Chhatrasal Stadium Murder Case ಕೊಲೆ ಪ್ರಕರಣದಲ್ಲಿ ಒಲಿಂಪಿಕ್ ಕುಸ್ತಿಪಟು ಸುಶೀಲ್ ಕುಮಾರ್‌ಗೆ ಜಾಮೀನು ನಿರಾಕರಣೆ

| Updated By: ರಶ್ಮಿ ಕಲ್ಲಕಟ್ಟ

Updated on: Oct 05, 2021 | 7:54 PM

Sushil Kumar: 38 ವರ್ಷದ ಕುಸ್ತಿಪಟು ಸುಶೀಲ್ ಕುಮಾರ್​​ನ್ನು ಮೇ 23 ರಂದು ಬಂಧಿಸಲಾಯಿತು ಮತ್ತು ಜೂನ್ 2 ರಿಂದ ಅವರು ಜೈಲಿನಲ್ಲಿದ್ದಾರೆ. ಸುಶೀಲ್ ಕುಮಾರ್ ಇತರರೊಂದಿಗೆ ಸೇರಿ ಮಾಜಿ ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧಂಕರ್ ಮತ್ತು ಆತನ ಸ್ನೇಹಿತರ ಮೇಲೆ ಮೇ ತಿಂಗಳಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿ ಹಲ್ಲೆ ನಡೆಸಿದ್ದಾರೆ.

Chhatrasal Stadium Murder Case ಕೊಲೆ ಪ್ರಕರಣದಲ್ಲಿ ಒಲಿಂಪಿಕ್ ಕುಸ್ತಿಪಟು ಸುಶೀಲ್ ಕುಮಾರ್‌ಗೆ ಜಾಮೀನು ನಿರಾಕರಣೆ
ಸುಶೀಲ್ ಕುಮಾರ್
Follow us on

ದೆಹಲಿ: ಛತ್ರಸಲ್ ಸ್ಟೇಡಿಯಂ ಕೊಲೆ ಪ್ರಕರಣದಲ್ಲಿ (Chhatrasal Stadium Murder Case) ದೆಹಲಿ ಕೋರ್ಟ್ ಮಂಗಳವಾರ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್​​ಗೆ (Sushil Kumar) ಜಾಮೀನು ನಿರಾಕರಿಸಿದೆ. ಪ್ರಾಸಿಕ್ಯೂಷನ್ ಮತ್ತು ಪ್ರತಿವಾದಿಗಳ ವಾದಗಳನ್ನು ಸುದೀರ್ಘವಾಗಿ ಆಲಿಸಿದ ನಂತರ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶಿವಾಜಿ ಆನಂದ್ ಸುಶೀಲ್ ಕುಮಾರ್ ಗೆ ಪರಿಹಾರ ನೀಡಲು ನಿರಾಕರಿಸಿದರು. ಪೊಲೀಸರು ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ “ತಪ್ಪಿತಸ್ಥನ ಇಮೇಜ್” ಪ್ರಸ್ತುತಪಡಿಸಿದ್ದಾರೆ ಎಂದು ಹೇಳಿ ಸುಶೀಲ್ ಕುಮಾರ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು.

38 ವರ್ಷದ ಕುಸ್ತಿಪಟುವನ್ನು ಮೇ 23 ರಂದು ಬಂಧಿಸಲಾಯಿತು ಮತ್ತು ಜೂನ್ 2 ರಿಂದ ಅವರು ಜೈಲಿನಲ್ಲಿದ್ದಾರೆ. ಸುಶೀಲ್ ಕುಮಾರ್ ಇತರರೊಂದಿಗೆ ಸೇರಿ ಮಾಜಿ ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧಂಕರ್ ಮತ್ತು ಆತನ ಸ್ನೇಹಿತರ ಮೇಲೆ ಮೇ ತಿಂಗಳಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಗೊಳಗಾದ ಸಾಗರ್ ಧಂಕರ್ ಸಾವಿಗೀಡಾಗಿದ್ದರು.

ಕಿರಿಯ ಕುಸ್ತಿಪಟು ಸಾಗರ್ ಧಂಕರ್ ಹತ್ಯೆಯ ಬಗ್ಗೆ ದೆಹಲಿ ಪೊಲೀಸ್ ಚಾರ್ಜ್ ಶೀಟ್ ಸುಶೀಲ್ ಕುಮಾರ್ ಪಿತೂರಿಯ ಕಿಂಗ್ ಪಿನ್ ಎಂದು ಆರೋಪಿಸಿದೆ.

ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಕುಮಾರ್ ಶ್ರೀವಾಸ್ತವ , ಕುಮಾರ್ ಅವರ ಜಾಮೀನನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶಿವಾಜಿ ಆನಂದ್ ಎದುರು  ವಿಡಿಯೊ ದೃಶ್ಯ ತೋರಿಸಿ ನ್ಯಾಯಾಲಯದ ಗಮನ ಸೆಳೆಯುವ ಮೂಲಕ ವಿರೋಧಿಸಿದರು.

“ಅವರು ಬೇಟೆಯಲ್ಲಿ ಕಾಡು ಪ್ರಾಣಿಗಳಂತೆ ವರ್ತಿಸುತ್ತಿದ್ದರು. ಆತ ನೆಲದ ಮೇಲೆ  ಹೊರಳಾಡುತ್ತಿದ್ದರೆ ಇವರು  ನಿರ್ದಯವಾಗಿ ಥಳಿಸಿದರು, ”ಎಂದು ಶ್ರೀವಾಸ್ತವ ನ್ಯಾಯಾಲಯಕ್ಕೆ ತಿಳಿಸಿದರು.

ಸುಶೀಲ್ ಕುಮಾರ್  ಅವರ ವಕೀಲ ಪ್ರದೀಪ್ ರಾಣಾ ಅವರು ಸಲ್ಲಿಸಿದ ಮೊದಲ ಜಾಮೀನು ಅರ್ಜಿಯಾಗಿದ್ದು, ಈ ಪ್ರಕರಣದಲ್ಲಿ ಸಾಕ್ಷಿಗಳಾದ ಪೊಲೀಸ್ ಅಧಿಕಾರಿಗಳು ತಮ್ಮ ಹೇಳಿಕೆಗಳನ್ನು ನೀಡಲು ವಿಳಂಬ ಮಾಡುತ್ತಿರುವರ  ಬಗ್ಗೆ ಪ್ರಶ್ನಿಸಿದರು.

“ಈ ಸಂದರ್ಭದಲ್ಲಿ, ಹನ್ನೆರಡು ವ್ಯಕ್ತಿಗಳು ಹಾಜರಿದ್ದರು ಮತ್ತು ಅವರಲ್ಲಿ ಯಾರೂ ನನ್ನ (ಕುಮಾರ್) ವಿರುದ್ಧ ಹೇಳಿಕೆ ನೀಡಿಲ್ಲ.  ವಾರಗಳ ವಿಳಂಬದ ನಂತರ ಮತ್ತು ಕೆಲವು ಸಂದರ್ಭಗಳಲ್ಲಿ ಒಂದು ತಿಂಗಳ ನಂತರ ಹೇಳಿಕೆ ನೀಡುತ್ತಾರೆ.  ಪೊಲೀಸರು ಏನನ್ನಾದರೂ ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಕಾರಣದಿಂದ ಹೀಗೆ ವಿಳಂಬ ಮಾಡುತ್ತಿದ್ದಾರೆ ಎಂದು ಎಂದು ರಾಣಾ ನ್ಯಾಯಾಲಯದಲ್ಲಿ ವಾದಿಸಿದ್ದಾರೆ.

ಇದನ್ನೂ ಓದಿ: Sushil Kumar: ಕುಸ್ತಿ ಫೈನಲ್‌ನಲ್ಲಿ ರವಿ ದಹಿಯಾಗೆ ಸೋಲು; ತಿಹಾರ್ ಜೈಲಿನಲ್ಲಿ ಭಾವುಕರಾದ ಕುಸ್ತಿಪಟು ಸುಶೀಲ್ ಕುಮಾರ್