AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಪ್ರಿಲ್​ 14ರಂದು 14 ಪ್ರಧಾನಮಂತ್ರಿಗಳ ಮ್ಯೂಸಿಯಂ ಉದ್ಘಾಟನೆ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ

ಏಪ್ರಿಲ್​14ರಂದು ಡಾ.ಬಿ.ಆರ್.ಅಂಬೇಡ್ಕರ್​ ಜಯಂತಿಯಂದೇ ಈ ಮ್ಯೂಸಿಯಂ ಉದ್ಘಾಟನೆಯಾಗಲಿದೆ. ಅಂದಹಾಗೇ, ಪ್ರಧಾನಿಗಳ ಮ್ಯೂಸಿಯಂ ದೆಹಲಿಯ ತೀನ್​ ಮೂರ್ತಿ ಭವನದಲ್ಲಿದೆ. 

ಏಪ್ರಿಲ್​ 14ರಂದು 14 ಪ್ರಧಾನಮಂತ್ರಿಗಳ ಮ್ಯೂಸಿಯಂ ಉದ್ಘಾಟನೆ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ
ಪ್ರಧಾನಮಂತ್ರಿಗಳ ಸಂಗ್ರಹಾಲಯ
TV9 Web
| Edited By: |

Updated on:Apr 13, 2022 | 11:24 AM

Share

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಪ್ರಧಾನಮಂತ್ರಿ ಸಂಗ್ರಹಾಲಯವನ್ನು ಉದ್ಘಾಟನೆ ಮಾಡಲಿದ್ದಾರೆ. ಸ್ವಾತಂತ್ರ್ಯ ಬಂದ ನಂತರ ಯಾರೆಲ್ಲ ಭಾರತದ ಪ್ರಧಾನಿಗಳಾಗಿದ್ದಾರೋ ಅವರೆಲ್ಲರ ಸ್ಮರಣಾರ್ಥ ನಿರ್ಮಾಣವಾಗಿರುವ ಮ್ಯೂಸಿಯಂ ಇದಾಗಿದ್ದು, ಏಪ್ರಿಲ್​ 14ರಂದು ಲೋಕಾರ್ಪಣೆಗೊಳ್ಳಲಿದೆ.  ಸ್ವಾತಂತ್ರ್ಯಾನಂತರದ ಪ್ರಧಾನಿಗಳಿಗೆ ಗೌರವ ಸಲ್ಲಿಸಲು ತೆಗೆದುಕೊಂಡ ನಿರ್ಧಾರ ಇದು. ಅವರು ಯಾವುದೇ ಪಕ್ಷದವರಾಗಿರಲಿ, ಪ್ರಧಾನಿ ಹುದ್ದೆಯಲ್ಲಿ ಕಡಿಮೆ ಅವಧಿಯೇ ಸೇವೆ ಸಲ್ಲಿಸಿರಲಿ, ಅವರೆಲ್ಲ ಯಾವುದೇ ಸಿದ್ಧಾಂತಗಳನ್ನು ಪಾಲಿಸಿರಲಿ, ಅಭಿಪ್ರಾಯ ಬೇಧಗಳು ಏನೇ ಇರಲಿ ಎಲ್ಲವನ್ನೂ ಬದಿಗಿಟ್ಟು, ಪ್ರತಿಯೊಬ್ಬ ಪ್ರಧಾನಿಗೂ ಗೌರವ ಸಲ್ಲಿಸಬೇಕು ಎಂಬುದು ಈಗಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹದಾಶಯ. ಹೀಗಾಗಿ ಪ್ರಧಾನಮಂತ್ರಿಗಳ ಸಂಗ್ರಹಾಲಯ ಸ್ಥಾಪಿಸಲಾಗಿದೆ ಎಂದು ಪಿಎಂಒ ತಿಳಿಸಿದೆ.

ಏಪ್ರಿಲ್​14ರಂದು ಡಾ.ಬಿ.ಆರ್.ಅಂಬೇಡ್ಕರ್​ ಜಯಂತಿಯಂದೇ ಈ ಮ್ಯೂಸಿಯಂ ಉದ್ಘಾಟನೆಯಾಗಲಿದೆ. ಅಂದಹಾಗೇ, ಪ್ರಧಾನಿಗಳ ಮ್ಯೂಸಿಯಂ ದೆಹಲಿಯ ತೀನ್​ ಮೂರ್ತಿ ಭವನದಲ್ಲಿದೆ.  ಸ್ವಾತಂತ್ರಾನಂತರ ಇಲ್ಲಿಯವರೆಗೆ ಒಟ್ಟು 14 ಪ್ರಧಾನಮಂತ್ರಿಗಳು ದೇಶವನ್ನಾಳಿದ್ದಾರೆ. ಅವರೆಲ್ಲರಿಗೆ ಸಂಬಂಧಪಟ್ಟ ನೆನಪುಗಳನ್ನು ಈ ಮ್ಯೂಸಿಯಂನಲ್ಲಿ ಸಂಗ್ರಹಿಸಿಡಲಾಗಿದೆ. ಒಟ್ಟು 270 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಧಾನಮಂತ್ರಿ ಸಂಗ್ರಹಾಲಯ ನಿರ್ಮಾಣಗೊಂಡಿದೆ. ಈ ಸಂಗ್ರಹಾಲಯದಲ್ಲಿ ಒಟ್ಟು 43 ಗ್ಯಾಲರಿಗಳು ಇರಲಿವೆ. ಎರಡು ಬ್ಲಾಕ್​ಗಳು ಇರಲಿದ್ದು ಒಟ್ಟಾರೆ 15,600ಚದರ ಮೀಟರ್​ಗೂ ಹೆಚ್ಚಿನ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿದೆ.

ಈ ಸಂಗ್ರಹಾಲಯದ ವಿನ್ಯಾಸ ತುಂಬ ಸುಸ್ಥಿರವಾಗಿದೆ. ನಿರ್ಮಾಣ ಹಂತದಲ್ಲಿ ಶಕ್ತಿ ವ್ಯಯವನ್ನು ತಪ್ಪಿಸಲಾಗಿದೆ. ಹಾಗೇ. ಇದನ್ನು ಕಟ್ಟುವ ಸಲುವಾಗಿ ಯಾವುದೇ ಒಂದು ಮರವನ್ನೂ ಕಡಿದಿಲ್ಲ, ಅಥವಾ ಸಸಿಗಳನ್ನು ಸ್ಥಳಾಂತರ ಮಾಡಿಲ್ಲ. ಈ ಪ್ರಧಾನಮಂತ್ರಿಗಳ ಮ್ಯೂಸಿಯಂನ ಲೋಗೋ ಧರ್ಮ ಚಕ್ರವಾಗಿದೆ. ದೇಶದ ಜನರು ಧರ್ಮ ಚಕ್ರವನ್ನು ಎತ್ತಿ ಹಿಡಿದಂತೆ ವಿನ್ಯಾಸಗೊಳಿಸಲಾಗಿದೆ. ಇದು ಪ್ರಜಾಪ್ರಭುತ್ವ ಮತ್ತು ಈ ರಾಷ್ಟ್ರದ ಸಂಕೇತ ಎಂದು ಪ್ರಧಾನಿ ಕಾರ್ಯಾಲಯ ಮಾಹಿತಿ ನೀಡಿದೆ.

ಇದನ್ನೂ ಓದಿ: ಫಿಲಿಪಿನ್ಸ್​​ನಲ್ಲಿ ಭೀಕರ ಚಂಡಮಾರುತದಿಂದ ಭೂಕುಸಿತ, ಪ್ರವಾಹ; 58 ಮಂದಿ ಸಾವು, ಬಿಡುವಿಲ್ಲದೆ ನಡೆಯುತ್ತಿದೆ ರಕ್ಷಣಾ ಕಾರ್ಯಾಚರಣೆ

Published On - 9:45 am, Wed, 13 April 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ