YS Sharmila: ಆಂಧ್ರಪ್ರದೇಶ ಕಾಂಗ್ರೆಸ್ನಲ್ಲಿ ವೈಎಸ್ ಶರ್ಮಿಳಾ ಬಗ್ಗೆ ಶುರುವಾಯ್ತಾ ಅಪಸ್ವರ?
ಆಂಧ್ರಪ್ರದೇಶ ಕಾಂಗ್ರೆಸ್ನಲ್ಲಿ ವೈಎಸ್ ಶರ್ಮಿಳಾ(YS Sharmila) ಬಗ್ಗೆ ಅಪಸ್ವರ ಶುರುವಾಗಿದೆ. ಆಂಧ್ರ ಮಾಜಿ ಸಿಎಂ ರಾಜಶೇಖರ್ ರೆಡ್ಡಿ ಮಗಳಾಗಿ, ಸಿಎಂ ಜಗನ್ಮೋಹನ್ ರೆಡ್ಡಿ ಸಹೋದರಿಯಾಗಿ ಅವರು ರಾಜಕೀಯವಾಗಿ ಜನಪ್ರಿಯತೆ ಪಡೆದರು. ತೆಲಂಗಾಣದಲ್ಲಿ ತಮ್ಮದೇ ಪಕ್ಷವಾದ ವೈಎಸ್‌ಆರ್‌ಟಿಪಿಯನ್ನು ಕಾಂಗ್ರೆಸ್ ಜತೆ ವಿಲೀನ ಮಾಡಿ ಆ ಪಕ್ಷಕ್ಕೆ ಸೇರಿದರೂ ನಿರೀಕ್ಷಿತ ಫಲ ಇನ್ನೂ ಸಿಕ್ಕಿಲ್ಲ.
ಆಂಧ್ರಪ್ರದೇಶ ಕಾಂಗ್ರೆಸ್ನಲ್ಲಿ ವೈಎಸ್ ಶರ್ಮಿಳಾ(YS Sharmila) ಬಗ್ಗೆ ಅಪಸ್ವರ ಶುರುವಾಗಿದೆ. ಆಂಧ್ರ ಮಾಜಿ ಸಿಎಂ ರಾಜಶೇಖರ್ ರೆಡ್ಡಿ ಮಗಳಾಗಿ, ಸಿಎಂ ಜಗನ್ಮೋಹನ್ ರೆಡ್ಡಿ ಸಹೋದರಿಯಾಗಿ ಅವರು ರಾಜಕೀಯವಾಗಿ ಜನಪ್ರಿಯತೆ ಪಡೆದರು. ತೆಲಂಗಾಣದಲ್ಲಿ ತಮ್ಮದೇ ಪಕ್ಷವಾದ ವೈಎಸ್‌ಆರ್‌ಟಿಪಿಯನ್ನು ಕಾಂಗ್ರೆಸ್ ಜತೆ ವಿಲೀನ ಮಾಡಿ ಕಾಂಗ್ರೆಸ್ಗೆ ಸೇರಿದರೂ ನಿರೀಕ್ಷಿತ ಫಲ ಇನ್ನೂ ಸಿಕ್ಕಂತೆ ಕಾಣುತ್ತಿಲ್ಲ.
ಪಕ್ಷ ಸೇರುವ ಮುನ್ನ ನಾಯಕತ್ವ ನೀಡುವ ಭರವಸೆ ಈಡೇರಿಸಲು ತಡಬೇಕಾಗುತ್ತಿದೆ, ಅಸ್ತಿತ್ವವೇ ಕಷ್ಟವಾಗಿರುವ ಆಂಧ್ರಪ್ರದೇಶದಲ್ಲಿ ಶರ್ಮಿಳಾ ಅವರನ್ನು ಪಿಸಿಸಿ ಮುಖ್ಯಸ್ಥರನ್ನಾಗಿ ನೇಮಿಸಿದರೆ ಏನಾಗಬಹುದು ಎನ್ನುವ ಪ್ರಶ್ನೆಗಳು ಹಲವಾರು ಜನರನ್ನು ಕಾಡುತ್ತಿದೆ.
ಈಗ ಲೋಕಸಭೆ ಚುನಾವಣೆ ಸನ್ನಿಹಿತವಾಗುತ್ತಿರುವ ಹಿನ್ನೆಲೆಯಲ್ಲಿ ಶರ್ಮಿಳಾಗೆ ಪಕ್ಷದಲ್ಲಿ ಉತ್ತಮ ಸ್ಥಾನ ಕಲ್ಪಿಸುವ ಕುರಿತು ಕಾಂಗ್ರೆಸ್ ಆಲೋಚಿಸುತ್ತಿದ್ದರೆ ಇನ್ನೊಂದೆಡೆ ಕಾಂಗ್ರೆಸ್ನ ಹಿರಿಯ ನಾಯಕರು ಅಪಸ್ವರ ಎತ್ತುತ್ತಿದ್ದಾರೆ. ಶರ್ಮಿಳಾ ಕಾಂಗ್ರೆಸ್ ಸೇರಿ ಎರಡು ವಾರ ಕಳೆದರೂ ನಾಯಕತ್ವದಲ್ಲಿ ಯಾವ ಹುದ್ದೆ ನೀಡಬೇಕೆಂಬ ಗೊಂದಲ ಮುಂದುವರೆದಿದೆ.
ಶರ್ಮಿಳಾ ಅವರಿಗೆ ಪಿಸಿಸಿ ಮುಖ್ಯಸ್ಥೆ ಸ್ಥಾನ ನೀಡದಿದ್ದರೆ ಅವರನ್ನು ಕರೆತಂದ ಉದ್ದೇಶ ಈಡೇರುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ವಿಶ್ಲೇಷಕರು ಕಾಂಗ್ರೆಸ್ ನ ಮಾಜಿ ಸಂಸದ ಹರ್ಷ್ ಕುಮಾರ್ ಶರ್ಮಿಳಾ ವಿರುದ್ಧ ಮಾತನಾಡಿದ್ದಾರೆ. ಶರ್ಮಿಳಾ ಅವರಿಗೆ ಎಪಿಸಿಸಿ ಅಧ್ಯಕ್ಷ ಸ್ಥಾನ ನೀಡದಂತೆ ನಾಯಕತ್ವಕ್ಕೆ ಸೂಚಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮತ್ತಷ್ಟು ಓದಿ:YS Sharmila Joins Congress: ಆಂಧ್ರ ಸಿಎಂ ಜಗನ್ ಸಹೋದರಿ ಶರ್ಮಿಳಾ ಕಾಂಗ್ರೆಸ್ಗೆ ಸೇರ್ಪಡೆ
ತೆಲಂಗಾಣದ ಮಗು ಎಂದು ಹೇಳಿಕೊಳ್ಳುವ ಶರ್ಮಿಳಾ ಅವರಿಗೆ ಎಪಿ ಅಧ್ಯಕ್ಷೆ ಜವಾಬ್ದಾರಿ ನೀಡಿದರೆ ಪಕ್ಷಕ್ಕೆ ಧಕ್ಕೆಯಾಗುತ್ತದೆ ಎಂಬುದು ಅವರ ವಾದ. ಜಗನ್ ಮತ್ತು ಶರ್ಮಿಳಾ ಇಬ್ಬರೂ ಒಂದೇ, ಕೇಂದ್ರದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಅವರು ಸುರಕ್ಷಿತವಾಗಿರಲು ಅವರು ಪಕ್ಷವನ್ನು ಆಯ್ಕೆ ಮಾಡಿದ್ದಾರೆ ಎಂದು ಹರ್ಷ್ ಕುಮಾರ್ ಟೀಕೆ ಮಾಡಿದರು.
ಶರ್ಮಿಳಾ ಅವರಿಗೆ ಎಪಿಸಿಸಿ ಮುಖ್ಯಸ್ಥರ ಬದಲು ರಾಷ್ಟ್ರ ಮಟ್ಟದ ಹುದ್ದೆ ನೀಡಬೇಕೆಂದು ಬಯಸಿದ್ದಾರೆ. ಎಐಸಿಸಿ ಹುದ್ದೆ ನೀಡಬೇಕು ಮತ್ತು ಸ್ಟಾರ್ ಪ್ರಚಾರಕಿಯಾಗಿ ಅವರ ಸೇವೆಯನ್ನು ದೇಶಾದ್ಯಂತ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸದ್ಯ ಪಿಸಿಸಿ ಅಧ್ಯಕ್ಷರಾಗಿರುವ ಗಿಡುಗು ರುದ್ರರಾಜ್ ಅಧ್ಯಕ್ಷರ ತೀರ್ಮಾನಕ್ಕೆ ಬದ್ಧವಾಗಿರುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಈ ಬೆಳವಣಿಗೆಗಳ ಹಿನ್ನಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ವ್ಯಾಪಕ ಕುತೂಹಲ ಕೆರಳಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ