ನಮ್ಮ ಆಗಸದಲ್ಲಿ ಚೀನಾ ಸೇನೆಯ ಚಟುವಟಿಕೆಗಳ ಬಗ್ಗೆ ಎಚ್ಚರದಿಂದ ಇರಬೇಕಿದೆ ಎಂದ ತೈವಾನ್

TV9 Digital Desk

| Edited By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 05, 2021 | 11:26 PM

ನಮ್ಮ ದ್ವೀಪದ ಸಾರ್ವಭೌಮತೆ ಕಾಪಾಡಿಕೊಳ್ಳಲು ಅಗತ್ಯಬಿದ್ದರೆ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ತೈವಾನ್ ಹೇಳಿದೆ.

ನಮ್ಮ ಆಗಸದಲ್ಲಿ ಚೀನಾ ಸೇನೆಯ ಚಟುವಟಿಕೆಗಳ ಬಗ್ಗೆ ಎಚ್ಚರದಿಂದ ಇರಬೇಕಿದೆ ಎಂದ ತೈವಾನ್
ಚೀನಾ ಮತ್ತು ತೈವಾನ್ (ಪ್ರಾತಿನಿಧಿಕ ಚಿತ್ರ)

ತೈಪೆ: ತೈವಾನ್ ಆಗಸದಲ್ಲಿ ಚೀನಾ ಸೇನೆ ನಡೆಸುತ್ತಿರುವ ಮಿಲಿಟರಿ ಚಟುವಟಿಕೆಗಳ ಅರಿವು ಇದೆ. ಇದರ ಬಗ್ಗೆ ಜಾಗೃತವಾಗಿದ್ದೇವೆ. ನಮ್ಮ ದ್ವೀಪದ ಸಾರ್ವಭೌಮತೆ ಕಾಪಾಡಿಕೊಳ್ಳಲು ಅಗತ್ಯಬಿದ್ದರೆ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ತೈವಾನ್ ಹೇಳಿದೆ.

ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ತೈವಾನ್​ನ ದಕ್ಷಿಣ ಪ್ರಾಂತ್ಯದಲ್ಲಿ ಚೀನಾ ವಾಯುಪಡೆಯ 148 ಯುದ್ಧವಿಮಾನಗಳು ವಾಯುಗಡಿ ಉಲ್ಲಂಘಿಸಿ ಹಾರಾಟ ನಡೆಸಿವೆ. ಚೀನಾ ರಾಷ್ಟ್ರೀಯ ದಿನಾಚರಣೆ ನಡೆಸುವ ಅಕ್ಟೋಬರ್ 1ರ ನಂತರದ ನಾಲ್ಕು ದಿನಗಳಲ್ಲಿ ತೈವಾನ್ ವಾಯುಗಡಿಯಲ್ಲಿ ಚೀನಾ ಯುದ್ಧವಿಮಾನಗಳ ಹಾರಾಟ ಹೆಚ್ಚಾಗಿದೆ ತೈವಾನ್ ಅಂತರರಾಷ್ಟ್ರೀಯ ಸಮುದಾಯದ ಗಮನ ಸೆಳೆದಿತ್ತು.

ಚೀನಾ ಸರ್ಕಾರವು ತೈವಾನ್ ಪ್ರಾಂತ್ಯವನ್ನು ತನ್ನ ದೇಶದ ಭಾಗ ಎಂದು ಹೇಳುತ್ತಿದೆ. ಅಗತ್ಯಬಿದ್ದರೆ ಬಲಪ್ರಯೋಗ ಮಾಡಿಯಾದರೂ ಅದನ್ನು ವಶಪಡಿಸಿಕೊಳ್ಳಲಾಗುವುದು ಎಂದು ಚೀನಾ ಹೇಳುತ್ತಿದೆ. ತನ್ನದು ಸ್ವತಂತ್ರ ದೇಶ ಎಂದು ಹೇಳುತ್ತಿರುವ ತೈವಾನ್, ದೇಶವನ್ನು, ಪ್ರಜಾಪ್ರಭುತ್ವವನ್ನು ರಕ್ಷಿಸಿಕೊಳ್ಳಲು ಅಗತ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡಲಾಗುವುದು ಎಂದು ಚೀನಾಕ್ಕೆ ಎಚ್ಚರಿಕೆ ನೀಡಿದೆ. ಚೀನಾದಿಂದಲೇ ಉದ್ವಿಗ್ವ ಪರಿಸ್ಥಿತಿ ತಲೆದೋರಿದೆ ಎಂದು ತೈವಾನ್ ದೂರಿದೆ.

ಈಚಿನ ದಿನಗಳಲ್ಲಿ ಚೀನಾ ನಡೆಸುತ್ತಿರುವ ಕೆಲ ದುಸ್ಸಾಹಸಗಳು ಅಂತರರಾಷ್ಟ್ರೀಯ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿವೆ. ನುಡಿದಂತೆ ನಡೆಯಬೇಕು ಎಂದು ಚೀನಾಕ್ಕೆ ಜಪಾನ್ ಮತ್ತು ಆಸ್ಟ್ರೇಲಿಯಾ ಸರ್ಕಾರಗಳು ತಾಕೂತು ಮಾಡಿವೆ. ಚೀನಾದ ನಡೆಯನ್ನು ಪ್ರಾದೇಶಿಕ ಅಸ್ಥಿರತೆಯ ಚಟುವಟಿಕೆಗಳು ಎಂದು ಹೇಳಿರುವ ಅಮೆರಿಕ ಸ್ಪಷ್ಟವಾಗಿ ಖಂಡಿಸಿದೆ.

ತೈವಾನ್​ನ ತಾಳ್ಮೆ ಮತ್ತು ತೈವಾನ್​ ರಕ್ಷಣಾ ಪಡೆಗಳ ಪ್ರತಿಕ್ರಿಯೆಯನ್ನು ಪರೀಕ್ಷಿಸುವ ಉದ್ದೇಶದಿಂದಲೇ ಚೀನಾ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಿಸುವಂತೆ ಮಾಡುತ್ತಿದೆ ಎಂದು ತೈವಾನ್ ದೂರಿದೆ.

ತೈವಾನ್ ವಾಯುಗಡಿಯನ್ನು ಉಲ್ಲಂಘಿಸುತ್ತಿರುವ ಚೀನಾದ ದುಸ್ಸಾಹಸಗಳ ಬಗ್ಗೆ ತೈವಾನ್ ಕಟ್ಟೆಚ್ಚರ ವಹಿಸಬೇಕಿದೆ ಎಂದು ತೈವಾನ್​ ಅಧ್ಯಕ್ಷ ಸು ತ್ಸೆಂಗ್-ಚಾಂಗ್ ತಿಳಿಸಿದ್ದಾರೆ. ಚೀನಾ ಪದೇಪದೆ ವಾಯುಗಡಿ ಉಲ್ಲಂಘಿಸಿರುವುದು ಹಾಗೂ ಪ್ರಾದೇಶಿಕ ಶಾಂತಿಗೆ ಭಂಗ ತರುವ ಮೂಲಕ ತೈವಾನ್ ಮೇಲೆ ಒತ್ತಡ ಹೇರಲು ಚೀನಾ ಮುಂದಾಗಿರುವುದು ಇಡೀ ಜಗತ್ತಿಗೆ ಗೊತ್ತಾಗಿದೆ ಎಂದು ಅವರು ತಿಳಿಸಿದ್ದಾರೆ.

(Chinese Air Force Planes Fly over Taiwan Airspace)

ಇದನ್ನೂ ಓದಿ: ಪೀಪಲ್ಸ್​​​ ರಿಪಬ್ಲಿಕ್​ ಆಫ್ ಚೀನಾದ ರಾಷ್ಟ್ರೀಯ ದಿನ; ತೈವಾನ್​ನತ್ತ 38 ಚೀನಾ ಮಿಲಿಟರಿ ವಿಮಾನಗಳ ದಾಂಗುಡಿ

ಇದನ್ನೂ ಓದಿ: ಪೀಪಲ್ಸ್​​​ ರಿಪಬ್ಲಿಕ್​ ಆಫ್ ಚೀನಾದ ರಾಷ್ಟ್ರೀಯ ದಿನ; ತೈವಾನ್​ನತ್ತ 38 ಚೀನಾ ಮಿಲಿಟರಿ ವಿಮಾನಗಳ ದಾಂಗುಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada