮತ್ತು ಮಧ್ಯ ಏಷ್ಯನ್ ಸಂಸ್ಕೃತಿಗಳ ಪ್ರಭಾವ ಇರುವುದನ್ನು ಎತ್ತಿ ತೋರಿಸಿದ್ದಾರೆ.

ಇದನ್ನೂ ಓದಿ: ಸಮಗ್ರ ಪರಿಷ್ಕರಣೆ ನಂತರ ಬಿಹಾರ ಮತದಾರರ ಅಂತಿಮ ಪಟ್ಟಿ ಬಿಡುಗಡೆ ಮಾಡಿದ ಚುನಾವಣಾ ಆಯೋಗ

‘ಪಾಶ್ಚಿಮಾತ್ಯ ಸಂಸ್ಕೃತಿ ರೀತಿಯಲ್ಲಿ ಪರ್ಷಿಯನ್ ಮತ್ತು ಮಧ್ಯ ಏಷ್ಯನ್ ಸಂಸ್ಕೃತಿಗಳು ಹಾಗೂ ಭಾಷೆಗಳು ನಮ್ಮ ಅಗತ್ಯಕ್ಕೆ ತಕ್ಕಂತೆ ನಮ್ಮ ಸಂಸ್ಕೃತಿ ಮತ್ತು ಭಾಷೆಗಳ ಮೇಲೆ ಪ್ರಭಾವ ಬೀರಿವೆ’ ಎಂದ ಅವರು, ಬಂಗಾಳಿಗಳ ಉಪನಾಮಗಳು ಪರ್ಷಿಯನ್ ಮೂಲದ್ದವೆಂಬ ಸಂಗತಿಯನ್ನು ಉಲ್ಲೇಖಿಸಿದ್ದಾರೆ.

ಹಾಗೆಯೇ, ಉತ್ತರಪ್ರದೇಶದ ಅವಧ್ ಪ್ರದೇಶದಲ್ಲಿರುವ ಗಂಗಾ ಜಮುನಿ ತೆಹಜೀಬ್ ಸಂಸ್ಕೃತಿಯನ್ನು ಎತ್ತಿ ತೋರಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ