Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ಮದ್ಯ ನೀತಿ ಪ್ರಕರಣ: ಇಡಿ ಸಮನ್ಸ್​​​​​, ವಿಚಾರಣೆಗೆ ಬರುವುದಿಲ್ಲ ಎಂದ ಕ್ರೇಜಿವಾಲ್​​

ದೆಹಲಿ ಮುಖ್ಯಮಂತ್ರಿ ಅರವಿಂದ್​​​ ಕ್ರೇಜಿವಾಲ್​​ (Arvind Crazywal) ಅವರಿಗೆ ಅ.31ರಂದು ಸಂಜೆ ಇಡಿ (ಜಾರಿ ನಿರ್ದೇಶನಾಲಯ) ಸಮನ್ಸ್​​​ ನೀಡಿತ್ತು. ಆದರೆ ಇದಕ್ಕೆ ಯಾವುದೇ ಉತ್ತರ ನೀಡದ ಅರವಿಂದ್​​​ ಕ್ರೇಜಿವಾಲ್​​​ ಅವರಿಗೆ ಇಂದು ಬೆಳಿಗ್ಗೆ ಇಡಿ ವಿಚಾರಣೆಗೆ ಹಾಜರಾಗುವಂತೆ ಹೇಳಿದೆ. ಇದೀಗ ಕ್ರೇಜಿವಾಲ್ ಇಡಿ ವಿಚಾರಣೆಗೆ ಹಾಜರಾಗುವುದಿಲ್ಲ, ನಿಮ್ಮ ನೋಟಿಸ್​​ನ್ನು ವಾಪಸ್ಸು ಪಡೆದುಕೊಳ್ಳಿ, ಇದು ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ.

ದೆಹಲಿ ಮದ್ಯ ನೀತಿ ಪ್ರಕರಣ: ಇಡಿ ಸಮನ್ಸ್​​​​​, ವಿಚಾರಣೆಗೆ ಬರುವುದಿಲ್ಲ ಎಂದ ಕ್ರೇಜಿವಾಲ್​​
ದೆಹಲಿ ಮುಖ್ಯಮಂತ್ರಿ ಅರವಿಂದ್​​​ ಕ್ರೇಜಿವಾಲ್
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Nov 02, 2023 | 11:24 AM

ದೆಹಲಿ, ನ.2: ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್​​​ ಕ್ರೇಜಿವಾಲ್​​ (Arvind Crazywal) ಅವರಿಗೆ ಅ.31ರಂದು ಸಂಜೆ ಇಡಿ (ಜಾರಿ ನಿರ್ದೇಶನಾಲಯ) ಸಮನ್ಸ್​​​ ನೀಡಿತ್ತು. ಆದರೆ ಇದಕ್ಕೆ ಯಾವುದೇ ಉತ್ತರ ನೀಡದ ಅರವಿಂದ್​​​ ಕ್ರೇಜಿವಾಲ್​​​ ಅವರಿಗೆ ಇಂದು ಬೆಳಿಗ್ಗೆ 11.00 ಗಂಟೆಗೆ ಇಡಿ ವಿಚಾರಣೆಗೆ ಹಾಜರಾಗುವಂತೆ ಹೇಳಿದೆ. ಇದೀಗ ಕ್ರೇಜಿವಾಲ್ ಇಡಿ ವಿಚಾರಣೆಗೆ ಹಾಜರಾಗುವುದಿಲ್ಲ, ನಿಮ್ಮ ನೋಟಿಸ್​​ನ್ನು ವಾಪಸ್ಸು ಪಡೆದುಕೊಳ್ಳಿ, ಇದು ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ. ಇನ್ನು ಅರವಿಂದ್ ಕೇಜ್ರಿವಾಲ್ ಅವರು ಮಧ್ಯಪ್ರದೇಶ ಚುನಾವಣೆಗೆ ಆಮ್ ಆದ್ಮಿ ಪಕ್ಷದ ಪರವಾಗಿ ಪ್ರಚಾರಕ್ಕಾಗಿ ಹೋಗುತ್ತಿರುವಾಗ ಇಡಿ ವಿಚಾರಣೆಗೆ ಹಾಜರಾಗುವಂತೆ ಹೇಳಿದೆ.

ಇಡಿಯ ಈ ನೋಟಿಸ್​​​​ ರಾಜಕೀಯವಾಗಿದ್ದು, ಇದು ಅಕ್ರಮ ಎಂದು ಹೇಳಿದ್ದಾರೆ. ಇಡಿ ಬಿಜೆಪಿ ಆದೇಶದ ಮೇರೆಗೆ ಈ ಕೆಲಸವನ್ನು ಮಾಡುತ್ತಿದೆ. ಇನ್ನು ಇದನ್ನು ನಾನು ಒಪ್ಪುವುದಿಲ್ಲ, ತಕ್ಷಣ ತನ್ನ ಮೇಲೆ ಜಾರಿ ಮಾಡಿದ ನೋಟಿಸ್​​​ ವಾಪಸ್ಸು ಪಡೆಯುಂತೆ ಇಡಿಗೆ ಪತ್ರದ ಮೂಲಕ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. ಇನ್ನು ರಾಜಕೀಯ ವಿಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಎಎಪಿ ಪಕ್ಷ ಹೇಳಿದೆ.

ದೆಹಲಿ ಮಧ್ಯ ನೀತಿಗೆ ಸಂಬಂಧಿಸಿದಂತೆ ಇಬ್ಬರು ಎಎಪಿ ನಾಯಕರನ್ನು ಬಂಧಿಸಿದಲಾಗಿದೆ. ಇಡಿ ವರದಿ ಪ್ರಕಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮವಾಗಿ 300 ಕೋಟಿ ರೂ.ಗಳಷ್ಟು ಹಣ ವರ್ಗಾವಣೆಯಾಗಿದೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪ ಇದೆ ಎಂದು ಹೇಳಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​​ನಲ್ಲಿ ಎಎಪಿಯ ಇಬ್ಬರು ನಾಯಕರು ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ಸುಪ್ರೀಂ ತಿರಸ್ಕರಿಸಿದೆ. ಈ ಅರ್ಜಿ ತಿರಸ್ಕರಿಸಿದ ನಂತರ ಕೇಂದ್ರ ತನಿಖಾ ಸಂಸ್ಥೆ ಇದೀಗ ಅನೇಕ ಕಡೆ ದಾಳಿಯನ್ನು ನಡೆಸಿದೆ.

ಇದನ್ನೂ ಓದಿ: ಮದ್ಯನೀತಿ ಪ್ರಕರಣ, ಮನೀಶ್ ಸಿಸೋಡಿಯಾಗೆ ಜಾಮೀನು ನೀಡಲು ಸುಪ್ರೀಂ ನಕಾರ

ಅರವಿಂದ್​​ ಕ್ರೇಜಿವಾಲ್ ಅವರು ಬಿಜೆಪಿ ನಾಯಕರ ಮೇಲೆ​​​ ಆರೋಪ ಮಾಡಿದಕ್ಕೆ ಇದೀಗ ಬಿಜೆಪಿ ಪ್ರತಿಕ್ರಿಯೆ ನೀಡಿದೆ. ಎಎಪಿ ಭ್ರಷ್ಟಾಚಾರದಲ್ಲಿ ತೊಡಗಿದೆ. ಈಗಾಗಲೇ ಎಎಪಿ ನಾಯಕರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್​​​ ನಿರಾಕರಿಸಿದೆ. ಇದು ರಾಜಕೀಯ ಪ್ರೇರಿತವಾಗಿದೆ ಎಂಬ ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆಗೆ ಅರ್ಥವಿಲ್ಲ. ಸುಪ್ರೀಂ ಕೋರ್ಟ್ ಮನೀಶ್ ಸಿಸೋಡಿಯಾಗೆ ಜಾಮೀನು ನಿರಾಕರಿಸಿತು ಮತ್ತು 338 ಕೋಟಿಯ ಡೀಲ್​​ ಬಗ್ಗೆ ತನಿಖಾ ಸಂಸ್ಥೆ ವರದಿಯನ್ನು ನೀಡಿದೆ ಮತ್ತು ಅದರ ಮೂಲವನ್ನು ಪತ್ತೆ ಮಾಡುತ್ತಿದ್ದಾರೆ. ಅರವಿಂದ್​​​ ಕ್ರೇಜಿವಾಲ್​​​ ಅವರ ಸರ್ಕಾರದ ಭ್ರಷ್ಟಚಾರದ ಬಗ್ಗೆ ಕಾಂಗ್ರೆಸ್​​​ ಕೂಡ ಆರೋಪಿಸಿದೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ ಸುದ್ದಿಗಾರರೊಂದಿಗೆ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:21 am, Thu, 2 November 23

ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ