ಚೀನಾದಿಂದ ಫೈಟರ್ ಜೆಟ್​ ನಿಯೋಜನೆ, ಮುಂದೇನೋ?

| Updated By: ಸಾಧು ಶ್ರೀನಾಥ್​

Updated on: Sep 08, 2020 | 1:46 PM

ದೆಹಲಿ: ಗಡಿ ವಿಚಾರವಾಗಿ ಭಾರತ-ಚೀನಾ ದೇಶಗಳ ನಡುವೆ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಗಡಿಯಲ್ಲಿ ಎರಡೂ ದೇಶಗಳಿಂದ ಫೈಟರ್​ ಜೆಟ್ ನಿಯೋಜನೆ ಮಾಡಲಾಗಿದೆ. ಇದೀಗ, ಚೀನಾದಿಂದ J-20 ಎಂಬ ಲಾಂಗ್ ರೇಂಜ್ ಫೈಟರ್​ ಜೆಟ್ ನಿಯೋಜನೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹೊಸ್ಟನ್ ಏರ್​ಬೇಸ್​ನಲ್ಲಿ ಈ ಫೈಟರ್ ಜೆಟ್​ಗಳನ್ನ ನಿಯೋಜಿಸಲಾಗಿದ್ದು ಈ ವಾಯುನೆಲೆ ಪೂರ್ವ ಲಡಾಖ್​ನಿಂದ ಕೇವಲ 350 ಕಿ.ಮೀ. ದೂರದಲ್ಲಿದೆ ಎಂಬ ಮಾಹಿತಿ ದೊರೆತಿದೆ. ಇದಕ್ಕೆ ಪ್ರತ್ಯುತ್ತರವಾಗಿ ಭಾರತದಿಂದಲೂ ಗಡಿಯಲ್ಲಿ ಫೈಟರ್ ಜೆಟ್​ಗಳ ನಿಯೋಜನೆಯಾಗಿದೆ. ದೇಶದ ಅಪ್ರತಿಮ […]

ಚೀನಾದಿಂದ ಫೈಟರ್ ಜೆಟ್​ ನಿಯೋಜನೆ, ಮುಂದೇನೋ?
ಅಪಘಾತಕ್ಕೀಡಾದ ಮಿಗ್-29ಕೆ
Follow us on

ದೆಹಲಿ: ಗಡಿ ವಿಚಾರವಾಗಿ ಭಾರತ-ಚೀನಾ ದೇಶಗಳ ನಡುವೆ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಗಡಿಯಲ್ಲಿ ಎರಡೂ ದೇಶಗಳಿಂದ ಫೈಟರ್​ ಜೆಟ್ ನಿಯೋಜನೆ ಮಾಡಲಾಗಿದೆ.

ಇದೀಗ, ಚೀನಾದಿಂದ J-20 ಎಂಬ ಲಾಂಗ್ ರೇಂಜ್ ಫೈಟರ್​ ಜೆಟ್ ನಿಯೋಜನೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹೊಸ್ಟನ್ ಏರ್​ಬೇಸ್​ನಲ್ಲಿ ಈ ಫೈಟರ್ ಜೆಟ್​ಗಳನ್ನ ನಿಯೋಜಿಸಲಾಗಿದ್ದು ಈ ವಾಯುನೆಲೆ ಪೂರ್ವ ಲಡಾಖ್​ನಿಂದ ಕೇವಲ 350 ಕಿ.ಮೀ. ದೂರದಲ್ಲಿದೆ ಎಂಬ ಮಾಹಿತಿ ದೊರೆತಿದೆ.

ಇದಕ್ಕೆ ಪ್ರತ್ಯುತ್ತರವಾಗಿ ಭಾರತದಿಂದಲೂ ಗಡಿಯಲ್ಲಿ ಫೈಟರ್ ಜೆಟ್​ಗಳ ನಿಯೋಜನೆಯಾಗಿದೆ. ದೇಶದ ಅಪ್ರತಿಮ ಸುಖೋಯ್ 30 MKI, ಜಾಗ್ವಾರ್ ಹಾಗೂ ಮಿರಾಜ್ 2000 ಫೈಟರ್​ ಜೆಟ್​ ಯುದ್ಧ ವಿಮಾನಗಳನ್ನು 3 ತಿಂಗಳ ಹಿಂದೆಯೇ ಗಡಿಯ ಸಮೀಪವಿರುವ ವಾಯುನೆಲೆಗಳಲ್ಲಿ ನಿಯೋಜಿಸಲಾಗಿದೆ.