ದೆಹಲಿ: ಚೀನಾದೊಂದಿಗಿನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ನಾಪತ್ತೆಯಾಗಿದ್ದ ಅರುಣಾಚಲ ಪ್ರದೇಶದ ಹದಿಹರೆಯದ ಮಿರಾಮ್ ಟ್ಯಾರೋನ್‌ನನ್ನು (Miram Taron) ಭಾರತೀಯ ಸೇನೆಗೆ ಹಸ್ತಾಂತರಿಸಲಾಗಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು (Kiren Rijiju) ಗುರುವಾರ ಟ್ವೀಟ್ ಮಾಡಿದ್ದಾರೆ. ಚೀನಾದ ಪಿಎಲ್‌ಎ (PLA) ಅರುಣಾಚಲ ಪ್ರದೇಶದ ಮಿರಾಮ್ ಟ್ಯಾರೋನ್‌ನನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದೆ. ವೈದ್ಯಕೀಯ ಪರೀಕ್ಷೆ ಸೇರಿದಂತೆ ಸರಿಯಾದ ಕಾರ್ಯವಿಧಾನಗಳನ್ನು ಅನುಸರಿಸಲಾಗುತ್ತಿದೆ” ಎಂದು ರಿಜಿಜು ಟ್ವೀಟ್ ಮಾಡಿದ್ದಾರೆ.ಚೀನಾದ ಪೀಪಲ್ ಲಿಬರೇಶನ್ ಆರ್ಮಿ ಅಥವಾ ಪಿಎಲ್‌ಎ ಟ್ಯಾರೋನ್ ಅವರನ್ನು ಭಾರತಕ್ಕೆ ವಾಪಸು ಕಳುಹಿಸಲಾಗುವುದು ಎಂದು ಈ ಹಿಂದೆ ದೃಢಪಡಿಸಿತ್ತು. ಆದರೆ ಪರ್ವತ ಪ್ರದೇಶದಲ್ಲಿನ ಹವಾಮಾನ ವೈಪರೀತ್ಯದಿಂದಾಗಿ ಅವರನ್ನು ಸ್ವದೇಶಕ್ಕೆ ಕರೆತರಲು ವಿಳಂಬವಾಗಿತ್ತು. ಜನವರಿ 25 ರಂದು ರಿಜಿಜು ಅವರು ಚೀನಾದ ಪಿಎಲ್‌ಎ ಟ್ಯಾರೋನ್ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಕೆಲವರು ವರದಿ ಮಾಡಿದ್ದಾರೆ ಎಂದು ಹೇಳಿಕೆಯೊಂದನ್ನು ಟ್ವೀಟ್ ಮಾಡಿದ್ದಾರೆ. ಮಂಗಳವಾರ ಸಚಿವರು, ಬಾಲಕನ ಸುರಕ್ಷಿತ ವಾಪಸಾತಿಗೆ ಆದ್ಯತೆ ನೀಡಲಾಗಿದೆ ಮತ್ತು ಅವನ ಬಗ್ಗೆ ಹೇಳಿಕೆಗಳನ್ನು ನೀಡುವಾಗ ಜಾಗರೂಕರಾಗಿರಿ ಎಂದು ಜನರಿಗೆ ಮನವಿ ಮಾಡಿದ್ದರು.
The Chinese PLA handed over the young boy from Arunachal Pradesh Shri Miram Taron to Indian Army at WACHA-DAMAI interaction point in Arunachal Pradesh today.
I thank our proud Indian Army for pursuing the case meticulously with PLA and safely securing our young boy back home ?? pic.twitter.com/FyiaM4wfQk— Kiren Rijiju (@KirenRijiju) January 27, 2022
ಎಲ್‌ಎಸಿಗೆ ಸಮೀಪವಿರುವ ಪ್ರದೇಶದಿಂದ ಟ್ಯಾರೋನ್ ನಾಪತ್ತೆಯಾಗಿದ್ದಾರೆ ಮತ್ತು ಭಾರತೀಯ ಸೇನೆಯು ಜನವರಿ 19 ರಂದು ತಕ್ಷಣವೇ ಚೀನಾದ ಕಡೆಯನ್ನು ಸಂಪರ್ಕಿಸಿತು, ಪಿಎಲ್‌ಎ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಲ್ಲಿ ಆ ಬಾಲಕನನ್ನು ಪತ್ತೆಹಚ್ಚಲು ಮತ್ತು ಹಿಂದಿರುಗಿಸಲು ಸಹಾಯವನ್ನು ಕೇಳಿತ್ತು.
ಆ ದಿನ ಟ್ಯಾರೋನ್ ಜೊತೆ ಹೋದ ಪ್ರತ್ಯಕ್ಷದರ್ಶಿ, ಜಾನಿ ಯುಯಿಂಗ್, “ನಾನು ಮಿರಾಮ್ ಜೊತೆ ಸಿಯಾಂಗ್ಲಾ ಪ್ರದೇಶದಲ್ಲಿ ಬೇಟೆಯಾಡಲು ಹೋಗಿದ್ದೆ ಆದರೆ ಕತ್ತಲೆಯಿಂದಾಗಿ ನಮಗೆ ಮುಂದುವರಿಯಲು ಸಾಧ್ಯವಾಗಲಿಲ್ಲ. ಇದ್ದಕ್ಕಿದ್ದಂತೆ, ಚೀನಾದ ಪಿಎಲ್‌ಎ ಬಂದು ಮಿರಾಮ್ ಅನ್ನು ತಮ್ಮ ವಶಕ್ಕೆ ತೆಗೆದುಕೊಂಡಿತು ಎಂದು ಹೇಳಿದ್ದಾರೆ ಅರುಣಾಚಲ ಪ್ರದೇಶದ ಮೇಲಿನ ಸಿಯಾಂಗ್ ಜಿಲ್ಲೆ ಚೀನಾದೊಂದಿಗೆ ಅಂತಾರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿದೆ. ಅರುಣಾಚಲ ಪ್ರದೇಶದ ಜನರು ಹೆಚ್ಚಾಗಿ ಬೇಟೆಗಾಗಿ ಒಳ ಪ್ರದೇಶಗಳಿಗೆ ಹೋಗುತ್ತಾರೆ.
ಚೀನಾ ಮಿರಾನ್ನ್ನು “ಕಾನೂನುಬಾಹಿರವಾಗಿ” ಚೀನಾದ ಭೂಪ್ರದೇಶದಲ್ಲಿ ಕಂಡಿತ್ತು ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ವ್ಯಕ್ತಿ “ಕಾನೂನುಬಾಹಿರವಾಗಿ ಚೀನೀ ಪ್ರದೇಶವನ್ನು ಪ್ರವೇಶಿಸಿದರು ಮತ್ತು ನಂತರ ವಾಡಿಕೆಯಂತೆ ಪ್ರಶ್ನಿಸಲಾಯಿತು. ಸಂಬಂಧಿತ ಗಡಿ ನಿಯಂತ್ರಣ ನಿಯಮಗಳಿಗೆ ಅನುಸಾರವಾಗಿ ಮತ್ತು ಮಾನವೀಯ ನೆರವು ನೀಡಲಾಗಿದೆ” ಎಂದು ಚೀನಾದ ವೆಸ್ಟರ್ನ್ ಥಿಯೇಟರ್ ಕಮಾಂಡ್ ಕರ್ನಲ್ ಲಾಂಗ್ ಶಾವೊಹುವಾ ಪಿಎಲ್ಎನ ಪಶ್ಚಿಮ ಥಿಯೇಟರ್ ಅಧಿಕೃತ ವಿಚಾಟ್ ಖಾತೆಯಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಉತ್ಕೃಷ್ಟ ಭೋಜನ, ರತನ್ ಟಾಟಾ ಅವರಿಂದ ವಿಶೇಷ ಸಂದೇಶ: ಹೊಸ ಏರ್ ಇಂಡಿಯಾ ಪ್ರಯಾಣಿಕರಿಗೆ ಏನೇನು ನೀಡಲಿದೆ?
Published On - 3:18 pm, Thu, 27 January 22