ದೆಹಲಿ: ದಲೈಲಾಮಾ (Dalai Lama) ಮೇಲೆ ಬೇಹುಗಾರಿಕೆ ನಡೆಸುತ್ತಿದ್ದ ಶಂಕಿತ ಚೀನಾ ಮಹಿಳೆಯೊಬ್ಬರನ್ನು ಇಂದು ಬಿಹಾರದ ಗಯಾ (Gaya) ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಆಕೆಯನ್ನು ಮತ್ತೆ ಚೀನಾಕ್ಕೆ (China) ಗಡಿಪಾರು ಮಾಡುವ ಸಾಧ್ಯತೆ ಇದೆ. ಇಂದು ಬೆಳಗ್ಗೆ ದಲೈಲಾಮಾ ಅವರು ಬಿಹಾರ ಜಿಲ್ಲೆಯಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವುದರಿಂದ ಸ್ಥಳೀಯ ಪೊಲೀಸರು ಭದ್ರತಾ ಎಚ್ಚರಿಕೆಯನ್ನು ನೀಡಿದ್ದರು. ಸಾಂಗ್ ಕ್ಸಿಯೋಲಾನ್ ಎಂದು ಗುರುತಿಸಲಾದ ಶಂಕಿತ ಚೀನೀ ಗೂಢಚಾರಿಯ ರೇಖಾಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ.ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿದ್ದು, ಅಧಿಕಾರಿಗಳು ಆಕೆಯ ಬಗ್ಗೆ ಮಾಹಿತಿ ನೀಡುವಂತೆ ನಿವಾಸಿಗಳನ್ನು ವಿನಂತಿಸಿದ್ದಾರೆ. ಮಾಹಿತಿ ಪ್ರಕಾರ ಶಂಕಿತ ಚೀನೀ ಗೂಢಚಾರರು ಒಂದು ವರ್ಷಕ್ಕೂ ಹೆಚ್ಚು ಕಾಲ ಬೋಧಗಯಾ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ವಾಸಿಸುತ್ತಿದ್ದರು. ಆದರೆ, ಚೀನಾದ ಮಹಿಳೆಯ ವಾಸ್ತವ್ಯದ ಬಗ್ಗೆ ವಿದೇಶಿ ವಿಭಾಗದಲ್ಲಿ ಯಾವುದೇ ದಾಖಲೆಗಳಿಲ್ಲ.
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಎರಡು ವರ್ಷಗಳಿಂದ ಸ್ಥಗಿತವಾಗಿದ್ದ ಬೋಧಗಯಾಕ್ಕೆ ದಲೈ ಲಾಮಾ ಅವರು ತಮ್ಮ ವಾರ್ಷಿಕ ಪ್ರವಾಸವನ್ನು ಈ ವರ್ಷ ಪುನರಾರಂಭಿಸಿದ್ದಾರೆ.
Bihar | Security agencies searching for a Chinese woman in Gaya, suspected of spying on Dalai Lama, the sketch of the woman released.
These days Dalai Lama is travelling in Bodh Gaya, Bihar. pic.twitter.com/xj7gvUTYPO
— ANI (@ANI) December 29, 2022
ಮಹಾಬೋಧಿ ದೇಗುಲ ಸಂಕೀರ್ಣ ಮತ್ತು ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ. ದಲೈಲಾಮಾ ಅವರು ಇಂದು (ಗುರುವಾರ) ಬೆಳಿಗ್ಗೆ ‘ಕಾಲ್ ಚಕ್ರ’ ಮೈದಾನದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅವರು ಡಿಸೆಂಬರ್ 31 ರವರೆಗೆ ಮೂರು ದಿನಗಳ ಕಾಲ ಪ್ರತಿದಿನ ತಮ್ಮ ಪ್ರವಚನ ನೀಡಲು ನಿರ್ಧರಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:52 pm, Thu, 29 December 22