ನೆಹರು ಅವರಿಂದ ಮೋದಿವರೆಗೆ: 14 ಪ್ರಧಾನಿಗಳ ಕೊಡುಗೆಯನ್ನು ಸ್ಮರಿಸುವ ಪ್ರಧಾನ ಮಂತ್ರಿ ಸಂಗ್ರಹಾಲಯದಲ್ಲಿ ಏನೇನಿದೆ?

Pradhan Mantri Sangrahalaya ಸಂಗ್ರಹಾಲಯವು ಭಾರತದ ಪ್ರತಿಯೊಬ್ಬ ಪ್ರಧಾನಿಗೆ ಗೌರವವಾಗಿದೆ. ಸ್ವಾತಂತ್ರ್ಯದ ನಂತರ ಭಾರತದ ಕಥೆಯನ್ನು ಅದರ ಪ್ರಧಾನ ಮಂತ್ರಿಗಳ ಜೀವನ ಮತ್ತು ಕೊಡುಗೆಗಳ ಮೂಲಕ ವಿವರಿಸುತ್ತದೆ.

ನೆಹರು ಅವರಿಂದ ಮೋದಿವರೆಗೆ: 14 ಪ್ರಧಾನಿಗಳ ಕೊಡುಗೆಯನ್ನು ಸ್ಮರಿಸುವ ಪ್ರಧಾನ ಮಂತ್ರಿ ಸಂಗ್ರಹಾಲಯದಲ್ಲಿ ಏನೇನಿದೆ?
ಪ್ರಧಾನ ಮಂತ್ರಿ ಸಂಗ್ರಹಾಲಯ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Apr 13, 2022 | 7:01 PM

ದೆಹಲಿ: ಪ್ರಧಾನಮಂತ್ರಿಗಳ ವಸ್ತುಸಂಗ್ರಹಾಲಯ (Pradhan Mantri Sangrahalaya) ಎಂದೂ ಕರೆಯಲ್ಪಡುವ ಪ್ರಧಾನ ಮಂತ್ರಿ ಸಂಗ್ರಹಾಲಯವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಭಾರತೀಯ ಸಂವಿಧಾನದ ಮುಖ್ಯ ಶಿಲ್ಪಿ ಡಾ.ಭೀಮರಾವ್ ಅಂಬೇಡ್ಕರ್ (Dr Bhimrao Ambedkar) ಅವರ 131 ನೇ ಜನ್ಮದಿನ ಏಪ್ರಿಲ್ 14 (ಗುರುವಾರ) ಉದ್ಘಾಟಿಸಲಿದ್ದಾರೆ. ಆಜಾದಿ ಕಾ ಅಮೃತ್ ಮಹೋತ್ಸವದ ಆಚರಣೆಯ ಸಂದರ್ಭದಲ್ಲಿ ಉದ್ಘಾಟನೆಗೊಂಡ ಸಂಗ್ರಹಾಲಯವು ಸ್ವಾತಂತ್ರ್ಯದ ನಂತರದ ಭಾರತದ ಕಥೆಯನ್ನು ಅದರ ಪ್ರಧಾನ ಮಂತ್ರಿಗಳ ಜೀವನ ಮತ್ತು ಕೊಡುಗೆಗಳ ಮೂಲಕ ಹೇಳುತ್ತದೆ. ರಾಷ್ಟ್ರ ನಿರ್ಮಾಣಕ್ಕಾಗಿ ಭಾರತದ ಎಲ್ಲಾ ಪ್ರಧಾನ ಮಂತ್ರಿಗಳ ಕೊಡುಗೆಯನ್ನು ಗೌರವಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯಿಂದ ಮಾರ್ಗದರ್ಶಿಸಲ್ಪಟ್ಟ ಸಂಗ್ರಹಾಲಯವು ಅವರ ಸಿದ್ಧಾಂತ ಅಥವಾ ಅಧಿಕಾರಾವಧಿಯನ್ನು ಲೆಕ್ಕಿಸದೆ ಸ್ವಾತಂತ್ರ್ಯದ ನಂತರ ಭಾರತದ ಪ್ರತಿಯೊಬ್ಬ ಪ್ರಧಾನಿಗೆ ಗೌರವ ನೀಡಿದೆ.  “ನಮ್ಮ ಎಲ್ಲಾ ಪ್ರಧಾನಿಗಳ ನಾಯಕತ್ವ, ದೂರದೃಷ್ಟಿ ಮತ್ತು ಸಾಧನೆಗಳ ಬಗ್ಗೆ ಯುವ ಪೀಳಿಗೆಯನ್ನು ಸಂವೇದನಾಶೀಲಗೊಳಿಸುವ ಮತ್ತು ಪ್ರೇರೇಪಿಸುವ ಗುರಿಯನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಈ ಮ್ಯೂಸಿಯಂ ಎಲ್ಲರನ್ನೂ ಒಳಗೊಳ್ಳುವ ಪ್ರಯತ್ನವಾಗಿದೆ” ಎಂದು ಪ್ರಧಾನ ಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಮಾತನಾಡಿ, ಈ ಸಂಗ್ರಹಾಲಯ ‘ಕಾರ್ಯ ಪ್ರಗತಿಯಲ್ಲಿದೆ’ ಎಂದು ಹೇಳಿದರು. “ನಮ್ಮ ಕೊನೆಯ ಗ್ಯಾಲರಿಯು ಡಾ. ಮನಮೋಹನ್ ಸಿಂಗ್ ಅವರ ಪ್ರಧಾನಿಯಾಗಿ ಅಧಿಕಾರಾವಧಿಯನ್ನು ಪ್ರದರ್ಶಿಸುತ್ತದೆ. 2014 ರಿಂದ ಪಿಎಂ ಮೋದಿಯವರ ಅಧಿಕಾರವಧಿಯ ಕಾರ್ಯದ ಬಗ್ಗೆ ಕೂಡ ಶೀಘ್ರದಲ್ಲೇ ಕೆಲಸ ಮಾಡಲಾಗುವುದು” ಎಂದು ಅವರು ಹೇಳಿದ್ದಾರೆ.

ಪ್ರಧಾನ ಮಂತ್ರಿ ಸಂಗ್ರಹಾಲಯ ಹೇಗಿದೆ?

  1. ಸಂಗ್ರಹಾಲಯದ ಪರಿಕಲ್ಪನೆಯು ರಾಷ್ಟ್ರ ನಿರ್ಮಾಣಕ್ಕೆ ಭಾರತದ ಎಲ್ಲಾ ಪ್ರಧಾನ ಮಂತ್ರಿಗಳ ಕೊಡುಗೆಯನ್ನು ಗೌರವಿಸುವ ಪ್ರಧಾನಿ ಮೋದಿಯವರ ದೃಷ್ಟಿಯಿಂದ ಮಾರ್ಗದರ್ಶಿಸಲ್ಪಟ್ಟಿದೆ.
  2. ಸಂಗ್ರಹಾಲಯವು ಭಾರತದ ಪ್ರತಿಯೊಬ್ಬ ಪ್ರಧಾನಿಗೆ ಗೌರವವಾಗಿದೆ. ಸ್ವಾತಂತ್ರ್ಯದ ನಂತರ ಭಾರತದ ಕಥೆಯನ್ನು ಅದರ ಪ್ರಧಾನ ಮಂತ್ರಿಗಳ ಜೀವನ ಮತ್ತು ಕೊಡುಗೆಗಳ ಮೂಲಕ ವಿವರಿಸುತ್ತದೆ.
  3. ಸಂಗ್ರಹಾಲಯದ ಲಾಂಛನವು ರಾಷ್ಟ್ರ ಮತ್ತು ಪ್ರಜಾಪ್ರಭುತ್ವವನ್ನು ಸಂಕೇತಿಸುವ ಧರ್ಮ ಚಕ್ರವನ್ನು ಹಿಡಿದಿರುವ ಭಾರತದ ಜನರ ಕೈಗಳನ್ನು ಪ್ರತಿನಿಧಿಸುತ್ತದೆ.
  4. ಸಂಗ್ರಾಹಾಲಯವು ಸಂವಾದಾತ್ಮಕ ಮತ್ತು ಆಕರ್ಷಕವಾಗಿ ವಿಷಯವನ್ನು ಪ್ರಸ್ತುತಪಡಿಸಲು ತಂತ್ರಜ್ಞಾನ ಆಧಾರಿತ ಇಂಟರ್‌ಫೇಸ್‌ಗಳನ್ನು ಬಳಸಿದೆ.
  5. ಪ್ರಧಾನ ಮಂತ್ರಿ ಸಂಗ್ರಹಾಲಯವು ಆರ್ಕೈವಲ್ ವಸ್ತು, ವೈಯಕ್ತಿಕ ವಸ್ತುಗಳು, ಸ್ಮರಣಿಕೆಗಳು, ಪ್ರಧಾನಮಂತ್ರಿಗಳ ಭಾಷಣಗಳು ಮತ್ತು ಭಾರತದ ಪ್ರಧಾನ ಮಂತ್ರಿಗಳ ಸಿದ್ಧಾಂತಗಳ ಉಪಾಖ್ಯಾನ ಪ್ರಾತಿನಿಧ್ಯ ಮತ್ತು ಭಾರತದ ಪ್ರಧಾನ ಮಂತ್ರಿಗಳ ಜೀವನದ ವಿವಿಧ ಅಂಶಗಳನ್ನು ಪ್ರದರ್ಶಿಸುತ್ತದೆ – ಇವೆಲ್ಲವೂ ವಿಷಯಾಧಾರಿತ ಸ್ವರೂಪದಲ್ಲಿ ಪ್ರತಿಫಲಿಸುತ್ತದೆ.
  6. ಸಂಗ್ರಹಾಲಯದಲ್ಲಿ ಒಟ್ಟು 43 ಗ್ಯಾಲರಿಗಳಿವೆ. ಸ್ವಾತಂತ್ರ್ಯ ಹೋರಾಟದ ಪ್ರದರ್ಶನಗಳು ಮತ್ತು ಸಂವಿಧಾನದ ರಚನೆಯಿಂದ ಆರಂಭಗೊಂಡು, ಸಂಗ್ರಹಾಲಯವು ನಮ್ಮ ಪ್ರಧಾನ ಮಂತ್ರಿಗಳು ವಿವಿಧ ಸವಾಲುಗಳ ಮೂಲಕ ರಾಷ್ಟ್ರವನ್ನು ಹೇಗೆ ಮುನ್ನಡೆಸಿದರು ಮತ್ತು ದೇಶದ ಸರ್ವತೋಮುಖ ಪ್ರಗತಿಯನ್ನು ಖಚಿತಪಡಿಸಿದರು ಎಂಬ ಕಥೆಯನ್ನು ಹೇಳುತ್ತದೆ.
ಪ್ರಧಾನ ಮಂತ್ರಿ ಮ್ಯೂಸಿಯಂನಲ್ಲಿ ಅಂಬೇಡ್ಕರ್ ಚಿತ್ರ

ಪ್ರಧಾನ ಮಂತ್ರಿ ಮ್ಯೂಸಿಯಂನಲ್ಲಿ ಅಂಬೇಡ್ಕರ್ ಚಿತ್ರ

ಪ್ರಧಾನಮಂತ್ರಿಗಳ ಮ್ಯೂಸಿಯಂನಲ್ಲಿ ಅಂಬೇಡ್ಕರ್​​ಗೂ ಇದೆ ಸ್ಥಾನ ಪ್ರಧಾನ ಮಂತ್ರಿ ಸಂಗ್ರಹಾಲಯದ ಲೋಗೋ ಅಶೋಕ ಚಕ್ರವನ್ನು ಹಿಡಿದಿರುವ ಭಾರತದ ಜನರ ಕೈಗಳನ್ನು ಪ್ರತಿನಿಧಿಸುತ್ತದೆ. ಇದು ರಾಷ್ಟ್ರ ಮತ್ತು ಪ್ರಜಾಪ್ರಭುತ್ವವನ್ನು ಸಂಕೇತಿಸುತ್ತದೆ ಎಂದು ಮೂಲಗಳು ಹೇಳಿವೆ. ಇದು ಸಂವಿಧಾನ ಸಭೆಯ ರಚನೆಯ ಹಿಂದಿರುವ ವ್ಯಕ್ತಿಗಳನ್ನು ಸಹ ಪ್ರದರ್ಶಿಸುತ್ತದೆ. “ಭಾರತದ ಸಂವಿಧಾನವಿಲ್ಲದೆ ಪ್ರಧಾನಿಯಾಗಲಿ ಅಥವಾ ಸರ್ಕಾರವಾಗಲಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಸಂವಿಧಾನವು ಆಡಳಿತದ ಸಾಧನವಾಗಿ ಉಳಿದಿದೆ”ಎಂದು ಸರ್ಕಾರಿ ಕಾರ್ಯನಿರ್ವಾಹಕರು ಹೇಳಿದ್ದಾರೆ.

ಇದನ್ನೂ ಓದಿ: ಏಪ್ರಿಲ್​ 14ರಂದು 14 ಪ್ರಧಾನಮಂತ್ರಿಗಳ ಮ್ಯೂಸಿಯಂ ಉದ್ಘಾಟನೆ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ

ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ