ಛತ್ತೀಸ್​ಗಡ ಕಾಂಗ್ರೆಸ್​​ನಲ್ಲಿ ಕಿತ್ತಾಟ; ‘ಅವರು ನನ್ನನ್ನು ಕೊಲ್ಲುವ ಸಾಧ್ಯತೆ ಇದೆ’ ಎಂದು ರಾಜ್ಯ ಆರೋಗ್ಯ ಸಚಿವರ ವಿರುದ್ಧ ಶಾಸಕನ ಆರೋಪ

| Updated By: ರಶ್ಮಿ ಕಲ್ಲಕಟ್ಟ

Updated on: Jul 26, 2021 | 12:21 PM

Chhattisgarh Congress: ಶನಿವಾರ ರಾತ್ರಿ ಸುರ್ಗುಜಾ ಪ್ರದೇಶದಲ್ಲಿ ಸಿಂಗ್‌ದೇವ್ ಅವರ ಬೆಂಬಲಿಗರು ಸಿಂಗ್ ಬೆಂಗಾವಲು ವಾಹನದ ಮೇಲೆ ದಾಳಿ ಮಾಡಿದ್ದಾರೆ ಎಂಬ ಆರೋಪದ ಬೆನ್ನಲ್ಲೇ ಸಿಂಗ್ ಈ ರೀತಿ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಛತ್ತೀಸ್​ಗಡ ಕಾಂಗ್ರೆಸ್​​ನಲ್ಲಿ ಕಿತ್ತಾಟ; ‘ಅವರು ನನ್ನನ್ನು ಕೊಲ್ಲುವ ಸಾಧ್ಯತೆ ಇದೆ’ ಎಂದು ರಾಜ್ಯ ಆರೋಗ್ಯ ಸಚಿವರ ವಿರುದ್ಧ ಶಾಸಕನ ಆರೋಪ
ಬೃಹಸ್ಪತಿ ಸಿಂಗ್
Follow us on

ಛತ್ತೀಸ್​ಗಡ: ‘ನನ್ನ ಪ್ರಾಣಕ್ಕೆ ಅಪಾಯವಿದೆ ಅವರ ಮೇಲೆ ದಾಳಿ ಮಾಡಬಹುದು’ ಎಂದು ಛತ್ತೀಸ್​ಗಡದ ಕಾಂಗ್ರೆಸ್ ಶಾಸಕ ಬೃಹಸ್ಪತಿ ಸಿಂಗ್ ತಮ್ಮ ಪಕ್ಷದ ಹಿರಿಯ ನಾಯಕ ಮತ್ತು ರಾಜ್ಯ ಆರೋಗ್ಯ ಸಚಿವ ಟಿ.ಎಸ್. ಸಿಂಗ್‌ದೇವ್ ಅವರ ವಿರುದ್ಧ ಆರೋಪ ಮಾಡಿದ್ದಾರೆ.

ರಾಮಾನುಜ್​​ಗಂಜ್ ಶಾಸಕರಾಗಿರುವ ಸಿಂಗ್, “ಮಹಾರಾಜ” (ಸಿಂಗ್‌ದೇವ್) ನನ್ನನ್ನು ಕೊಲ್ಲಬಹುದು ”ಎಂದು ಹೇಳಿದ್ದಾರೆ. “ನನ್ನನ್ನು ಕೊಲ್ಲುವ ಮೂಲಕ ಸಿಂಗ್‌ದೇವ್ ಮುಖ್ಯಮಂತ್ರಿಯಾಗುವುದಾದರೆ ಅವರು ಈ ಹುದ್ದೆಯಿಂದ ಆಶೀರ್ವದಿಸಲ್ಪಡಬೇಕು”. ಸಚಿವರು ಇತರ ಕಾಂಗ್ರೆಸ್ ಶಾಸಕರನ್ನು ಸಹ ಅವಮಾನಿಸಿದ್ದಾರೆ ಎಂದಿದ್ದಾರೆ ಸಿಂಗ್.

ಶನಿವಾರ ರಾತ್ರಿ ಸುರ್ಗುಜಾ ಪ್ರದೇಶದಲ್ಲಿ ಸಿಂಗ್‌ದೇವ್ ಅವರ ಬೆಂಬಲಿಗರು ಸಿಂಗ್ ಬೆಂಗಾವಲು ವಾಹನದ ಮೇಲೆ ದಾಳಿ ಮಾಡಿದ್ದಾರೆ ಎಂಬ ಆರೋಪದ ಬೆನ್ನಲ್ಲೇ ಸಿಂಗ್ ಈ ರೀತಿ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಸಿಂಗ್ ಹೇಳಿದ್ದಾರೆ. “ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ನಾನು ನನ್ನ ವಿಷಯವನ್ನು ತಿಳಿಸುತ್ತೇನೆ. ನಾನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಪಿಎಲ್ ಪುನಿಯಾ, ವಿಧಾನಸಭೆಯ ಸ್ಪೀಕರ್, ವಿಧಾನಸಭೆಯ ಉಪ ಸ್ಪೀಕರ್ ಅವರಿಗೆ ದೂರು ನೀಡುತ್ತೇನೆ. ಈ ವಿಷಯದಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ ಎಂದು ಸಿಂಗ್ ಹೇಳಿದರು.

ಸಿಂಗ್ ಬೆಂಗಾವಲು ವಾಹನದ ಮೇಲೆ ದಾಳಿಯ ನಂತರ, 18 ಕ್ಕೂ ಹೆಚ್ಚು ಶಾಸಕರು ರಾಯ್ಪುರದ ಸಿಂಗ್ ಅವರ ನಿವಾಸಕ್ಕೆ ತೆರಳಿ ಅವರ ಯೋಗಕ್ಷೇಮವನ್ನು ವಿಚಾರಿಸಿದರು.

ಏತನ್ಮಧ್ಯೆ, ಇದು ಪಕ್ಷದ ವಿಷಯವಾಗಿದೆ ಮತ್ತು ಮಾತುಕತೆಯ ಮೂಲಕ ಪರಿಹರಿಸಲಾಗುವುದು ಎಂದು ಸಿಂಗ್ ದೇವ್ ಹೇಳಿದರು. “ನಾವು ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ಯಾವುದೇ ಸಮಸ್ಯೆ ಇದ್ದರೆ, ನಾವು ಅದನ್ನು ಚರ್ಚೆಗಳ ಮೂಲಕ ಪರಿಹರಿಸುತ್ತೇವೆ, ”ಎಂದು ಅವರು ಹೇಳಿದರು.

ಇದನ್ನೂ ಓದಿ: Ramappa Temple ಯುನೆಸ್ಕೊ ವಿಶ್ವ ಪಾರಂಪರಿಕ ತಾಣ ಪಟ್ಟಿಯಲ್ಲಿ ತೆಲಂಗಾಣದ ರಾಮಪ್ಪ ದೇವಾಲಯ; ಪ್ರಧಾನಿ ಮೋದಿ ಅಭಿನಂದನೆ

(Chhattisgarh Congress MLA Brihaspati Singh Blames Health Minister TS Singhdeo for Convoy Attack)