ಕೊರೊನಾ ಹುಟ್ಟಿದ್ದು ಚೀನಾದಲ್ಲಿ ಅಲ್ಲ ಭಾರತದಲ್ಲಿ.. ಚೀನಾ ಹೊಸ ವರಸೆಗೆ ಬಿದ್ದು ಬಿದ್ದು ನಕ್ಕ ಸಂಶೋಧಕರು
ಕೊರೊನಾ ವೈರಸ್ ಹುಟ್ಟಿದ್ದು ಚೀನಾದಲ್ಲಿಯೇ ಅನ್ನೊದು ಪ್ರಪಂಚದ ಪ್ರತಿಯೊಬ್ಬನಿಗೂ ಗೊತ್ತಿರುವ ವಿಚಾರ. ಇದರಿಂದ ಚೀನಾ ಸಾಕಷ್ಟು ಏಟು ತಿಂದಿದೆ. ಆದ್ರೆ ಈಗ ಚೀನಾ ವರಸೆ ಬದಲಿಸಿದ್ದು, ಭಾರತದ ಮೇಲೆ ಗೂಬೆ ಕೂರಿಸಿ ನಗೆಪಾಟಲಿಗೆ ಈಡಾಗಿದೆ.
ದೆಹಲಿ: ಮಾರಕ ಕೊರೊನಾ ವೈರಸ್ ಇಡೀ ಜಗತ್ತಿಗೆ ಹರಡಲು ಚೀನಾ ಕಾರಣ ಅನ್ನೋದು ಇಡೀ ಜಗತ್ತಿಗೆ ಗೊತ್ತಿರುವ ವಿಚಾರ. ಇದೇ ಕಾರಣಕ್ಕೆ ಡ್ರ್ಯಾಗನ್ ರಾಷ್ಟ್ರ ವಿಶ್ವ ಭೂಪಟದ ಒಂದೊಂದು ರಾಷ್ಟ್ರಗಳಿಂದ ಉಗಿಸಿಕೊಳ್ಳುತ್ತಿದೆ. ಆದರೆ ತಾನು ಮಾಡಿರುವ ತಪ್ಪನ್ನು ಭಾರತದ ಮೇಲೆ ಹಾಕಲು ಈಗ ಚೀನಾ ಕುತಂತ್ರ ನಡೆಸಿದ್ದು, ಕೊರೊನಾ ವೈರಸ್ ಹರಡಲು ಭಾರತ ಕಾರಣ ಎಂಬ ಅವೈಜ್ಞಾನಿಕ ಮಾಹಿತಿ ನೀಡಿದೆ. ಡ್ರ್ಯಾಗನ್ ದೇಶದ ಹೇಳಿಕೆ ಜಾಗತಿಕವಾಗಿ ಅಪಹಾಸ್ಯಕ್ಕೆ ಗುರಿಯಾಗಿದೆ.
ಕೊರೊನಾ ವೈರಸ್ ಮೂಲ ಭಾರತ ಎಂದು ಆರೋಪಿಸಿರುವ ಚೀನಾ. ಭಾರತದಲ್ಲಿ 2019ರ ಬೇಸಿಗೆಯಲ್ಲಿ ಕೊರೊನಾ ವೈರಸ್ ಕಂಡುಬಂದಿದೆ. ಅಲ್ಲಿಂದ ಪ್ರಾಣಿಗಳ ಮೂಲಕ ವುಹಾನ್‌ಗೆ ರವಾನೆಯಾಗಿದೆ ಎಂದು ಚೈನೀಸ್ ಅಕಾಡೆಮಿ ಸೈನ್ಸಸ್‌ನ ವಿಜ್ಞಾನಿಗಳು ಹೇಳಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗಿದ್ದರಿಂದ ವುಹಾನ್ ಈ ಸೋಂಕಿನ ಮೂಲವೆಂದು ಎಲ್ಲರೂ ಆರೋಪಿಸುತ್ತಿದ್ದಾರೆ. ಆದರೆ ಅಸಲಿಗೆ ಕೊರೊನಾ ಹುಟ್ಟಿದ್ದು ಭಾರತದಲ್ಲಿ ಎಂದು ಚೈನೀಸ್ ಅಕಾಡೆಮಿ ಸೈನ್ಸಸ್‌ನ ವಿಜ್ಞಾನಿಗಳು ಆರೋಪಿಸಿದ್ದಾರೆ.
ಚೀನಾದ ಆಧಾರ ರಹಿತ ಮಾಹಿತಿಗೆ ವಿಶ್ವದ ತಜ್ಞರ ತರಾಟೆ ಇನ್ನು ಚೀನಿ ಸಂಶೋಧಕರ ಅಭಿಪ್ರಾಯವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಗ್ಲಾಸ್ಗೋ ವಿಶ್ವವಿದ್ಯಾಲಯದ ತಜ್ಞ ಡೇವಿಡ್ ರಾಬರ್ಟ್ಸನ್, ಚೀನಾದ ಸಂಶೋಧಕರು ಪ್ರಸ್ತಾಪಿಸಿದ ಸಿದ್ಧಾಂತ ಬಹಳ ದೋಷಪೂರಿತ ಎಂದು ಹರಿಹಾಯ್ದಿದ್ದಾರೆ. ಚೀನಿ ಸಂಶೋಧಕರು ಭಾರತವೂ ಸೇರಿದಂತೆ ಬೇರೆ ರಾಷ್ಟ್ರಗಳ ಮೇಲೆ ಅಪವಾದ ಹೊರಿಸುವುದನ್ನು ಬಿಟ್ಟು, ವೈರಸ್ ಹರಡಲು ಕಾರಣವಾದ ನೈಜ ಸಂಗತಿಗಳತ್ತ ಗಮನಹರಿಸಲಿ ಎಂದು ಡೇವಿಡ್ ವ್ಯಂಗ್ಯವಾಡಿದ್ದಾರೆ.
ಒಟ್ನಲ್ಲಿ ಈ ಹಿಂದೆ ಇಟಲಿ, ಅಮೆರಿಕ ಮತ್ತು ಯುರೋಪ್ ದೇಶಗಳ ಮೇಲೆ ಚೀನಾ ಇಂತಹ ಆರೋಪ ಮಾಡಿ, ಅದನ್ನು ಸಮರ್ಥಿಸಿಕೊಳ್ಳಲು ಆಧಾರಗಳಿಲ್ಲದೇ ಜಾಗತಿಕವಾಗಿ ಚೀನಾ ತಲೆ ತಗ್ಗಿಸಿತ್ತು. ಈಗ ಭಾರತದ ಮೇಲೆ ಗೂಬೆ ಕೂರಿಸಲು ಹೋಗಿ ಅಪಹಾಸ್ಯಕ್ಕೆ ಈಡಾಗಿದೆ. ಕೊರೊನಾ ಹುಟ್ಟಿದ್ದು ಚೀನಾದಲ್ಲೇ ಅಂತ ಈಗ ಹುಟ್ಟಿದ ಮಕ್ಕಳು ಬೇಕಾದ್ರೂ ಹೇಳ್ತಾರೆ.