ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ರಾಜ್ನ (Prayagraj)ಮೋತಿಲಾಲ್ ನೆಹರು ಆಸ್ಪತ್ರೆಯಲ್ಲಿ (Motilal Nehru Hospital )170 ಕ್ಕೂ ಹೆಚ್ಚು ಮಕ್ಕಳನ್ನು ದೀರ್ಘಕಾಲದ ಕಾಯಿಲೆಗಳು, ಆಕ್ಸಿಜನ್ ಬೆಂಬಲ ಅಗತ್ಯವಿರುವ ಎನ್ಸೆಫಾಲಿಟಿಸ್ ಮತ್ತು ನ್ಯುಮೋನಿಯಾದಂತಹ ವೈರಲ್ ಜ್ವರದಿಂದಾಗಿ ಇಲ್ಲಿ ದಾಖಲಿಸಲಾಗಿದೆ ಎಂದು ಪ್ರಯಾಗರಾಜ್ ಸಿಎಮ್‌ಒ ಡಾ ನಾನಕ್ ಸರನ್ ಭಾನುವಾರ ಹೇಳಿದರು.
“ಕೆಲವು ದಿನಗಳ ಹಿಂದೆ, ನಾನು ಮಕ್ಕಳ ವಿಭಾಗವನ್ನು ಪರೀಕ್ಷಿಸಿದಾಗ, 120 ಹಾಸಿಗೆಗಳು ಇದ್ದವು. ನಾವು 171 ರೋಗಿಗಳನ್ನು ದಾಖಲಿಸಿದ್ದೇವೆ. ಆದ್ದರಿಂದ, ನಾವು 2-3 ಮಕ್ಕಳನ್ನು ಒಂದೇ ಹಾಸಿಗೆಯಲ್ಲಿ ಸ್ಥಳಾಂತರಿಸಿದ್ದೇವೆ. ಡೆಂಗ್ಯೂ ಪ್ರಕರಣಗಳು ಇಲ್ಲಿ ಕಡಿಮೆ. ಕೆಲವು ದೀರ್ಘಕಾಲದ ರೋಗಗಳು ಎನ್ಸೆಫಾಲಿಟಿಸ್ ಮತ್ತು ನ್ಯುಮೋನಿಯಾದಂತೆ ಅವರಿಗೆ ಇಲ್ಲಿ ಆಮ್ಲಜನಕದ ಬೆಂಬಲ ಬೇಕಾಗುತ್ತದೆ ಎಂದು ಅವರು ಹೇಳಿದರು.
“200 ಹಾಸಿಗೆಗಳ ವಾರ್ಡ್ ನಿರ್ಮಾಣ ಹಂತದಲ್ಲಿದೆ. ನಾವು ಮಕ್ಕಳಿಗೆ ಎಲ್ಲಾ ರೀತಿಯ ಚಿಕಿತ್ಸೆಯನ್ನು ಒದಗಿಸುತ್ತಿದ್ದೇವೆ” ಎಂದು ಅವರು ಹೇಳಿದರು.
Children’s hospital under Motilal Nehru Hospital has 120 beds,but it always receives more patients than no.of beds there. Till 2 days ago,171 children were admitted at the hospital,sometimes 2-3 children admitted on each bed. 200-bed ward for children coming up soon:CMO Prayagraj pic.twitter.com/t4lg51Y376
— ANI UP (@ANINewsUP) September 5, 2021
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಹವು ಕಡಿಮೆಯಾಗುತ್ತಿರುವುದರಿಂದ, ಮಕ್ಕಳಲ್ಲಿ ದೀರ್ಘಕಾಲದ ಕಾಯಿಲೆಗಳು ಮತ್ತು ವೈರಲ್ ಜ್ವರದ ಅನೇಕ ಪ್ರಕರಣಗಳು ಕಂಡುಬರುತ್ತವೆ. ಮೋತಿಲಾಲ್ ನೆಹರು ಆಸ್ಪತ್ರೆಯಲ್ಲಿ ಮೂರ್ನಾಲ್ಕು ರೋಗಿಗಳನ್ನು ಒಂದೇ ಹಾಸಿಗೆಯಲ್ಲಿ ಮಲಗಿಸಲಾಗಿದೆ. ಇನ್ನು ಕೆಲವರು ನೆಲದ ಮೇಲೆ ಹಾಸಿದ ಹಾಸಿಗೆಗಳ ಮೇಲೆ ಚಿಕಿತ್ಸೆ ಪಡೆಯುತ್ತಿದ್ದರು.
ಈ ಬಗ್ಗೆ ಎಎನ್ಐ ಸುದ್ದಸಂಸ್ಥೆಯೊಂದಿಗೆ ಮಾತನಾಡಿದ ಆಸ್ಪತ್ರೆಯಲ್ಲಿ ದಾಖಲಾದ ಮಗುವಿನ ತಂದೆಯಾದ ನರೇಂದ್ರ ಕುಮಾರ್, “ನನ್ನ ಮಗುವನ್ನು ಇಲ್ಲಿ ಸೇರಿಸಲಾಗಿದೆ, ವೈದ್ಯರು ಗಮನ ನೀಡುತ್ತಿಲ್ಲ. ಹಾಸಿಗೆ ಇಲ್ಲ. ಆಸ್ಪತ್ರೆಯಿಂದ ನೀಡಿದ ಔಷಧದಿಂದ ನನ್ನ ಮಗುವಿಗೆ ಸೋಂಕು ತಗಲುತ್ತಿದೆ ಎಂದಿದ್ದಾರೆ. ಮಯಾಂಕ್ ಕುಮಾರ್ ಎಂಬವರ ರ ಮಗು ಆಮ್ಲಜನಕದ ಬೆಂಬಲದಲ್ಲಿದ್ದು, “ಆಡಳಿತವು ಸಂಪೂರ್ಣವಾಗಿ ಅಸಡ್ಡೆ ತೋರಿಸುತ್ತಿದೆ. ತುರ್ತು ಚಿಕಿತ್ಸೆ ಅಗತ್ಯವಿರುವ ಅನೇಕ ಮಕ್ಕಳು ಇದ್ದಾರೆ” ಎಂದು ಹೇಳಿರುವುದಾಗಿ ಎನ್ ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: Nipah Virus ಕೇರಳದಲ್ಲಿ ಮತ್ತೆ ಕಾಣಿಸಿಕೊಂಡ ನಿಫಾ: ರೋಗ ಲಕ್ಷಣಗಳೇನು? ತಡೆಯುವುದು ಹೇಗೆ?
ಇದನ್ನೂ ಓದಿ: ಮುಜಾಫರ್ ನಗರದಲ್ಲಿ ಕಿಸಾನ್ ಮಹಾಪಂಚಾಯತ್; ಕೃಷಿ ಕಾನೂನು ವಿರುದ್ಧ ಪ್ರತಿಭಟನೆ ಮುಂದುವರಿಸಲು ರೈತರ ನಿರ್ಧಾರ
(Chronic diseases 171 children have been admitted to Motilal Nehru Hospital of Prayagraj in Uttar Pradesh)