ಒಡಿಶಾ ಪಟ್ಟಣದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಇಂಟರ್ನೆಟ್ ಸ್ಥಗಿತ; ಶಾಲೆ, ಅಂಗಡಿಗಳು ಬಂದ್

| Updated By: ರಶ್ಮಿ ಕಲ್ಲಕಟ್ಟ

Updated on: Apr 13, 2022 | 9:27 PM

ಹೊಸ ಘರ್ಷಣೆಯ ನಂತರ ಕ್ಯೂಂಜರ್ ಜಿಲ್ಲಾ ಪೊಲೀಸರು ಬುಧವಾರ ಸ್ಥಳೀಯವಾಗಿ ಧ್ವಜ ಮೆರವಣಿಗೆ ನಡೆಸಿದರು. ಮಂಗಳವಾರ ಜಿಲ್ಲಾ ಪೊಲೀಸರು ಎರಡು ಸಮುದಾಯಗಳ ನಡುವೆ ಶಾಂತಿ ಮಧ್ಯಸ್ಥಿಕೆಗೆ ಕರೆ ನೀಡಿದ್ದರು. ಆದರೆ ಬೆರಳೆಣಿಕೆಯಷ್ಟು ಜನರು ಮಾತ್ರ ಬಂದರು.

ಒಡಿಶಾ ಪಟ್ಟಣದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಇಂಟರ್ನೆಟ್ ಸ್ಥಗಿತ; ಶಾಲೆ, ಅಂಗಡಿಗಳು ಬಂದ್
ಒಡಿಶಾದಲ್ಲಿ ಪೊಲೀಸ್ ಪಹರೆ
Follow us on

ಒಡಿಶಾದ (Odisha) ಕ್ಯೂಂಜರ್ (Keonjhar) ಜಿಲ್ಲೆಯ ಜೋಡಾದ ಗಣಿಗಾರಿಕೆ ಪಟ್ಟಣದಲ್ಲಿ ಎರಡು ಸಮುದಾಯಗಳ ನಡುವಿನ ಘರ್ಷಣೆಯ ಒಂದು ದಿನದ ನಂತರ ಮಂಗಳವಾರ ತಡರಾತ್ರಿ ಹೆಚ್ಚು ಹಿಂಸಾಚಾರ ನಡೆದಿದೆ. ಪೊಲೀಸರ ಪ್ರಕಾರ ಜೋಡಾ-ಬನೇಕಲಾ ರಸ್ತೆಯಲ್ಲಿ ಎರಡು ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿದವು. ನಂತರ ಆ ಪ್ರದೇಶದ ಸಹೀದ್ ನಗರ ಚಕ್‌ನಲ್ಲಿ ರಸ್ತೆ ತಡೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಮತ್ತು ಅಗ್ನಿಶಾಮಕ ಸೇವೆಗೆ ಸೇರಿದ ವಾಹನಗಳನ್ನು ಧ್ವಂಸಗೊಳಿಸಲಾಯಿತು. ಗುರುವಾರದವರೆಗೆ ಇಂಟರ್ನೆಟ್ ಸ್ಥಗಿತ (Internet suspension) ಇರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ . 16 ತುಕಡಿಗಳ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಸಿಆರ್​​ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಿತ ಆದೇಶಗಳು ಮುಂದುವರೆಯುತ್ತವೆ. ಗುರುವಾರದವರೆಗೆ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಎಲ್ಲಾ ಶಿಕ್ಷಣ ಸಂಸ್ಥೆಗಳು ಮತ್ತು ಅಂಗಡಿಗಳನ್ನು ಮುಚ್ಚಲಾಗಿದೆ ಎಂದು ಬಾರ್ಬಿಲ್ ಉಪವಿಭಾಗದ ಪೊಲೀಸ್ ಅಧಿಕಾರಿ ಹಿಮಾಂಶು ಬೆಹೆರಾ ತಿಳಿಸಿದ್ದಾರೆ. ಹೊಸ ಘರ್ಷಣೆಯ ನಂತರ ಕ್ಯೂಂಜರ್ ಜಿಲ್ಲಾ ಪೊಲೀಸರು ಬುಧವಾರ ಸ್ಥಳೀಯವಾಗಿ ಧ್ವಜ ಮೆರವಣಿಗೆ ನಡೆಸಿದರು. ಮಂಗಳವಾರ ಜಿಲ್ಲಾ ಪೊಲೀಸರು ಎರಡು ಸಮುದಾಯಗಳ ನಡುವೆ ಶಾಂತಿ ಮಧ್ಯಸ್ಥಿಕೆಗೆ ಕರೆ ನೀಡಿದ್ದರು. ಆದರೆ ಬೆರಳೆಣಿಕೆಯಷ್ಟು ಜನರು ಮಾತ್ರ ಬಂದರು. ಸೋಮವಾರ ಮಧ್ಯಾಹ್ನ ಜೋಡಾ ಪಟ್ಟಣದ ಮುಸ್ಲಿಂ ಪ್ರಾಬಲ್ಯವಿರುವ ವಾರ್ಡ್‌ನ ಬನೇಕೆಲಾ ಮಾರುಕಟ್ಟೆ ಪ್ರದೇಶದಲ್ಲಿರುವ ದೇವಸ್ಥಾನದಲ್ಲಿ ರಾಮನವಮಿ ಧ್ವಜಾರೋಹಣಕ್ಕಾಗಿ ಎರಡು ಗುಂಪುಗಳು ಘರ್ಷಣೆ ನಡೆದಿದೆ.

ಪೊಲೀಸರ ಪ್ರಕಾರ ಭಾನುವಾರ ತಡರಾತ್ರಿ ಧ್ವಜಾರೋಹಣಕ್ಕೆ ಅನುಮತಿ ನಿರಾಕರಿಸಲಾಗಿದೆ. ಆದರೆ ಸೋಮವಾರ ಸುಮಾರು ನಾಲ್ಕು ಜನರು ಶಿವ ದೇವಾಲಯಕ್ಕೆ ಹೋದರು. ಅಲ್ಲಿ ಇತರ ಸಮುದಾಯದವರು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ವೇಳೆ ನಡೆದ ಘರ್ಷಣೆಯಲ್ಲಿ ಎರಡೂ ಕಡೆಯ ಸುಮಾರು 10 ಮಂದಿ ಗಾಯಗೊಂಡಿದ್ದಾರೆ. ಎರಡೂ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ತಮಿಳುನಾಡಿನಲ್ಲಿ ಅಂಬೇಡ್ಕರ್ ಜಯಂತಿಯನ್ನು ಸಮಾನತೆಯ ದಿನವನ್ನಾಗಿ ಆಚರಿಸಲಾಗುವುದು: ಎಂಕೆ ಸ್ಟಾಲಿನ್

Published On - 8:56 pm, Wed, 13 April 22