Cow Dung: ಛತ್ತೀಸ್‌ಗಢದಲ್ಲಿ ಎಲ್ಲಾ ಸರ್ಕಾರಿ ಕಟ್ಟಡಗಳಿಗೆ ಗೋವು ಸಗಣಿ ಪೇಂಟ್ ಬಳಕೆ
ವಿಶಿಷ್ಟ ಮತ್ತು ಪರಿಸರ ಸ್ನೇಹಿ ಉಪಕ್ರಮದ ಭಾಗವಾಗಿ ಸರ್ಕಾರ, ಸಗಣಿಯಿಂದ ತಯಾರಿಸಲ್ಪಡುವ ಪೇಂಟ್ ಬಳಸಲು ಮುಂದಾಗಿದೆ.
ಛತ್ತೀಸ್ಗಡ್: ಸಾವಯವ ಉತ್ಪನ್ನಗಳ ಬಳಕೆಗೆ ಆದ್ಯತೆ ನೀಡಿರುವ ಛತ್ತೀಸ್‌ಗಢ ಸರ್ಕಾರ, ಇದರ ಭಾಗವಾಗಿ ಗೋವಿನ ಸಗಣಿಯಿಂದ ತಯಾರಿಸಲಾದ ಸಾವಯವ ಬಣ್ಣ(Paint) ಬಳಸಲು ಮುಂದಾಗಿದೆ. ರಾಜ್ಯದ ಎಲ್ಲ ಸರ್ಕಾರಿ ಕಟ್ಟಡಗಳಿಗೆ ಸಗಣಿಯಿಂದ ತಯಾರಾದ ಸಾವಯವ ಪೇಂಟ್ ಬಳಿಯುವಂತೆ ಛತ್ತೀಸ್ಗಡ್ ಸರ್ಕಾರ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಸೂಚನೆ ಮೇರೆಗೆ ರಾಜ್ಯದ ಕೃಷಿ ಇಲಾಖೆಯು ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳಿಗೆ ಗೋಶಾಲೆಗಳಲ್ಲಿ ಪೇಂಟ್ ಉತ್ಪಾದನಾ ಘಟಕಗಳ ಸ್ಥಾಪನೆಯನ್ನು ವೇಗಗೊಳಿಸಲು ನಿರ್ದೇಶನ ನೀಡಲಾಗಿದೆ. ಅಲ್ಲದೇ ಎಲ್ಲಾ ಸರ್ಕಾರಿ ಕಟ್ಟಡಿಗಳಿಗೆ ರಾಸಾಯನಿಕ ಬದಲಿಗೆ ಸೆಗಣಿಯಿಂದ ತಯಾರಿಸಿದ ಬಣ್ಣ ಬಳಿಯಲು ಸೂಚಿಸಲಾಗಿದೆ.
ಗೋ ಸಗಣಿಯಿಂದ ಪೇಂಟ್ ತಯಾರಿಸುವುದಕ್ಕಾಗಿ ರಾಯ್‌ಪುರ ಮತ್ತು ಕಾಂಕೇರ್‌ನಲ್ಲಿನ ಗೋಶಾಲೆಗಳಲ್ಲಿ ಘಟಕಗಳನ್ನು ಸ್ಥಾಪಿಸಿದೆ. 2023ರ ಜನವರಿ ಅಂತ್ಯದ ವೇಳೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಸಾವಯವ ಪೇಂಟ್ ತಯಾರಿಕಾ ಘಟಕಗಳನ್ನು ಸ್ಥಾಪಿಸಲಿದೆ. ಸಾವಯವ ಪೇಂಟ್ ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರ ನಿಗ್ರಹ ಅಂಶಗಳನ್ನು ಒಳಗೊಂಡಿವೆ. ನೈಸರ್ಗಿಕ ಪೇಂಟ್‌ನ ಬಳಕೆಯು ಪರಿಸರ ಸ್ನೇಹಿ ಮಾತ್ರವಾಗಿರದು. ಬದಲಿಗೆ ಗೋಶಾಲೆಗಳಲ್ಲಿನ ಘಟಕಗಳಲ್ಲಿ ಸ್ಥಳೀಯ ಮಹಿಳೆಯರು ಕಾರ್ಯನಿರ್ವಹಿಸುವುದರಿಂದ ಗ್ರಾಮೀಣ ಆರ್ಥಿಕತೆ ಬಲಪಡಿಸಲು ಸಹಕಾರಿಯಾಗಲಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಸೂರಜಿ ಗಾಂವ್ ಯೋಜನೆಯ ಭಾಗವಾಗಿ 2 ವರ್ಷಗಳ ಹಿಂದೆ ಗೋಧನ್ ನ್ಯಾಯ್ ಯೋಜನೆಗೆ ಚಾಲನೆ ನೀಡಲಾಗಿತ್ತು. ಇದರ ಅಡಿಯಲ್ಲಿ 8,000 ಕ್ಕೂ ಹೆಚ್ಚು ಗೋಶಾಲೆಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿ ಗೋ ಸಗಣಿ ಪ್ರತಿ ಕೆಜಿಗೆ 2 ರೂ. ಹಾಗೂ ಮೂತ್ರಕ್ಕೆ ಪ್ರತಿ ಪ್ರತಿ ಲೀಟರ್‌ಗೆ 4 ರೂ.ನಿಗದಿಪಡಿಸಲಾಗಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 8:54 pm, Sun, 25 December 22