ಅರವಿಂದ್​​ ಕ್ರೇಜಿವಾಲ್ ಮುಖ್ಯ ಕಾರ್ಯದರ್ಶಿ ಮೇಲೆ ಭ್ರಷ್ಟಾಚಾರ ಆರೋಪ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 11, 2023 | 10:59 AM

ಅರವಿಂದ್​​ ಕ್ರೇಜಿವಾಲ್ ಅವರು ಮುಖ್ಯ ಕಾರ್ಯದರ್ಶಿಯ ಮೇಲೆ ಭ್ರಷ್ಟಾಚಾರ ಆರೋಪ ಮಾಡಲಾಗಿದೆ. ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ವಿರುದ್ಧ ಭ್ರಷ್ಟಾಚಾರ ದೂರು ಬಂದಿದ್ದು. ಈ ದೂರನ್ನು ವಿಜಿಲೆನ್ಸ್ ಸಚಿವ ಅತಿಶಿ ಅವರಿಗೆ ರವಾನಿಸಲಾಗಿದೆ.

ಅರವಿಂದ್​​ ಕ್ರೇಜಿವಾಲ್ ಮುಖ್ಯ ಕಾರ್ಯದರ್ಶಿ ಮೇಲೆ ಭ್ರಷ್ಟಾಚಾರ ಆರೋಪ
ಸಾಂದರ್ಭಿಕ ಚಿತ್ರ
Follow us on

ದೆಹಲಿ ಮುಖ್ಯಮಂತ್ರಿ ಅರವಿಂದ್​​ ಕ್ರೇಜಿವಾಲ್ (Arvind Kejriwal)​​​​ ಅವರ ಸರ್ಕಾರ ವಿರುದ್ಧ ಒಂದಲ್ಲ ಒಂದು ಆರೋಪಗಳು ಕೇಳಿರು ಬರುತ್ತಿದೆ. ಈ ಹಿಂದೆ ಕ್ರೇಜಿವಾಲ್ ಸಂಪುಟದ ಇಬ್ಬರು ಸಚಿವರ ವಿರುದ್ಧ ದೆಹಲಿ ಮದ್ಯ ನೀತಿಗೆ ಸಂಬಂಧಿಸಿದಂತೆ ಕೆಲವೊಂದು ಆರೋಪಗಳು ಕೇಳಿ ಬಂದಿದೆ. ಇದೀಗ ಅರವಿಂದ್​​ ಕ್ರೇಜಿವಾಲ್ ಅವರು ಮುಖ್ಯ ಕಾರ್ಯದರ್ಶಿಯ ಮೇಲೆ ಭ್ರಷ್ಟಾಚಾರ ಆರೋಪ (Delhi Chief Secretary) ಮಾಡಲಾಗಿದೆ. ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ (Naresh Kumar) ವಿರುದ್ಧ ಭ್ರಷ್ಟಾಚಾರ ದೂರು ಬಂದಿದ್ದು. ಈ ದೂರನ್ನು ವಿಜಿಲೆನ್ಸ್ ಸಚಿವ ಅತಿಶಿ ಅವರಿಗೆ ರವಾನಿಸಲಾಗಿದೆ.

ದೂರಿನ ಪ್ರಕಾರ, ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರು ತಮ್ಮ ಮಗನಿಗೆ ಉದ್ಯೋಗ ನೀಡುವ ಸಲುವಾಗಿ ಕಂಪನಿಯೊಂದಕ್ಕೆ ₹ 315 ಕೋಟಿ ಭೂಸ್ವಾಧೀನ ಒಪ್ಪಂದವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ಈ ಬಗ್ಗೆ ದೂರು ನೀಡಿರುವವರ ಹೆಸರನ್ನು ರಹಸ್ಯವಾಗಿ ಇಡಲಾಗಿದೆ. ಇನ್ನು ಈ ಬಗ್ಗೆ ಮುಖ್ಯಮಂತ್ರಿ ಕಚೇರಿ ವಿಸ್ತೃತ ವರದಿ ಕೇಳಿದೆ.

ಇನ್ನು ಈ ಆರೋಪವನ್ನು ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ನಿರಾಕರಿಸಿದ್ದಾರೆ. ಮಗನಿಗೆ ಉದ್ಯೋಗ ನೀಡುವ ಕಂಪನಿಯ ಜತೆಗೆ ನನಗೆ ಯಾವುದೇ ಸಂಬಂಧವಿಲ್ಲ, ಇದು ಸತ್ಯ ದೂರವಾದ ಆರೋಪ ಎಂದು ಹೇಳಿದ್ದಾರೆ. ಇನ್ನು ಈ ಹಿಂದೆ ದ್ವಾರಕಾ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 201 ರಲ್ಲಿ ಖರೀದಿಸಿದ ನಗರದ ನೈಋತ್ಯದಲ್ಲಿ 19 ಎಕರೆ ಜಮೀನನ್ನು ಮಾರಾಟಕ್ಕೆ ಸಂಬಂಧಿಸಿದ ಪ್ರಕರಣವನ್ನು ಅವರೇ ತನಿಖೆ ನಡೆಸಿದ್ದರು. ಈ ಭೂಮಿಯ ಬೆಲೆ ₹ 41.52 ಕೋಟಿ ಎಂದು ಜಿಲ್ಲಾಡಳಿತ ನಿರ್ಧರಿಸಿತ್ತು. ಇದನ್ನು ಅಂದಿನ ನೈರುತ್ಯ ದೆಹಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದ ಹೇಮಂತ್ ಕುಮಾರ್ ₹ 353.79 ಕೋಟಿಗೆ ಏರಿಸಿದ್ದಾರೆ. ಆದರೆ ಈ ತನಿಖೆಯಲ್ಲಿ ದಾರಿ ತಪ್ಪುವಂತೆ ಮಾಡುತ್ತಿದ್ದಾರೆ ಎಂದು ಹೇಮಂತ್ ಕುಮಾರ್ ಅವರನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್​​ ಹುದ್ದೆಯಿಂದ ವಜಾ ಮಾಡಲಾಯಿತು.

ಇದನ್ನೂ ಓದಿ: ದೆಹಲಿ ಮದ್ಯ ನೀತಿ ಪ್ರಕರಣ: ಇಡಿ ಸಮನ್ಸ್​​​​​, ವಿಚಾರಣೆಗೆ ಬರುವುದಿಲ್ಲ ಎಂದ ಕ್ರೇಜಿವಾಲ್​​

ಇದೀಗ ಇಂತಹದೇ ಪ್ರಕರಣದಲ್ಲಿ ದೆಹಲಿಯ ಮುಖ್ಯಕಾರ್ಯದರ್ಶಿ ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ದೂರುದಾರರು ಹೇಳಿರುವಂತೆ ನರೇಶ್ ಕುಮಾರ್ ಭೂಮಾಲೀಕರಲ್ಲಿ ಒಬ್ಬರಿಗೆ ಎನ್‌ಎಚ್‌ಎಐ ಪಾವತಿಸಲು ಆದೇಶಿಸಿ ಹೆಚ್ಚಿನ ಬೆಲೆ ಪಡೆದುಕೊಳ್ಳುವ ಕೆಲಸವನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ದೂರುದಾರರು ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ