Sign In

By signing in or creating an account, you agree with Associated Broadcasting Company's Terms & Conditions and Privacy Policy.

Facebook: ಫೇಸ್​ಬುಕ್ ನಿಯಂತ್ರಣಕ್ಕೆ ಸರ್ಕಾರವೇ ನಿಯಂತ್ರಣ ಮಂಡಳಿ ರಚಿಸಲಿ: ಫ್ರಾನ್ಸಿಸ್ ಹೌಗೆನ್ ಆಗ್ರಹ

Facebook whistleblower Senate hearing:ಅತ್ಯಂತ ಮುಕ್ತ ಮತ್ತು ಸುರಕ್ಷಿತ ವೇದಿಕೆಯಾಗಿ ಬದಲಾಗಬಹುದು. ಆದರೆ ಅಂತಹ ಆಲ್ಗೋರಿದಂ ಬಳಕೆಗೆ ತರಲು ಸ್ವತಃ ಆ ಸಂಸ್ಥೆಗೇ ಇಷ್ಟವಿಲ್ಲ ಎಂದು ಫ್ರಾನ್ಸಿಸ್ ಹೌಗೆನ್ ಸೆನೆಟ್ ಸಮಿತಿಗೆ ತಿಳಿಸಿದರು.

Facebook: ಫೇಸ್​ಬುಕ್ ನಿಯಂತ್ರಣಕ್ಕೆ ಸರ್ಕಾರವೇ ನಿಯಂತ್ರಣ ಮಂಡಳಿ ರಚಿಸಲಿ: ಫ್ರಾನ್ಸಿಸ್ ಹೌಗೆನ್ ಆಗ್ರಹ
ಫ್ರಾನ್ಸಿಸ್ ಹೌಗೆನ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 05, 2021 | 11:38 PM

ಫೇಸ್​ಬುಕ್​ ನೀತಿ ನಿರೂಪಿಸಲು ಸರ್ಕಾರವೇ ನಿಯಂತ್ರಣ ಮಂಡಳಿಯೊಂದನ್ನು (ರೆಗ್ಯುಲೇಟಿಂಗ್ ಕಮಿಟಿ) ರಚಿಸಬೇಕು. ತಮ್ಮ ಬಳಕೆದಾರರು ಪೋಸ್ಟ್ ಮಾಡಿದ ವಿಷಯಕ್ಕೆ ಸಾಮಾಜಿಕ ಜಾಲತಾಣಗಳು ಹೊಣೆಗಾರ ಆಗದಂತೆ  ರಕ್ಷಿಸುವ ಕಾನೂನಿಗೆ ತಿದ್ದುಪಡಿ ತರಬೇಕು ಎಂದು ಫೇಸ್‌ಬುಕ್‌ ನಾಗರಿಕ ತಪ್ಪು ಮಾಹಿತಿ ತಂಡದ (civic misinformation team) ಮಾಜಿ ಪ್ರಾಡಕ್ಟ್ ಮ್ಯಾನೇಜರ್ ಫ್ರಾನ್ಸಿಸ್ ಹೌಗೆನ್ (Frances Haugen) ಅಮೆರಿಕ ಸೆನೆಟ್ ಉಪ ಸಮಿತಿಯ ಬಳಿ ಆಗ್ರಹಿಸಿದರು. ಇತ್ತೀಚಿಗೆ ಫ್ರಾನ್ಸಿಸ್ ಹೌಗೆನ್ ಫೇಸ್​ಬುಕ್ ಮೇಲೆ ಹೊರಿಸಿದ್ದ ಗಂಭೀರ ಆರೋಪಗಳ ಕುರಿತು ಅಮೆರಿಕ ಸೆನೆಟ್ ಉಪ ಸಮಿತಿಯು ಮಾಹಿತಿ ಸಂಗ್ರಹಿಸಿತು.

ಯುವ ಬಳಕೆದಾರರನ್ನು ಗುರಿಯಾಗಿಟ್ಟುಕೊಂಡು ಫೇಸ್​ಬುಕ್ ರೂಪಿಸುವ ಜಾಹೀರಾತುಗಳನ್ನು ಫೇಸ್​ಬುಕ್​ನಿಂದ ಹೊರತಾದ ಮೂರನೇ ವ್ಯಕ್ತಿ ಅಷ್ಟು ಸುಲಭವಾಗಿ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರ ರಚಿಸಬೇಕಿರುವ ನಿಯಂತ್ರಣ ಸಮಿತಿಯು ಆಲ್ಗೋರಿದಂಗಳ ಕುರಿತು ಅರಿತವರಾಗಿರಬೇಕು. ಫೇಸ್​ಬುಕ್ ಬಳಿ ತನ್ನ ಸಮಸ್ಯೆಗಳನ್ನು ಪರಿಹರಿಹರಿಸಿಕೊಳ್ಳಲು ಇತರರ ಮತ್ತು ಇಡೀ ಜಗತ್ತಿನ ಸಹಾಯ ಅಗತ್ಯ. ಒಬ್ಬಂಟಿಯಾಗಿ ಅದು ತನ್ನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಖಂಡಿತ ಸಾಧ್ಯವಿಲ್ಲ ಎಂದು ಅವರು ಸೆನೆಟ್ ಉಪ ಸಮಿತಿಯ ಎದುರು ಪ್ರತಿಪಾದಿಸಿದರು.

ಸೆನೆಟ್ ಸಮಿತಿಯು ಮಾಹಿತಿ ಸಂಗ್ರಹಿಸುವ ವೇಳೆ ಫ್ರಾನ್ಸಿಸ್ ಹೌಗೆನ್ ಫೇಸ್ಬುಕ್ ಸಂಸ್ಥೆಯ ಇನ್ನಷ್ಟು ಹುಳುಕುಗಳನ್ನು ಸಹ ಬಿಚ್ಚಿಟ್ಟರು. ಮಾದಕ ದ್ರವ್ಯ ಬಳಕೆಯನ್ನು ಉತ್ತೇಜಿಸುವ ಹಲವು ಜಾಹೀರಾತುಗಳನ್ನು ಸದ್ಯ ಬಳಕೆಯಲ್ಲಿರುವ ಕೃತಕ ಬುದ್ಧಿಮತ್ತೆಯ ಫೇಸ್​ಬುಕ್ ಆಲ್ಗೋರಿದಂ ಸೂಕ್ಷ್ಮವಾಗಿ ಪತ್ತೆಹಚ್ಚುವುದಿಲ್ಲ. ಅವುಗಳನ್ನು ಚಿಕ್ಕ ದೋಷಗಳೆಂದು ಮಹತ್ವ ನೀಡದ ಸಂಭವನೀಯತೆಯೂ ಇದೆ.

ಫೇಸ್​ಬುಕ್ ತನ್ನ ವೇದಿಕೆಯಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಹೆಚ್ಚಿನ ಎಂಗೇಜ್ಮೆಂಟ್ ತರುತ್ತದೆ. ಅಲ್ಲದೇ ಬಳಕೆದಾರರು ಅಂತಹುದೇ ವಿಷಯಗಳಲ್ಲಿ ಆಸಕ್ತರಾಗುವಂತೆ ಮಾಡುಬಲ್ಲ ಆಲ್ಗೋರಿದಂ ಹೊಂದಿದೆ ಎಂದು ಫ್ರಾನ್ಸಿಸ್ ಹೌಗೆನ್ ತಿಳಿಸಿದರು.

ಇದನ್ನೂ ಓದಿ: ಫೇಸ್‌ಬುಕ್ ಲಾಭಕ್ಕಾಗಿ ದ್ವೇಷದ ಭಾಷಣ ಪ್ರೋತ್ಸಾಹಿಸುತ್ತದೆ: ವಿಷಲ್​​ಬ್ಲೋವರ್ ಆರೋಪ

Published On - 9:37 pm, Tue, 5 October 21