ಮಕ್ಕಳಿಗೆ ಕೊರೊನಾ ಲಸಿಕೆ: 3ನೇ ಹಂತದ ಪ್ರಯೋಗ ಮುಕ್ತಾಯ
ತುರ್ತು ಬಳಕೆಗೆ ಅನುಮೋದನೆ ನೀಡಬೇಕೇ, ಬೇಡವೇ ಎಂಬ ಬಗ್ಗೆ ದತ್ತಾಂಶ ಪರಿಶೀಲನೆಯ ನಂತರ ಅನುಮೋದನೆ ನೀಡಬೇಕೇ, ಬೇಡವೇ ಎಂಬ ಬಗ್ಗೆ ಶಿಫಾರಸು ಮಾಡಲಿದೆ
ದೆಹಲಿ: ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಮಹತ್ವದ ವೈದ್ಯಕೀಯ ಪ್ರಯೋಗ ಈ ನಿರ್ಣಾಯಕ ಹಂತಕ್ಕೆ ಬಂದಿದೆ. ಭಾರತ್ ಬಯೊಟೆಕ್ ಕಂಪನಿಯ ಕೊವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳಿಗೆ ನೀಡುವ ಉದ್ದೇಶದಿಂದ ಈ ಪ್ರಯೋಗಗಳು ನಡೆಯುತ್ತಿವೆ. ಮೂರನೇ ಹಂತದ ವೈದ್ಯಕೀಯ ಪ್ರಯೋಗಗಳು ಮುಕ್ತಾಯಗೊಂಡಿದ್ದು, ಶೀಘ್ರದಲ್ಲಿಯೇ ಔಷಧ ಮಹಾನಿಯಂತ್ರಕರಿಗೆ (ಡಿಸಿಜಿಐ) 3ನೇ ಹಂತದ ಪ್ರಯೋಗ ಅಂಕಿಅಂಶಗಳನ್ನು ಸಲ್ಲಿಸಲಾಗುವುದು ಎಂದು ಕಂಪನಿಯ ಮೂಲಗಳು ಹೇಳಿವೆ. ವಿಷಯ ತಜ್ಞರ ಸಮಿತಿಯ ಸಭೆಯಿಂದ ಪರಿಶೀಲನೆ ಬಾಕಿಯಿದೆ. ತುರ್ತು ಬಳಕೆಗೆ ಅನುಮೋದನೆ ನೀಡಬೇಕೇ, ಬೇಡವೇ ಎಂಬ ಬಗ್ಗೆ ದತ್ತಾಂಶ ಪರಿಶೀಲನೆಯ ನಂತರ ಅನುಮೋದನೆ ನೀಡಬೇಕೇ, ಬೇಡವೇ ಎಂಬ ಬಗ್ಗೆ ಶಿಫಾರಸು ಮಾಡಲಿದೆ. 2-17 ವರ್ಷದೊಳಗಿನ ವಯಸ್ಸಿನವರಿಗೆ ನೀಡಬೇಕಿರುವ ಲಸಿಕೆಯ ಬಗ್ಗೆ ಪ್ರಯೋಗಗಳು ನಡೆಯುತ್ತಿವೆ.
ದೇಶದಲ್ಲಿ 18,346 ಹೊಸ ಕೊವಿಡ್ ಪ್ರಕರಣ ಪತ್ತೆ, 263 ಮಂದಿ ಸಾವು ಭಾರತದಲ್ಲಿ ಸೋಮವಾರ 18,346 ಹೊಸ ಕೊವಿಡ್ -19 (Covid-19)ಪ್ರಕರಣಗಳನ್ನು ವರದಿ ಆಗಿದ್ದು, ಇದು 209 ದಿನಗಳಲ್ಲಿ ಕಡಿಮೆ. ದೇಶದಲ್ಲಿ ಸತತ 11 ನೇ ದಿನ ಕೊರೊನಾವೈರಸ್ (Coronavirus ) ಪ್ರಕರಣಗಳು 30,000 ಕ್ಕಿಂತ ಕಡಿಮೆ ಆಗಿದೆ. ಕೇರಳದಲ್ಲಿ 8,850 ಹೊಸ ಪ್ರಕರಣಗಳು ಮತ್ತು 149 ಸಾವುಗಳು ವರದಿಯಾಗಿವೆ. 263 ಹೊಸ ಸಾವುಗಳೊಂದಿಗೆ ಸಾವಿನ ಸಂಖ್ಯೆ 4.49 ಲಕ್ಷಕ್ಕೆ ಏರಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2.52 ಲಕ್ಷದಷ್ಟಿದೆ. ಸಚಿವಾಲಯದ ಪ್ರಕಾರ, ಭಾರತದ ಚೇತರಿಕೆಯ ದರವು ಮಾರ್ಚ್ 2020 ರಿಂದ ಗರಿಷ್ಠ ಮಟ್ಟದಲ್ಲಿದೆ ಮತ್ತು ಪ್ರಸ್ತುತ ಶೇಕಡಾ 97.93 ರಲ್ಲಿದೆ. ಕಳೆದ 24 ಗಂಟೆಗಳಲ್ಲಿ 29,639 ಮಂದಿ ಚೇತರಿಸಿಕೊಂಡಿದ್ದು ಒಟ್ಟು ಚೇತರಿಕೆ 3,31,50,886 ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು 57,53,94,042 ಪರೀಕ್ಷೆಗಳನ್ನು ನಡೆಸಲಾಗಿದೆ.
ಒಂದು ದಿನದಲ್ಲಿ ಜಮ್ಮು ಕಾಶ್ಮೀರದಲ್ಲಿ ಅತ್ಯಧಿಕ ವ್ಯಾಕ್ಸಿನೇಷನ್ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಮವಾರ 1.78 ಲಕ್ಷ ಕೊವಿಡ್ -19 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು. “ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಸೋಮವಾರದವರೆಗೆ ಅತ್ಯಧಿಕ ಲಸಿಕೆ ನೀಡಲಾಗಿದೆ. 1.78 ಲಕ್ಷ ಡೋಸ್‌ಗಳನ್ನು ನೀಡಲಾಯಿತು. ಆರೋಗ್ಯ ಕಾರ್ಯಕರ್ತರು, ವೈದ್ಯರು ಮತ್ತು ಡಿಸಿಗಳ ದಣಿವರಿಯದ ಪ್ರಯತ್ನಕ್ಕೆ ಅಭಿನಂದನೆಗಳು. ಮಾಸ್ಕ್ ಧರಿಸಿ, ಲಸಿಕೆ ಹಾಕಿ, ಸುರಕ್ಷಿತವಾಗಿರಿ ಎಂದು ಸಿನ್ಹಾ ಟ್ವೀಟ್ ಮಾಡಿದ್ದಾರೆ.
(Covaxin 3rd Stage Trial Completed Shortly Submit Report to DCGI)
ಇದನ್ನೂ ಓದಿ: ಕೊವಿಶೀಲ್ಡ್-ಕೊವ್ಯಾಕ್ಸಿನ್ ಲಸಿಕೆಗಳ ಮಿಶ್ರಣ ಕ್ಲಿನಿಕಲ್ ಪ್ರಯೋಗ, ಅಧ್ಯಯನಕ್ಕೆ ಡಿಸಿಜಿಐ ಅನುಮೋದನೆ..