ಭೂಗತ ಪಾತಕಿ ಛೋಟಾ ರಾಜನ್(Chhota Rajan) ಆಪ್ತ ಪ್ರಸಾದ್ ಪೂಜಾರಿಯನ್ನು 20 ವರ್ಷಗಳ ಬಳಿಕ ಚೀನಾವು ಮುಂಬೈಗೆ ಗಡಿಪಾರು ಮಾಡಿದೆ. ಪ್ರಸಾದ್ ಪೂಜಾರಿ ಅಲಿಯಾಸ್ ಸುಭಾಷ್ ವಿಠ್ಠಲ್ ನನ್ನು ಚೀನಾದಿಂದ ಮುಂಬೈಗೆ ಗಡಿಪಾರು ಮಾಡುವುದನ್ನು ಮುಂಬೈ ಪೊಲೀಸ್ ತಂಡ ಶನಿವಾರ ಖಚಿತಪಡಿಸಿದ್ದು, ಕೊಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆತನನ್ನು ವಿಚಾರಣೆ ನಡೆಸಲಿದೆ. ಈತ ಛೋಟಾ ರಾಜನ್ ಗ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿದ್ದು, ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಪೂಜಾರಿ (44) ಕಳೆದ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಪತ್ನಿಯೊಂದಿಗೆ ಚೀನಾದಲ್ಲಿ ನೆಲೆಸಿದ್ದ. ಕ್ರೈಂ ಬ್ರಾಂಚ್ ಮತ್ತು ಆಂಟಿ-ಎಕ್ಸ್‌ಟಾರ್ಶನ್ ಸೆಲ್ (ಎಇಸಿ) ಕೆಲವು ವರ್ಷಗಳಿಂದ ಆತನ ಜಾಡು ಹಿಡಿದಿತ್ತು. ಮೂಲತಃ ಕರ್ನಾಟಕದ ಉಡುಪಿಯವನಾದ ಪೂಜಾರಿ ನವಿ ಮುಂಬೈನ ವಾಶಿ ಮತ್ತು ಮುಂಬೈನ ವಿಕ್ರೋಲಿಯಲ್ಲಿ ಆತನ ಪೋಷಕರು ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ವಾಸಿಸುತ್ತಿದ್ದರು.
ಪೂಜಾರಿಯು ಆರಂಭದಲ್ಲಿ ಕುಮಾರ್ ಪಿಳ್ಳೈ ಗ್ಯಾಂಗ್‌ನೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದ್ದ, ನಂತರ ತನ್ನ ಸ್ವಂತ ಗ್ಯಾಂಗ್ ಅನ್ನು ಪ್ರಾರಂಭಿಸುವ ಮೊದಲು ಛೋಟಾ ರಾಜನ್‌ನ ಗ್ಯಾಂಗ್‌ಗೆ ಸೇರಿಕೊಂಡಿದ್ದ.
ಮತ್ತಷ್ಟು ಓದಿ: Chhota Rajan: ಭೂಗತ ಪಾತಕಿ ಛೋಟಾ ರಾಜನ್ ಏಮ್ಸ್ಗೆ ದಾಖಲು; ಜಾಮೀನು ನೀಡಬೇಡಿ ಎಂದು ಸಿಬಿಐನಿಂದ ಅರ್ಜಿ
ಪೂಜಾರಿ ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದಾನೆ, ನಮ್ಮ ತಂಡವು ಅವನನ್ನು ಬಂಧಿಸಿ ಗಡೀಪಾರು ಮಾಡುವ ಮೂಲಕ ಬೆಳಗ್ಗೆ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತಂದರು ಎಂದು ಪೊಲೀಸರು ತಿಳಿಸಿದ್ದಾರೆ.
ಆತ 2005ರಲ್ಲಿ ಭಾರತವನ್ನು ತೊರೆದಿದ್ದ, ಆತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ನೀಡಲಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ