ತಿರುವನಂತಪುರಂ: ಕೇರಳದ ರಾಜಮಲಾದಲ್ಲಿ ಕೆಲವು ದಿನಗಳ ಹಿಂದೆ ಸಂಭವಿಸಿದ ಭೂಕುಸಿತದಲ್ಲಿ ತನ್ನ ಮಾಲೀಕನನ್ನು ಕಳೆದುಕೊಂಡು ಅನಾಥವಾಗಿದ್ದ ಸಾಕುನಾಯಿ ಕೂವಿಯನ್ನು ಸಿವಿಲ್ ಪೊಲೀಸ್ ಅಧಿಕಾರಿ ಅಜಿತ್ ಮಾಧವನ್ ದತ್ತು ಪಡೆದಿದ್ದಾರೆ.
ರಾಜಮಲಾದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಕೂವಿಯ ಮಾಲೀಕ ಮತ್ತು ಆತನ ಕುಟುಂಬಸ್ಥರು ಸಾವನ್ನಪ್ಪಿದ್ದರು. ಹಾಗಾಗಿ, ಹಲವು ದಿನಗಳಿಂದ ಊಟ, ನೀರಿಲ್ಲದೆ ಶ್ವಾನವು ಪರದಾಡಬೇಕಾಯಿತು. ಈ ವೇಳೆಯಲ್ಲಿ ಸ್ಥಳಕ್ಕೆ ಆಗಮಿಸಿದ್ದ ರಕ್ಷಣಾ ಸಿಬ್ಬಂದಿಗೆ ನೆರವಾಗಿದ್ದ ಕೂವಿ 2 ವರ್ಷದ ಮಗುವಿನ ಮೃತದೇಹವನ್ನ ಪತ್ತೆಹಚ್ಚುವಲ್ಲಿ ಸಿಬ್ಬಂದಿಗೆ ನೆರವಾಗಿತ್ತಂತೆ. ಹೀಗಾಗಿ, ಶ್ವಾನದ ಸಾಮರ್ಥ್ಯ ಕಂಡು ದಂಗಾಗಿದ್ದ ಅಜಿತ್ ಅದನ್ನು ದತ್ತು ಪಡೆಯಲು ಮುಂದಾದರು.
ಅಜಿತ್ ಮಾಧವನ್ ಪೊಲೀಸ್ ಶ್ವಾನದಳದಲ್ಲಿ ತರಬೇತುದಾರರಾಗಿದ್ದಾರೆ. ಸದ್ಯ ಈಗ ಕುಟುಂಬದಿಂದ ಬೇರಾಗಿರುವ ಕೂವಿಯನ್ನು ದತ್ತು ಪಡೆದು ಅದಕ್ಕೆ ಆಸರೆ ನೀಡಿದ್ದಾರೆ.
Idukki: Civil police officer Ajith Madhavan, who is also a trainer of police dog squad adopted, Koovi, a dog that lost the family that raised it, in Rajamala landslide.
Koovi helped the rescue team in recovering the body of a 2-year-old landslide victim. #Kerala pic.twitter.com/ZEPxM6ePgv
— ANI (@ANI) August 22, 2020