ಇನ್​ಫೋಸಿಸ್ ದೇಶವಿರೋಧಿ ಕಂಪನಿ ಎನ್ನುವುದು ನಮ್ಮ ನಿಲುವಲ್ಲ: ಪಾಂಚಜನ್ಯ ಲೇಖನಕ್ಕೆ ಆರ್​ಎಸ್​ಎಸ್​ ಸ್ಪಷ್ಟನೆ

ಇನ್​ಫೋಸಿಸ್ ಈ ಹಿಂದೆಯೂ ನಕ್ಸಲೀಯರು, ಎಡಪಂಥೀಯರು ಮತ್ತು ತುಕ್ಡೆತುಕ್ಡೆ ಗುಂಪುಗಳನ್ನು ಬೆಂಬಲಿಸಿತ್ತು ಎಂದು ಲೇಖನದಲ್ಲಿ ಆರೋಪಿಸಲಾಗಿತ್ತು.

ಇನ್​ಫೋಸಿಸ್ ದೇಶವಿರೋಧಿ ಕಂಪನಿ ಎನ್ನುವುದು ನಮ್ಮ ನಿಲುವಲ್ಲ: ಪಾಂಚಜನ್ಯ ಲೇಖನಕ್ಕೆ ಆರ್​ಎಸ್​ಎಸ್​ ಸ್ಪಷ್ಟನೆ
ಇನ್​ಫೋಸಿಸ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 05, 2021 | 5:37 PM

ದೆಹಲಿ: ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್​) ತನ್ನ ಮುಖವಾಣಿ ಪಾಂಚಜನ್ಯ ನಿಯತಕಾಲಿಕೆಯಲ್ಲಿ ಇನ್​ಫೋಸಿಸ್​ನ ಕಾರ್ಯವೈಖರಿ ಕುರಿತು ಆಕ್ಷೇಪಿಸಿದ್ದ ಲೇಖನವೊಂದರಿಂದ ಅಂತರ ಕಾಯ್ದುಕೊಂಡಿದೆ. ಆದಾಯ ತೆರಿಗೆ ಮತ್ತು ಜಿಎಸ್​ಟಿ ಸಂಗ್ರಹಕ್ಕಾಗಿ ಇನ್​ಫೋಸಿಸ್ ರೂಪಿಸಿ ವೆಬ್​ಪೋರ್ಟಲ್​ನಲ್ಲಿ ಹಲವು ಲೋಪಗಳು ಕಾಣಿಸಿಕೊಂಡಿದ್ದವು. ‘ಪಾಂಚಜನ್ಯ’ದಲ್ಲಿ ಪ್ರಕಟವಾಗಿದ್ದ ಲೇಖನವು ಈ ಲೋಪಗಳ ಹಿಂದೆ ಭಾರತ ವಿರೋಧಿ ಸಂಚು ಇರಬಹುದು ಎಂದು ಶಂಕಿಸಿತ್ತು.

‘ಭಾರತದ ಆರ್ಥಿಕ ಹಿತಾಸಕ್ತಿಗೆ ಧಕ್ಕೆ ತರುವ ದೇಶವಿರೋಧಿ ಶಕ್ತಿಗಳ ಪ್ರಭಾವದಿಂದ ಇನ್​ಫೋಸಿಸ್ ಹೀಗೆ ವರ್ತಿಸುತ್ತಿದೆಯೇ’ ಎಂದು ಆರ್​ಎಸ್​ಎಸ್​ ಮುಖವಾಣಿಯ ಇತ್ತೀಚಿನ ಸಂಚಿಕೆಯಲ್ಲಿ ಪ್ರಶ್ನಿಸಲಾಗಿತ್ತು. ಖ್ಯಾತ ಉದ್ಯಮಿ ನಾರಾಯಣಮೂರ್ತಿ ಸ್ಥಾಪಿಸಿರುವ ಇನ್​ಫೋಸಿಸ್ ಸಂಸ್ಥೆಯು ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿದ್ದು ಹಲವು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಈ ವಿವಾದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಆರ್​ಎಸ್​ಎಸ್​ ವಕ್ತಾರ ಸುನಿಲ್ ಅಂಬೇಕರ್, ‘ಪಾಂಚಜನ್ಯದಲ್ಲಿ ಪ್ರಕಟವಾಗಿರುವ ಲೇಖನದಲ್ಲಿರುವ ಅಂಶಗಳು ಲೇಖಕರ ವೈಯಕ್ತಿಕ ಅಭಿಪ್ರಾಯ. ಇದನ್ನು ಆರ್​ಎಸ್​ಎಸ್​ ಅಭಿಪ್ರಾಯ ಎಂದು ಭಾವಿಸಬೇಕಿಲ್ಲ ಎಂದು ಹೇಳಿದ್ದಾರೆ.

‘ಭಾರತೀಯ ಕಂಪನಿಯಾಗಿ ಇನ್​ಫೋಸಿಸ್ ದೇಶದ ಪ್ರಗತಿಗೆ ಸಾಕಷ್ಟು ಕೊಡಗೆ ನೀಡಿದೆ. ಪೋರ್ಟಲ್ ನಿರ್ವಹಣೆ ವಿಚಾರದಲ್ಲಿ ಕೆಲ ಸಮಸ್ಯೆಗಳು ಕಂಡು ಬಂದಿರಬಹುದು. ಈ ಲೇಖನದಲ್ಲಿ ಪ್ರಸ್ತಾಪವಾಗಿರುವ ವಿಚಾರಗಳನ್ನು ಸಂಘದ ಪ್ರತಿಪಾದನೆ ಎಂದು ಭಾವಿಸಬಾರದು. ಅದು ಲೇಖಕರ ವೈಯಕ್ತಿಕ ಅಭಿಪ್ರಾಯ’ ಎಂದು ಅವರು ತಿಳಿಸಿದ್ದಾರೆ.

ತೆರಿಗೆ ಪೋರ್ಟಲ್ ನಿರ್ವಹಣೆ ಸಮಸ್ಯೆಯ ಬಗ್ಗೆ ಚರ್ಚಿಸಲು ಇನ್​ಫೋಸಿಸ್ ಸಿಇಒ ಸಲಿಲ್ ಪಾರೆಖ್ ಅವರನ್ನು ಕಳೆದ ತಿಂಗಳು ದೆಹಲಿಗೆ ಕರೆಸಿಕೊಂಡಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪೋರ್ಟಲ್ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಸೆಪ್ಟೆಂಬರ್ 15ರ ಒಳಗೆ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ತಾಕೀತು ಮಾಡಿದ್ದರು. ಪೋರ್ಟಲ್ ಆರಂಭವಾದ ಸತತ ಎರಡೂವರೆ ತಿಂಗಳ ನಂತರವೂ ಸಮಸ್ಯೆಗಳು ಮುಂದುವರಿದಿರುವ ಕುರಿತು ವಿತ್ತ ಸಚಿವರು ಆಕ್ಷೇಪಿಸಿದ್ದರು. ತೆರಿಗೆದಾರರಿಗೆ ಪದೇಪದೆ ತೊಂದರೆಯಾಗುತ್ತಿರುವ ಬಗ್ಗೆ ವಿವರಣೆ ನೀಡುವಂತೆ ತಾಕೀತು ಮಾಡಿದ್ದರು.

ಪಾಂಚಜನ್ಯದಲ್ಲಿ ಪ್ರಕಟವಾಗಿದ್ದ ಲೇಖನವು ಇನ್​ಫೋಸಿಸ್​ ಸಂಸ್ಥೆಯ ಮೂಲಕ ದೇಶ ವಿರೋಧಿ ಶಕ್ತಿಗಳು ದೇಶದ ಆರ್ಥಿಕ ಸ್ಥಿರತೆಯನ್ನೇ ಹಾಳುಗೆಡವಲು ಯತ್ನಿಸುತ್ತಿವೆಯೇ ಎಂದು ಪ್ರಶ್ನಿಸಿತ್ತು. ಈ ಕಲ್ಪನೆಗಳನ್ನು ಪುಷ್ಟೀಕರಿಸಲು ಯಾವುದೇ ಸಾಕ್ಷ್ಯಗಳು ಇಲ್ಲ. ಅದರೆ ಇನ್​ಫೋಸಿಸ್ ಈ ಹಿಂದೆಯೂ ನಕ್ಸಲೀಯರು, ಎಡಪಂಥೀಯರು ಮತ್ತು ತುಕ್ಡೆತುಕ್ಡೆ ಗುಂಪುಗಳನ್ನು ಬೆಂಬಲಿಸಿತ್ತು ಎಂದು ಆರೋಪಿಸಿತ್ತು.

ಲೇಖನದ ಕುರಿತು ಪ್ರತಿಕ್ರಿಯಿಸಿರುವ ಪಾಂಚಜನ್ಯ ಸಂಪಾದಕ ಹಿತೇಶ್ ಶಂಕರ್, ‘ಇನ್​ಫೋಸಿಸ್ ದೊಡ್ಡ ಕಂಪನಿ. ವಿಶ್ವಾಸಾರ್ಹತೆಯ ಕಾರಣಕ್ಕಾಗಿಯೇ ಸರ್ಕಾರದ ಹಲವು ಪ್ರಮುಖ ಯೋಜನೆಗಳನ್ನು ನಿರ್ವಹಿಸಲು ಇನ್​ಫೋಸಿಸ್​ಗೆ ಅವಕಾಶ ಸಿಕ್ಕಿದೆ. ತೆರಿಗೆ ಪೋರ್ಟಲ್​ನಲ್ಲಿರುವ ಸಮಸ್ಯೆಗಳು ರಾಷ್ಟ್ರೀಯ ಕಾಳಜಿಗೆ ಸಂಬಂಧಿಸಿದ ಪ್ರಶ್ನೆಗಳಾಗಿವೆ. ಇದಕ್ಕೆ ಕಾರಣರಾದವರನ್ನು ಹೊಣೆಗಾರರನ್ನಾಗಿಸಬೇಕು’ ಎಂದು ಆಗ್ರಹಿಸಿದ್ದರು.

(RSS Clarifies on Article in Panchajanya on accusing Infosys as Anti National)

ಇದನ್ನೂ ಓದಿ: ಆದಾಯ ತೆರಿಗೆ ಪೋರ್ಟಲ್​ ಸಮಸ್ಯೆಗಳಿವು; ಇನ್​ಫೋಸಿಸ್ ಸಿಇಒಗೆ ಹಣಕಾಸು ಸಚಿವರು ಬುಲಾವ್ ಕಳಿಸಿದ್ದು ಈ ಕಾರಣಕ್ಕೆ

ಇದನ್ನೂ ಓದಿ: ಆದಾಯ ತೆರಿಗೆ ಇ-ಫೈಲಿಂಗ್​ಗೆ ಹತ್ತಾರು ವಿಘ್ನ: ಹಣಕಾಸು ಇಲಾಖೆಯಿಂದ ಇನ್​ಫೋಸಿಸ್ ಸಿಇಒ ಸಲಿಲ್​ ಪಾರೇಖ್​ಗೆ ಬುಲಾವ್

Published On - 5:36 pm, Sun, 5 September 21

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?