ದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವಿವಾದಾತ್ಮಕ ಬಿಬಿಸಿ ಸರಣಿಯನ್ನು(BBC documentary ) ಪ್ರದರ್ಶಿಸದಂತೆ ತಡೆಯಲು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯವು (JNU) ಕ್ಯಾಂಪಸ್‌ನಲ್ಲಿ ವಿದ್ಯುತ್ ಕಡಿತ ಮಾಡಿದ ಎರಡು ದಿನಗಳ ಬಳಿಕ ದೆಹಲಿಯ ಇತರ ಎರಡು ಉನ್ನತ ವಿಶ್ವವಿದ್ಯಾಲಯಗಳಾದ ದೆಹಲಿ ವಿಶ್ವವಿದ್ಯಾಲಯ (Delhi University)ಮತ್ತು ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ವಿಶ್ವವಿದ್ಯಾನಿಲಯ ಆಡಳಿತ ಮತ್ತು ಪೊಲೀಸರು ವಿದ್ಯಾರ್ಥಿಗಳೊಂದಿಗೆ ಇದೇ ರೀತಿ ಬಲಪ್ರಯೋಗ ಮಾಡಿದ್ದಾರೆ. ದೆಹಲಿ ವಿವಿಯ ಕಲಾ ವಿಭಾಗದ ಹೊರಗೆ ದೊಡ್ಡ ಸಭೆಗಳನ್ನು ನಿಷೇಧಿಸಲಾಗಿದೆ, ಅಲ್ಲಿ ಸ್ಕ್ರೀನಿಂಗ್ ಯೋಜಿಸಲಾಗಿತ್ತು.ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ತಡೆಯುವುದಕ್ಕಾಗಿ ಆಡಳಿತ ವಿದ್ಯುತ್ ಸರಬರಾಜು ಕಡಿತ ಮಾಡಿದೆ. ವಿದ್ಯಾರ್ಥಿಗಳ ಗುಂಪು ಎರಡೂ ವಿಶ್ವವಿದ್ಯಾಲಯಗಳಲ್ಲಿ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ್ದು ಅವರಲ್ಲಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
ದೆಹಲಿ ವಿಶ್ವವಿದ್ಯಾನಿಲಯದ ಕಲಾ ವಿಭಾಗದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಜಮಾಯಿಸಿ ಸ್ಕ್ರೀನಿಂಗ್ ಅನ್ನು ನಿಲ್ಲಿಸಲು ಪ್ರದೇಶದಲ್ಲಿ 144 ಸೆಕ್ಷನ್ ಹೇರಿರುವುದನ್ನು ವಿರೋಧಿಸಿದರು. ಸಂಜೆಯ ವೇಳೆಗೆ ವಿದ್ಯಾರ್ಥಿಗಳ ಗುಂಪು ಪೊಲೀಸರು ಮತ್ತು ವಿಶ್ವವಿದ್ಯಾನಿಲಯದ ಭದ್ರತಾ ಸಿಬ್ಬಂದಿಯೊಂದಿಗೆ ಜಟಾಪಟಿ ನಡೆಸಿದೆ. “ದಿಲ್ಲಿ ಪೋಲೀಸ್ ಹಿಂತಿರುಗಿ” ಎಂಬ ಘೋಷಣೆಗಳನ್ನು ಅವರು ಕೂಗಿದ್ದು, ಪೊಲೀಸರು ಪ್ರತಿಭಟನಾಕಾರರ ಮೇಲೆ ಬಲಪ್ರಯೋಗಿಸಿದ್ದಾರೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
अब BBC documentary के ले delhi university में भी बबाल हो रहा है। #बीबीसीडॉक्यूमेंट्री #DelhiUniversity pic.twitter.com/kKiCvvCuih
— Ranjit kumar (@kumarRanjit25) January 27, 2023
ಡಿಯುನಲ್ಲಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಪ್ರಯತ್ನಿಸಿದ್ದಕ್ಕಾಗಿ 24 ವಿದ್ಯಾರ್ಥಿಗಳನ್ನು ಈ ಹಿಂದೆ ಬಂಧಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
JNU ನಲ್ಲಿರುವಂತೆ, ಇಲ್ಲಿಯ ವಿದ್ಯಾರ್ಥಿಗಳು ತಮ್ಮ ಫೋನ್ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಸಾಕ್ಷ್ಯಚಿತ್ರವನ್ನು ವೀಕ್ಷಿಸಲು ಕ್ಯೂಆರ್ ಕೋಡ್ ಹಂಚಿಕೊಂಡಿದ್ದರು. ಇದರ ಜತೆಗೆ ಹೆಚ್ಚಿನ ವಿದ್ಯಾರ್ಥಿಗಳು ಜಮಾಯಿಸಿ ಸಾರ್ವಜನಿಕ ಪ್ರದರ್ಶನವನ್ನು ನಡೆಸುತ್ತೇವೆ ಎಂದು ಹೇಳಿದ್ದರು.
ಕ್ಯಾಂಪಸ್‌ನಲ್ಲಿ ಸಾಮೂಹಿಕ ಸ್ಕ್ರೀನಿಂಗ್ ಅನುಮತಿಸಲಾಗುವುದಿಲ್ಲ ಎಂದು ದೆಹಲಿ ವಿಶ್ವವಿದ್ಯಾಲಯದ ಆಡಳಿತದ ಮೂಲಗಳು ತಿಳಿಸಿವೆ. ಆದಾಗ್ಯೂ, ವಿದ್ಯಾರ್ಥಿಗಳು ತಮ್ಮ ಫೋನ್‌ಗಳಲ್ಲಿ ವೀಕ್ಷಿಸಲು ಬಯಸಿದರೆ, ಅದು ಅವರಿಗೆ ಬಿಟ್ಟಿದ್ದು ಎಂದು ಹೇಳಿವೆ.
ಅಂತಹ ಸ್ಕ್ರೀನಿಂಗ್‌ಗೆ ವಿಶ್ವವಿದ್ಯಾಲಯಗಳು ಅನುಮತಿ ನೀಡಿಲ್ಲ. ದೆಹಲಿ ಪೊಲೀಸರನ್ನೂ ಸಂಪರ್ಕಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಕ್ರೀನಿಂಗ್‌ಗೆ ಮಾಡುವ ನಿರ್ಧಾರವನ್ನು ತಾವಾಗಿಯೇ ಹಿಂಪಡೆಯುವಂತೆ ವಿದ್ಯಾರ್ಥಿಗಳ ಮನವೊಲಿಸಲು ಈ ಹಿಂದೆ ಮಾತುಕತೆ ನಡೆಸಲಾಗಿತ್ತು, ಭದ್ರತಾ ಕಾರಣಗಳಿಗಾಗಿ ಭಾರೀ ಪೊಲೀಸ್ ನಿಯೋಜನೆ ಮಾಡಲಾಗಿದ್ದು ವಿದ್ಯಾರ್ಥಿಗಳು ಸ್ಕ್ರೀನಿಂಗ್‌ಗೆ ಜಮಾಯಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: 84ನೇ ವಯಸ್ಸಲ್ಲಿ ಒಲಿದು ಬಂತು ಪದ್ಮಶ್ರೀ; ಮೋದಿ ಭರವಸೆ ನೀಡಿದ್ದರೂ ಬೈಗಾ ಕಲೆಯ ಈ ಅಮ್ಮನಿಗೆ ಸಿಕ್ಕಿಲ್ಲ ಮನೆ
ದೆಹಲಿ ವಿಶ್ವವಿದ್ಯಾಲಯದ ಪ್ರೊಕ್ಟರ್ ರಜನಿ ಅಬ್ಬಿ ಅವರು ಈ ವಿಷಯದ ಬಗ್ಗೆ ದೆಹಲಿ ಪೊಲೀಸರಿಗೆ ಪತ್ರ ಬರೆದಿದ್ದು, ಅವರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
“ಆಡಳಿತದಿಂದ ಯಾವುದೇ ಅನುಮತಿಯನ್ನು ಪಡೆಯದ ಕಾರಣ ನಾವು ಬಿಬಿಸಿ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಅನುಮತಿಸಲಾಗುವುದಿಲ್ಲ” ಎಂದು ಅವರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಇಂದು (ಶುಕ್ರವಾರ) ಸಂಜೆ 4 ಗಂಟೆ ಸುಮಾರಿಗೆ ನಿಷೇಧಿತ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಸುಮಾರು 20 ಜನರು ಕಲಾ ವಿಭಾಗದ ಗೇಟ್‌ನ ಹೊರಗೆ ಬಂದರು. ಈ ಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟು ಮಾಡುವ ಸಾಧ್ಯತೆ ಇರುವುದರಿಂದ ಅಲ್ಲಿಂದ ಚದುರುವಂತೆ ಸೂಚಿಸಲಾಗಿತ್ತು. ಅವರು ಇದಕ್ಕೆ ಒಪ್ಪದೇ ಇದ್ದಾಗ ಅವರನ್ನು ಶಾಂತಿಯುತವಾಗಿ ಬಂಧಿಸಲಾಯಿತು, ”ಎಂದು ಡಿಸಿಪಿ ಉತ್ತರ ವಲಯದ ಡಿಸಿಪಿ ಹೇಳಿದ್ದಾರೆ. ಈಗ ಪರಿಸ್ಥಿತಿ ಶಾಂತವಾಗಿದೆ. ಒಟ್ಟು 24 ಜನರನ್ನು ಕ್ಯಾಂಪಸ್‌ನಿಂದ ಬಂಧಿಸಲಾಗಿದೆ ಎಂದಿದ್ದಾರೆ ಅವರು,
ಬಂಧಿತರು ಡಿಯು ವಿದ್ಯಾರ್ಥಿಗಳೇ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ಬಂಧಿಸಿರುವವರ ಗುರುತಿನ ಚೀಟಿಗಳನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ.. ಅವರು ಹೊರಗಿನವರಾಗಿದ್ದರೆ, ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ ಮತ್ತು ಅವರು ಡಿಯುನಿಂದ ಬಂದಿದ್ದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಿಶ್ವ ವಿದ್ಯಾಲಯದ ಆಡಳಿತ ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:54 pm, Fri, 27 January 23