ಮಹಿಳಾ ಪ್ರಯಾಣಿಕರಿಗೆ ಸಸ್ಯಾಹಾರಿ ಊಟದಲ್ಲಿ ಚಿಕನ್ ಪೀಸ್! ಏರ್ ಇಂಡಿಯಾ ಕೊಟ್ಟ ಉಚಿತ ಸಲಹೆ ಏನು ಗೊತ್ತಾ!?
ಆ ಒಬ್ಬ ಪ್ರಯಾಣಿಕರು ಮಾತ್ರವಲ್ಲ.. ಅವರಂತೆ ಅನೇಕ ಪ್ರಯಾಣಿಕರು ವೆಜ್ ಊಟವನ್ನು ಕೇಳಿದರೂ ನಿರ್ಲಕ್ಷ್ಯದಿಂದ ನಾನ್ ವೆಜ್ ಸರಬರಾಜು ಮಾಡಿದ್ದಾರೆ ಎನ್ನಲಾಗಿದೆ. ಇದೀಗ ಏರ್ ಇಂಡಿಯಾ ಈ ವಿಚಾರವಾಗಿ ಕ್ಷಮೆಯಾಚಿಸಿದೆ. ಆದರೆ ಟ್ವೀಟ್ ಪೋಸ್ಟ್ ತೆಗೆದುಹಾಕುವಂತೆ ಕೋರುತ್ತಾ, ವೈಯಕ್ತಿಕವಾಗಿ ಸಂಪರ್ಕಿಸುವಂತೆ ಸದರಿ ಮಹಿಳಾ ಪ್ರಯಾಣಿಕರನ್ನು ಕೇಳಲಾಗಿದೆ.
ಏರ್ ಇಂಡಿಯಾ ಪ್ರಯಾಣದಲ್ಲಿ ಯಡವಟ್ಟುಗಳು ಮುಂದುವರಿದಿದೆ. ಅಚ್ಚರಿಯ ಘಟನೆಯೊಂದರಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಸಸ್ಯಾಹಾರಿ ಊಟಕ್ಕೆ ಆರ್ಡರ್ ಮಾಡಿದ ಮಹಿಳೆಗೆ ಶಾಕಿಂಗ್ ದೃಶ್ಯ ಕಂಡಬಂದಿದೆ! ವೆಜ್ ಊಟದಲ್ಲಿ ಚಿಕನ್ ತುಂಡುಗಳಿದ್ದವು ಎಂದು ಮಹಿಳಾ ಪ್ರಯಾಣಿಕರೊಬ್ಬರು ಸವಿವರವಾಗಿ ಆರೋಪಿಸಿದ್ದಾರೆ. ಸದ್ಯ ಮಹಿಳಾ ಪ್ರಯಾಣಿಕರು ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ. ಈ ವಿಚಾರದಲ್ಲಿ ಏರ್ ಇಂಡಿಯಾ ಕ್ಷಮೆಯಾಚಿಸಿದ್ದು, ಟ್ವೀಟ್ ಪೋಸ್ಟ್ ತೆಗೆದುಹಾಕುವಂತೆ ಉಚಿತ ಸಲಹೆ ನೀಡಿದೆ. ಇದರಿಂದ ವಿವಾದ ಬೇಗ ಶಮನವಾಗುವ ಲಕ್ಷಣ ಕಾಣುತ್ತಿಲ್ಲ. ಸಂಪೂರ್ಣ ವಿವರಗಳಿಗೆ ಹೋದರೆ..
ವೀರ್ ಜೈನ್ ಎಂಬ ಮಹಿಳೆ ಏರ್ ಇಂಡಿಯಾದ ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರು ಹೇಳಿದ ಸಸ್ಯಾಹಾರ ಮೀಲ್ಸ್ನಲ್ಲಿ ಚಿಕನ್ ತುಂಡುಗಳು ಇರುವುದು ಆ ಫೋಟೋಗಳಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಆ ಮಹಿಳಾ ಪ್ರಯಾಣಿಕರು ತಮ್ಮ ಪೋಸ್ಟ್‌ನಲ್ಲಿ ಇದೇ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
Dear Ms. Jain, we request you delete the asked details from the open tweet ( to avoid misuse ) and share the same with us via DM ( https://t.co/12Zkg5wzrb ) along with your PNR.
— Air India (@airindia) January 9, 2024
ಈ ರೀತಿಯ ಕೃತ್ಯದಿಂದ ತಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ನೊಂದ ಮಹಿಳೆ ಹೇಳಿದ್ದಾರೆ. ಘಟನೆಯ ಕುರಿತು ವಿಮಾನ ಸಿಬ್ಬಂದಿಗೆ ಮಾಹಿತಿ ನೀಡಿರುವುದಾಗಿ ಅವರು ತಿಳಿಸಿದ್ದಾರೆ. ಆಗ ಮಹಿಳಾ ಸಿಬ್ಬಂದಿಯೊಬ್ಬರು ಕ್ಷಮೆಯಾಚಿಸಿದರು ಎಂದು ವಿವರಿಸಿದರು. ಆದರೆ, ಆಕೆ ಮಾತ್ರವಲ್ಲ.. ಅವರಂತೆ ಅನೇಕ ಪ್ರಯಾಣಿಕರು ವೆಜ್ ಊಟವನ್ನು ಕೇಳಿದರೂ ನಿರ್ಲಕ್ಷ್ಯದಿಂದ ನಾನ್ ವೆಜ್ ಸರಬರಾಜು ಮಾಡಿದ್ದಾರೆ ಎನ್ನಲಾಗಿದೆ. ಇದೀಗ ಏರ್ ಇಂಡಿಯಾ ಈ ವಿಚಾರವಾಗಿ ಕ್ಷಮೆಯಾಚಿಸಿದೆ. ಟ್ವೀಟ್ ಪೋಸ್ಟ್ ತೆಗೆದುಹಾಕುವಂತೆ ಕೋರುತ್ತಾ, ವೈಯಕ್ತಿಕವಾಗಿ ಸಂಪರ್ಕಿಸುವಂತೆ ಸದರಿ ಮಹಿಳಾ ಪ್ರಯಾಣಿಕರನ್ನು ಕೇಳಲಾಗಿದೆ.
Also Read: ವೈರಲ್ ವೀಡಿಯೊ -ಉಚಿತ ಬಸ್ಸಿನಲ್ಲಿ ಸೀಟಿಗಾಗಿ ಮಹಿಳೆಯರು ಜುಟ್ಟು ಹಿಡಿದು ಕೈ ಕೈ ಮಿಲಾಯಿಸಿದರು!
ವಿಮಾನದಲ್ಲಿ ಆಹಾರ ಅಥವಾ ಅದರ ಗುಣಮಟ್ಟದ ಬಗ್ಗೆ ವಿವಾದ ಉಂಟಾಗಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ವಿಮಾನಯಾನಗಳಲ್ಲಿ ಹೀಗೇ ಆಗಿತ್ತು. ಆಹಾರದಲ್ಲಿ ಜಿರಳೆ ಕಾಣಿಸಿಕೊಂಡು ಆಹಾರ ಕೆಡುವವರೆಗೆ ಹಲವು ವಿವಾದಗಳು ಬೆಳಕಿಗೆ ಬಂದಿವೆ. ಇಂತಹ ಘಟನೆಗಳ ಹಿನ್ನೆಲೆಯಲ್ಲಿ ವಿಮಾನ ಪ್ರಯಾಣಿಕರು ಆಗಾಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ