ಶ್ರೀನಗರದಲ್ಲಿ ಒಂದೇ ಗಂಟೆಯ ಅವಧಿಯಲ್ಲಿ ಪ್ರತ್ಯೇಕ 3 ಉಗ್ರದಾಳಿ; ಮೂವರು ಬಲಿ

ಜಮ್ಮು ಕಾಶ್ಮೀರದಲ್ಲಿ ಇಂದು ಬೆಚ್ಚಿಬೀಳಿಸುವಂತಹ ಉಗ್ರದಾಳಿ ನಡೆದಿದೆ. ಒಂದೇ ಗಂಟೆಯ ಒಳಗೆ 3 ಪ್ರತ್ಯೇಕ ಉಗ್ರದಾಳಿಗಳು ನಡೆದಿವೆ.

ಶ್ರೀನಗರದಲ್ಲಿ ಒಂದೇ ಗಂಟೆಯ ಅವಧಿಯಲ್ಲಿ ಪ್ರತ್ಯೇಕ 3 ಉಗ್ರದಾಳಿ; ಮೂವರು ಬಲಿ
ಸಾಂಕೇತಿಕ ಚಿತ್ರ

ಕಾಶ್ಮೀರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರ ಮತ್ತೆ ಗುಂಡಿನ ಶಬ್ದಕ್ಕೆ ಬೆಚ್ಚಿಬಿದ್ದಿದೆ. ಒಂದೇ ಗಂಟೆಯ ಅವಧಿಯಲ್ಲಿ ಬರೋಬ್ಬರಿ ಮೂರು ಗುಂಡಿನ ದಾಳಿಯಾಗಿದೆ.  ಇಕ್ಬಾಲ್‌ ಪಾರ್ಕ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮಖನ್‌ಲಾಲ್‌ ಬಿಂದ್ರೂ ಎಂಬ ವ್ಯಾಪಾರಿ ಮತ್ತು ಕಾಶ್ಮೀರಿ ಪಂಡಿತರು ಮೃತಪಟ್ಟಿದ್ದಾರೆ. ಕೆಲ ಹೊತ್ತಿನ ನಂತರ ಉಗ್ರರು ನಡೆಸಿದ ದಾಳಿಯಲ್ಲಿ ಶ್ರೀನಗರದ ಲಾಲ್ ಬಜಾರ್ ಪ್ರದೇಶದ ಪಾನಿಪುರಿ ವ್ಯಾಪಾರಿ ವೀರೇಂದರ್ ಪಾಸ್ವಾನ್ ಮೃತಪಟ್ಟಿದ್ದಾರೆ. ಅವರು ಬಿಹಾರದ ಭಾಗಲಾಪುರ ಮೂಲದವರಾಗಿದ್ದರು. ಎರಡೂ ದಾಳಿಗಳ ತರುವಾಯ ಬಂಡಿಪೋರ್‌ ಪ್ರದೇಶದಲ್ಲಿ ನಡೆದ ಉಗ್ರದಾಳಿಗೆ ಮೊಹಿದ್‌ ಲೋನೆ ಎಂಬ ನಾಗರಿಕ ಸಾವನ್ನಪ್ಪಿದ್ದಾನೆ. ಈ ಮೂರು ದಾಳಿಯ ನಂತರ ಬಳಿಕ ಶ್ರೀನಗರದ ಹೊರವಲಯದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.

ಮಖನ್‌ಲಾಲ್‌ ಬಿಂದ್ರೂ ಅವರನ್ನು ದಾಳಿ ನಡೆದ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು  ದಾಳಿಯ ಸುದ್ದಿ ತಿಳಿದು ಪೊಲಿಸ್ ಸಿಬ್ಬಂದಿ ಆಗಮಿಸುವಷ್ಟರಲ್ಲಿ ದಾಳಿಕೋರರು ಸಹ ಪರಾರಿಯಾಗಿದ್ದರು ಎಂದು ವರದಿಯಾಗಿದೆ. ಸದ್ಯ ಮಖನ್‌ಲಾಲ್‌ ಬಿಂದ್ರೂ ಅವರ ಅಂಗಡಿಯಿದ್ದ ಪ್ರದೇಶದ ಮೇಲೆ ಹದ್ದಿನ ಕಣ್ಗಾವಲು ಇಡಲಾಗಿದೆ. ಮಖನ್‌ಲಾಲ್‌ ಬಿಂದ್ರೂ ಕಾಶ್ಮೀರಿ ಪಂಡಿತರೂ ಆಗಿದ್ದರು.

ಈ ಮೂರು ಉಗ್ರ ದಾಳಿಯ ನಂತರ ಕಣಿವೆ ರಾಜ್ಯದಲ್ಲಿ ಬಂದೋಬಸ್ತ್ ಹೆಚ್ಚಿಸಲಾಗಿದೆ. ಪೊಲೀಸರು ದಾಳಿ ನಡೆಸಿದ ಆತಂಕಕೋರರ ಪತ್ತೆಗೆ ಕಾರ್ಯಾಚರನೆ ಆರಂಭಿಸಿದ್ದಾರೆ.

ಇದನ್ನೂ ಓದಿ:

Viral News: ಜಮ್ಮು ಕಾಶ್ಮೀರಲ್ಲಿ 1,200 ವರ್ಷ ಹಳೆಯದಾದ ಕಪ್ಪು ಕಲ್ಲಿನಿಂದ ಕೆತ್ತಿದ ದುರ್ಗಾದೇವಿ ವಿಗ್ರಹ ಪತ್ತೆ 

Facebook: ಫೇಸ್​ಬುಕ್ ನಿಯಂತ್ರಣಕ್ಕೆ ಸರ್ಕಾರವೇ ನಿಯಂತ್ರಣ ಮಂಡಳಿ ರಚಿಸಲಿ: ಫ್ರಾನ್ಸಿಸ್ ಹೌಗೆನ್ ಆಗ್ರಹ

Read Full Article

Click on your DTH Provider to Add TV9 Kannada