ದೆಹಲಿ: ದಾವೋಸ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂ ಸಮಾವೇಶದಲ್ಲಿ ಅನಂತ-ಲುಲು ಗ್ರೂಪ್ ಇಂಟರ್ ನ್ಯಾಷನಲ್ ನಿರ್ದೇಶಕ ಎ.ವಿ.ಅನಂತ ರಾಮನ್ ಅವರೊಂದಿಗೆ ಕರ್ನಾಟಕದಲ್ಲಿ ಹೂಡಿಕೆ ಮಾಡುವ ಕರಿತು ಒಪ್ಪಂದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಸಹಿ ಹಾಕಿದ್ದಾರೆ. ಈ ವೇಳೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಉಪಸ್ಥಿತರಿದ್ದರು.ರಾಜ್ಯದಲ್ಲಿ ಸುಮಾರು ಎರಡು ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿರುವ ಲುಲು ಗ್ರೂಪ್, 4 ಶಾಪಿಂಗ್ ಮಾಲ್ ಮತ್ತು ಹೈಪರ್ ಮಾರ್ಕೆಟ್ ಹಾಗೂ ರಫ್ತು ಆಧಾರಿತ ಆಹಾರ ಮಳಿಗೆಗಳನ್ನು ಸ್ಥಾಪಿಸಲು ಉದ್ದೇಶ ಹೊಂದಿದೆ. ಇದರಿಂದ 10 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
ಇನ್ನು ಮತ್ತೊಂದೆಡೆ ದಾವೋಸ್ನಲ್ಲಿ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿಯಾಗಿದ್ದು ಸೀಮೆನ್ಸ್ ಹೆಲ್ದಿ ನಿಯರ್ಸ್ ಕಂಪನಿ ಜೊತೆ ಸಿಎಂ ಬೊಮ್ಮಾಯಿ ಚರ್ಚೆ ನಡೆಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಭೂಮಿ ಕಬಳಿಕೆ ಆರೋಪ: ಬಿಕೆಯು ಒಡಕಿನ ಬಳಿಕ ಟಿಕಾಯತ್ ಸಹೋದರರಿಗೆ ಎದುರಾಯ್ತು ಮತ್ತೊಂದು ಸಂಕಷ್ಟ
ದಸ್ಸಾಲ್ಸ್ ಸಿಸ್ಟಮ್ಸ್ ಹಾಗೂ ನೆಸ್ಟ್ಲೇ ಜೊತೆ ಸಿಎಂ ಚರ್ಚೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ದಸ್ಸಾಲ್ಸ್ ಸಿಸ್ಟಮ್ಸ್ ಹಾಗೂ ನೆಸ್ಟ್ಲೇ ಸಂಸ್ಥೆಯ ಮುಖ್ಯಸ್ಥರೊಂದಿಗೆ ಕರ್ನಾಟಕದಲ್ಲಿ ಹೂಡಿಕೆ ಅವಕಾಶಗಳ ಬಗ್ಗೆ ಚರ್ಚಿಸಿದ್ದಾರೆ.
ದಸ್ಸಾಲ್ಸ್ ಸಿಸ್ಟಮ್ಸ್:
ರಾಜ್ಯದಲ್ಲಿ ವಿದ್ಯುತ್ ವಾಹನಗಳು ಮತ್ತು ಕೇಂದ್ರ ಉತ್ಪಾದನಾ ತಾಂತ್ರಿಕ ಸಂಸ್ಥೆಯ ಸಹಯೋಗದಲ್ಲಿ ಆಧುನಿಕ ಉತ್ಪಾದನೆ ಕ್ಷೇತ್ರ, ವಿದ್ಯಾರ್ಥಿಗಳಿಗೆ ಕೈಗಾರಿಕೆ 4.0, ಡಿಜಿಟಲ್ ತಂತ್ರಜ್ಞಾನದ ಬಗ್ಗೆ ತರಬೇತಿ ,ರಾಜ್ಯದ ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ದಸ್ಸಾಲ್ಸ್ ಸಿಸ್ಟಮ್ಸ್ ಉತ್ಸುಕತೆ ತೋರಿದರು.
ನೆಸ್ಟ್ಲೆ ಸಂಸ್ಥೆ
ನಂಜನಗೂಡಿನಲ್ಲಿ ನೆಸ್ಟ್ಲೆ ಇನ್ಸೆಂಟ್ ಕಾಫಿ ಕಾರ್ಖಾನೆಯನ್ನು ನವೀಕರಣ ಹಾಗೂ ವಿಸ್ತರಣಾ ಕಾರ್ಯಕ್ಕೆ ನೆಸ್ಟ್ಲೆ ಸಂಸ್ಥೆ ಮುಂದಾಗಿದ್ದಾರೆ. ಇದನ್ನೂ ಓದಿ: ಜಪಾನ್ನ ಪ್ರಮುಖ ಪತ್ರಿಕೆಯ ಓಪ್-ಎಡ್ ಪುಟದಲ್ಲಿ ಲೇಖನ ಬರೆದ ನರೇಂದ್ರ ಮೋದಿ; ದ್ವಿಪಕ್ಷೀಯ ಸಂಬಂಧ ಬಗ್ಗೆ ಶ್ಲಾಘನೆ
ದಾವೋಸ್ ನಿಂದ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿದ ಸಚಿವ ಡಾ. ಅಶ್ವತ್ಥನಾರಾಯಣ
ಬೆಂಗಳೂರಿನಲ್ಲಿ ಮಳೆ ಹಾನಿ ಪರಿಹಾರ ಕಾರ್ಯ ವಿಚಾರಕ್ಕೆ ಸಂಬಂಧಿಸಿ ದಾವೋಸ್ ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸಚಿವ ಡಾ. ಅಶ್ವತ್ಥನಾರಾಯಣ ಸಭೆ ನಡೆಸಿದ್ದಾರೆ. ಬೆಂಗಳೂರು ಪೂರ್ವ ವಲಯದ ಉಸ್ತುವಾರಿಯಾಗಿರುವ ಡಾ. ಅಶ್ವಥ್ ನಾರಾಯಣ ಸಂತ್ರಸ್ಥ 691 ಕುಟುಂಬಗಳಿಗೆ ಎರಡು ದಿನದೊಳಗೆ ತಲಾ 25 ಸಾವಿರ ರೂ. ಪರಿಹಾರ ನೀಡಲು ಸೂಚಿಸಿದ್ದಾರೆ. 691 ಕುಟುಂಬಗಳಿಗೆ ಒಟ್ಟು ಪರಿಹಾರದ ಮೊತ್ತ 1,73 ಕೋಟಿ ರೂಪಾಯಿ. ಇದಕ್ಕೆ ಸಂಬಂಧಿಸಿದ ದಾಖಲೀಕರಣ ಮಂಗಳವಾರ ಮುಗಿಸಿ ಬುಧವಾರ ಸಂಬಂಧಿಸಿದವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡುವಂತೆ ಕಾಲಮಿತಿ ನಿಗದಿ ಮಾಡಿದ್ದಾರೆ. ಪೂರ್ವ ವಲಯದಲ್ಲಿ 7 ಕಡೆಗಳಲ್ಲಿ ಡೀಸಿಲ್ಟಿಂಗ್ ಮಾಡದ ಗುತ್ತಿಗೆದಾರರಿಗೆ ತಕ್ಷಣವೇ ನೋಟಿಸ್ ಕೊಟ್ಟು ಶಿಸ್ತು ಕ್ರಮ ತೆಗೆದುಕೊಳ್ಳಲು ಸಭೆಯಲ್ಲಿ ಸೂಚಿಸಿದ್ದಾರೆ. ಹಾಗೂ 20 ದಿನಗಳೊಳಗೆ ಡೀಸಿಲ್ಟಿಂಗ್ ಮಾಡಿಸಿ ಚರಂಡಿಗಳಲ್ಲಿ ನೀರು ಅಡೆತಡೆ ಇಲ್ಲದಂತೆ ಹರಿಯುವಂತೆ ಮಾಡುವಂತೆ ಆದೇಶಿಸಿದ್ದಾರೆ. ನೀಲಸಂದ್ರ, ಫ್ರೇಜರ್ ಟೌನ್, ಸಂಜಯನಗರ ಸೇರಿದಂತೆ 22 ರೆಡ್ ಜೋನ್ ಗಳಲ್ಲಿ ಸ್ಥಳಾಂತರಕ್ಕೆ ಪೂರ್ವಸಿದ್ಧತೆಗೆ ಸೂಚಿಸಿದ್ದಾರೆ.
Published On - 5:11 pm, Mon, 23 May 22