ನೋಕ್ಕು ಕೂಲಿಗಾಗಿ ಇಸ್ರೊ ಟ್ರಕ್ ತಡೆದರು: ಕೇರಳಕ್ಕೆ ಕಳಂಕ ತರುತ್ತಿರುವ ನೊಕ್ಕು ಕೂಲಿ ಬಗ್ಗೆ ನೀವು ತಿಳಿಯಬೇಕಾದ ಮಾಹಿತಿ ಇಲ್ಲಿದೆ

ಈ ಪದ್ಧತಿಯನ್ನು ಕೇರಳದಲ್ಲಿ ಈಗಾಗಲೇ ನಿಷೇಧಿಸಲಾಗಿದೆ. ಆದರೂ ಸರ್ಕಾರಿ ಸ್ವಾಮ್ಯದ ಪ್ರಭಾವಿ ಸಂಸ್ಥೆಯ ವಿರುದ್ಧವೇ ಇಂಥ ಬೆದರಿಕೆ ಒಡ್ಡಿರುವುದನ್ನು ಕೇರಳ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ನೋಕ್ಕು ಕೂಲಿಗಾಗಿ ಇಸ್ರೊ ಟ್ರಕ್ ತಡೆದರು: ಕೇರಳಕ್ಕೆ ಕಳಂಕ ತರುತ್ತಿರುವ ನೊಕ್ಕು ಕೂಲಿ ಬಗ್ಗೆ ನೀವು ತಿಳಿಯಬೇಕಾದ ಮಾಹಿತಿ ಇಲ್ಲಿದೆ
ಇಸ್ರೋ - ISRO (ಸಾಂದರ್ಭಿಕ ಚಿತ್ರ)
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 06, 2021 | 9:59 AM

ಕೊಚ್ಚಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (Indian Space Research Organisation – ISRO) ಸೇರಿದ್ದ ಟ್ರಕ್ ಒಂದನ್ನು ಸ್ಥಳೀಯರು ತಡೆದು, ಅದರಲ್ಲಿದ್ದ ಸರಕು ಇಳಿಸುವ ಮುನ್ನ ತಮಗೆ ‘ನೋಕ್ಕು ಕೂಲಿ’ (ನೋಡಿಕೊಂಡು ಸುಮ್ಮನಿರಲು ಕೂಲಿ) ಕೊಡಬೇಕೆಂದು ತಾಕೀತು ಮಾಡಿದ ಅವಮಾನಕಾರಿ ಘಟನೆ ಭಾನುವಾರ ನಡೆದಿದೆ. ಈ ಪದ್ಧತಿಯನ್ನು ಕೇರಳದಲ್ಲಿ ಈಗಾಗಲೇ ನಿಷೇಧಿಸಲಾಗಿದೆ. ಆದರೂ ಸರ್ಕಾರಿ ಸ್ವಾಮ್ಯದ ಪ್ರಭಾವಿ ಸಂಸ್ಥೆಯ ವಿರುದ್ಧವೇ ಇಂಥ ಬೆದರಿಕೆ ಒಡ್ಡಿರುವುದನ್ನು ಕೇರಳ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ತಿರುವನಂಪುರಂನ ತುಂಬಾ ಎಂಬಲ್ಲಿರುವ ಇಸ್ರೊ ಕೇಂದ್ರಕ್ಕೆ ಟ್ರಕ್ ಒಂದರಲ್ಲಿ ಕೆಲ ವಸ್ತುಗಳನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ಒಂದಿಷ್ಟು ಜನರು ರಸ್ತೆಯ ಮೇಲೆ ಸೇರಿ ಟ್ರಕ್​ ಅಡ್ಡಗಟ್ಟಿದರು. ಟ್ರಕ್​ ಅನ್​ಲೋಡ್ ಮಾಡುವ ಮೊದಲು ‘ನೋಕ್ಕು ಕೂಲಿ’ ಕೊಡಬೇಕು ಎಂದು ಒತ್ತಾಯಿಸಿದರು ಎಂದು ಇಸ್ರೊ ಅಧಿಕಾರಿ ರಾಜೇಶ್ವರಿ ಎಂಬುವವರನ್ನು ಉಲ್ಲೇಖಿಸಿ ಎನ್​ಡಿಟಿವಿ ವರದಿ ಮಾಡಿದೆ. ಕೇವಲ ಎರಡು ದಿನಗಳ ಹಿಂದಷ್ಟೇ ಕೇರಳ ಹೈಕೋರ್ಟ್ ಈ ಪದ್ಧತಿಗೆ ಸಂಪೂರ್ಣ ಇತಿಶ್ರೀ ಹಾಕುವಂತೆ ಸೂಚಿಸಿತ್ತು. ಆದರೆ ಭಾನುವಾರ ಮತ್ತೆ ಒಂದಿಷ್ಟು ಜನರು ಬೀದಿಗಳಿದು ‘ನೋಕ್ಕು ಕೂಲಿ’ ಕೊಡುವಂತೆ ಆಗ್ರಹಿಸಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ ಜನರನ್ನು ಚೆದುರಿಸಿದ ನಂತರ ಟ್ರಕ್ ಇಸ್ರೊ ಪ್ರಾಂಗಣದೊಳಗೆ ಪ್ರವೇಶಿಸಲು ಸಾಧ್ಯವಾಯಿತು.

ತುಂಬಾ ಪ್ರದೇಶದಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ (Vikram Sarabhai Space Centre – VSSC) ಟ್ರಕ್ ಪ್ರವೇಶಿಸಲು ಬಿಡುತ್ತಿಲ್ಲ ಎಂದು ಇಸ್ರೊ ಅಧಿಕಾರಿಗಳು ದೂರು ಸಲ್ಲಿಸಿದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಸ್ವತಃ ಪೊಲೀಸ್ ಕಮಿಷನರ್ ಸ್ಥಳಕ್ಕೆ ಭೇಟಿ ನೀಡಿ ಜನರೊಂದಿಗೆ ಮಾತನಾಡಿ, ಗುಂಪು ಚೆದುರಿಸಿದರು. ವಿವಾದ ಬಗೆಹರಿದ ನಂತರ ಕೂಲಿ ಕಾರ್ಮಿಕರು ಮತ್ತು ಇತರ ಸಾರ್ವಜನಿಕರು ಅಲ್ಲಿಂದ ತೆರಳಿದರು ಎಂದು ತುಂಬಾ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.

ಟ್ರಕ್​ನಲ್ಲಿ ಒಟ್ಟು 184 ಟನ್ ಸರಕು ಇತ್ತು. ಬಾಹ್ಯಾಕಾಶ ಕೇಂದ್ರದ ಬಾಗಿಲಿನಲ್ಲಿ ಟ್ರಕ್ ನಿಲ್ಲಿಸಿದ್ದ ಕೂಲಿಕಾರ್ಮಿಕರು ಪ್ರತಿ ಟನ್​ಗೆ ₹ 2,000 ನೀಡಬೇಕು ಎಂದು ಆಗ್ರಹಿಸುತ್ತಿದ್ದರು. ಟ್ರಕ್​ನಲ್ಲಿದ್ದ ಸರಕು ಇಳಿಸಲು ಟಾಟಾ ಕಂಪನಿಯೊಂದಿಗೆ ಇಸ್ರೋ ಒಪ್ಪಂದ ಮಾಡಿಕೊಂಡಿತ್ತು. ಹೆಚ್ಚು ತೂಕ ಮತ್ತು ಹೆಚ್ಚು ಸೂಕ್ಷ್ಮ ರೀತಿಯ ಯಂತ್ರೋಪಕರಣಗಳನ್ನು ಟ್ರಕ್​ನಿಂದ ಇಳಿಸಲು ಕ್ರೇನ್ ಮತ್ತು ಇತರ ಉಪಕರಣಗಳು ಬೇಕಿತ್ತು. ಇದನ್ನು ಮಾನವಶ್ರಮದಿಂದ ಮಾಡಲು ಆಗುತ್ತಿರಲಿಲ್ಲ. ಇದೀಗ ಟ್ರಕ್ ಬಾಹ್ಯಾಕಾಶ ಕೇಂದ್ರದ ಒಳಗೆ ಬಂದಿದೆ. ಆದರೆ ಸೋಮವಾರದಿಂದ ಮತ್ತಷ್ಟು ಗೊಂದಲ ಉಂಟಾಗಬಹುದು ಎಂದು ಹೆಸರು ಹೇಳಲು ಇಚ್ಛಿಸದ ಇಸ್ರೊ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ದಿ ನ್ಯೂಸ್ ಮಿನಟ್ ವರದಿ ಮಾಡಿದೆ.

ಬಾಹ್ಯಾಕಾಶ ಕೇಂದ್ರವನ್ನು ಸ್ಥಾಪಿಸಲು ಸ್ಥಳೀಯರಿಂದ ಭೂಮಿ ಪಡೆದುಕೊಳ್ಳುವಾಗ ಅವರಿಗೆ ಉದ್ಯೋಗ ಕೊಡುವ ಭರವಸೆ ನೀಡಲಾಗಿತ್ತು. ಆದರೆ ಹಲವು ವರ್ಷಗಳ ನಂತರವೂ ಈ ಭರವಸೆ ಈಡೇರಿಲ್ಲ. ಹೀಗಾಗಿಯೇ ಅವರು ಯಂತ್ರೋಪಕರಣಗಳನ್ನು ಬಳಸಿ ಸರಕು ಇಳಿಸುವುದನ್ನು ವಿರೋಧಿಸುತ್ತಿದ್ದಾರೆ. ಸರಕು ಇಳಿಸಲು ಯಂತ್ರೋಪಕರಣ ಬಳಕೆ ಅನಿವಾರ್ಯವಾಗಿದ್ದರೆ ನೊಕ್ಕು ಕೂಲಿ ಕೊಡಬೇಕು ಎಂದು ಆಗ್ರಹಿಸುತ್ತಾರೆ. ಟ್ರಕ್ ತಡೆದವರ ವಿರುದ್ಧ ಕ್ರಮ ಜರುಗಿಸುವಂತೆ ಕೇರಳ ಸರ್ಕಾರದ ಕಾರ್ಮಿಕ ಸಚಿವ ವಿ.ಶಿವನ್​ಕುಟ್ಟಿ ಜಿಲ್ಲಾ ಕಾರ್ಮಿಕ ಅಧಿಕಾರಿಗೆ ಸೂಚಿಸಿದ್ದಾರೆ.

ಸರಕು ಇಳಿಸುವುದನ್ನು ಸುಮ್ಮನೆ ನೋಡುತ್ತಾ ಇರಲು ಹಮಾನಿಗಳು ನೊಕ್ಕು ಕೂಲಿ ಕೊಡಬೇಕು ಎಂದು ಆಗ್ರಹಿಸುತ್ತಾರೆ. ಸಂಘಟಿತ ಕಾರ್ಮಿಕ ಒಕ್ಕೂಟಗಳು ಈ ಪದ್ಧತಿಯನ್ನು ಸುಲಿಗೆಯ ಮಾರ್ಗವನ್ನಾಗಿಸಿಕೊಂಡಿವೆ ಎಂಬ ಆರೋಪಗಳೂ ಈಚೆಗೆ ಕೇಳಿ ಬಂದಿತ್ತು. ಈ ಪದ್ಧತಿಯಿಂದ ತಮಗೆ ಆಗುತ್ತಿರುವ ತೊಂದರೆಯ ಬಗ್ಗೆ ಕೊಲ್ಲಮ್ ಮೂಲದ ಉದ್ಯಮಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಚಾರನೆಗೆ ಅಂಗೀಕರಿಸಿತ್ತು.

‘ನೋಕ್ಕುಕೂಲಿ ಪದ್ಧತಿಯು ಕೇರಳದ ಚಿತ್ರಣವನ್ನೇ ಹಾಳು ಮಾಡುತ್ತಿದೆ. ಇದನ್ನು ನಿರ್ಮೂಲನ ಮಾಡಬೇಕು. ಇದೇ ವೇಳೆ ಕೂಲಿ ಕಾರ್ಮಿಕರ ಹಕ್ಕುಗಳನ್ನು ಕಾನೂನು ಬದ್ಧವಾಗಿ ರಕ್ಷಿಸಬೇಕು’ ಎಂದು ನ್ಯಾಯಾಲಯವು ಹೇಳಿತ್ತು. ಮೇ 1, 2018ರಂದು ರಾಜ್ಯ ಸರ್ಕಾರವು ಈ ಪದ್ಧತಿಯನ್ನು ನಿಷೇಧಿಸಿತ್ತು. ಕೊವಿಡ್-19ರ ವೇಳೆ ನೊಕ್ಕುಕೂಲಿಯಿಂದ ತೊಂದರೆಗಳಾಗಿದ್ದು ವರದಿಯಾದಾಗ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಹ ಈ ಪದ್ಧತಿಯನ್ನು ಖಂಡಿಸಿದ್ದರು.

(Residents of Thumba Stop ISRO Truck for NokkuKooli or gawking wages Government Intervenes)

ಇದನ್ನೂ ಓದಿ: ಚಂದ್ರಯಾನ -2ರ ನಂತರ ಆಗಸ್ಟ್ 12ರಂದು ಇಒಎಸ್3 ಉಪಗ್ರಹ ಉಡಾವಣೆ ಮಾಡಲಿದೆ ಇಸ್ರೊ

ಇದನ್ನೂ ಓದಿ: Chandrayaan 2 ಜುಲೈ 22 ಇಸ್ರೊಗೆ ಐತಿಹಾಸಿಕ ದಿನ; ಚಂದ್ರಯಾನ-2 ಬಗ್ಗೆ ಇಲ್ಲಿದೆ ಆಸಕ್ತಿಕರ ಸಂಗತಿ

Published On - 10:01 pm, Sun, 5 September 21

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ