ತೆಲಂಗಾಣದಲ್ಲಿ ಗರ್ಭಿಣಿ ಮತ್ತು ಬಾಣಂತಿಯರ ಅನುಕೂಲಕ್ಕಾಗಿ ಅಲ್ಲಿನ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ (Telangana Chief Minister K Chandrasekhar Rao) ಅವರು ಕೆಸಿಆರ್ ಕಿಟ್ ಮತ್ತು ಅಮ್ಮಾ ವೋಡಿ ಎಂಬ ಎರಡು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಗರ್ಭಿಣಿಯರಿಗೆ ನೀಡಲಾಗುವ ಈ ಕೆಸಿಆರ್ ಕಿಟ್ನಲ್ಲಿ, ಅವರಿಗೆ ಹೆರಿಗೆಯ ನಂತರ ಬೇಕಾಗುವ ಅತ್ಯಗತ್ಯವಾದ 16 ವಸ್ತುಗಳನ್ನು ಇಡಲಾಗುತ್ತದೆ. ಇದೀಗ ಈ ಯೋಜನೆಯನ್ನು, ಅದನ್ನು ಜಾರಿಗೊಳಿಸಿದ ಕೆಸಿಆರ್ರನ್ನು ಹೊಗಳುವ ಭರದಲ್ಲಿ ತೆಲಂಗಾಣದ ಮಾಜಿ ಉಪಮುಖ್ಯಮಂತ್ರಿ, ಸ್ಟೇಶನ್ ಘನಪುರ್ ಕ್ಷೇತ್ರದ ಶಾಸಕ ತಟಿಕೊಂಡ ರಾಜಯ್ಯ ದೊಡ್ಡ ವಿವಾದ ಸೃಷ್ಟಿಸಿದ್ದಾರೆ. ನಂತರ ತಮ್ಮ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ್ದಾರೆ.
ಅಕ್ಟೋಬರ್ 6ರಿಂದ ಪ್ರಾರಂಭವಾಗಲಿರುವ ಬಥುಕಮ್ಮ ಉತ್ಸವದ ಹಿನ್ನೆಲೆಯಲ್ಲಿ ರಾಜ್ಯದ ಬಡ ಮಹಿಳೆಯರಿಗೆ ಬಥುಕಮ್ಮ ಸೀರೆ ವಿತರಣೆ ಕಾರ್ಯಕ್ರಮ ಎಲ್ಲೆಡೆ ನಡೆಯುತ್ತಿದೆ. ಹಾಗೇ, ಲಿಂಗಾಲ ಘನಪುರ ಮಂಡಲದಲ್ಲೂ ಸೀರೆ ವಿತರಣೆ ನಡೆಯುತ್ತಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಟಿಆರ್ಎಸ್ ಶಾಸಕ ರಾಜಯ್ಯ, ‘ನಮ್ಮ ರಾಜ್ಯದ ಮುಖ್ಯಮಂತ್ರಿ ಕೆಸಿಆರ್ ಮಹಿಳಾ ಸಬಲೀಕರಣಕ್ಕಾಗಿ ಹಲವು ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಗರ್ಭಿಣಿಯರು, ನವಜಾತ ಶಿಶುಗಳಿಗಾಗಿ ಕೆಸಿಆರ್ ಕಿಟ್ನಂತಹ ಯೋಜನೆಗಳನ್ನು ರೂಪಿಸಿದ್ದಾರೆ. ಈ ಕಿಟ್ನಲ್ಲಿ ಸೀರೆ, ಮಗುವಿಗೆ ಬೇಕಾದ ಸೋಪ್, ಡೈಪರ್, ಎರಡು ಜತೆ ಬಟ್ಟೆ, ಎಣ್ಣೆ, ಸೊಳ್ಳೆ ಪರದೆ ಸೇರಿ ಹಲವು ಅಗತ್ಯ ವಸ್ತುಗಳು ಇರಲಿದೆ. ಒಬ್ಬ ಗರ್ಭಿಣಿಗೆ ಆಕೆಯ ಪತಿ ಮಾಡಿಕೊಡಬೇಕಾದ ವ್ಯವಸ್ಥೆಯನ್ನು ಕೆಸಿಆರ್ ಮಾಡಿಕೊಡುತ್ತಿದ್ದಾರೆ. ಗರ್ಭಿಣಿಯರಿಗೆ ಆಕೆಯ ಪತಿ, ತಂದೆ-ತಾಯಿ, ಅತ್ತೆ-ಮಾವ ನೀಡುವುದಕ್ಕಿಂತಲೂ ಹೆಚ್ಚಿನ ಸೌಲಭ್ಯ ನೀಡುತ್ತಿದ್ದಾರೆ’ ಎಂದು ಹೇಳಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೆ, ‘ರಾಜ್ಯದಲ್ಲಿ ಗರ್ಭಿಣಿಯರ ಪಾಲಿಗೆ ಪತಿಯ ಪಾತ್ರ ವಹಿಸಿ, ಅವರನ್ನು ಸಂತೋಷ ಪಡಿಸುವ ಕೆಲಸ ಮಾಡುತ್ತಿದ್ದಾರೆ’ ಎಂದೂ ಹೇಳಿದ್ದಾರೆ.
ಸಿಕ್ಕಾಪಟೆ ಟ್ರೋಲ್ ಆದ ಶಾಸಕ
ಶಾಸಕ ಕೆ.ಚಂದ್ರಶೇಖರ್ ರಾವ್ ಭಾಷಣದ ವಿಡಿಯೋ ವೈರಲ್ ಆಗುತ್ತಿದ್ದಂತೆ ಅವರನ್ನು ನೆಟ್ಟಿಗರು ವಿಪರೀತ ಟ್ರೋಲ್ ಮಾಡಿದ್ದಾರೆ. ಕೆಲವರಂತೂ ಬೈದಿದ್ದಾರೆ. ಮುಖ್ಯಮಂತ್ರಿ ಕೆಸಿಆರ್ ಮಹಿಳೆಯರ ಪಾಲಿಗೆ ಕೇವಲ ಪಾಲಕರು ಮಾತ್ರವಲ್ಲ, ಗಂಡನೂ ಹೌದು ಎಂದು ವ್ಯಂಗ್ಯವಾಗಿ ಅನೇಕರು ಕಾಮೆಂಟ್ ಮಾಡಿದ್ದಾರೆ. ಹೀಗೆ ತನ್ನ ಮಾತಿನಿಂದ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಯಾಗುತ್ತಿದೆ. ತಾವಾಡಿದ ಮಾತು ಬೇರೆಯದೇ ಅರ್ಥ ಪಡೆದುಕೊಂಡಿದೆ ಎಂದು ಗೊತ್ತಾಗುತ್ತಿದ್ದಂತೆ ಶಾಸಕ ರಾಜಯ್ಯ ಕ್ಷಮೆ ಕೇಳಿದ್ದಾರೆ. ಮಹಿಳೆಯರ ಭಾವನೆಗೆ ಧಕ್ಕೆ ತರುವ ಉದ್ದೇಶ ನನ್ನದಾಗಿರಲಿಲ್ಲ. ಕ್ಷಮೆ ಇರಲಿ ಎಂದು ಹೇಳಿದ್ದಾರೆ.
CM #KCR is not just a father or inlaw but is also husband of every woman in #Telangana: An over enthusiastic former #Telangana dy CM Rajaiah said in his bid to praise CM over distribution of #Bathukamma sarees. pic.twitter.com/cZOIOlgBik
— krishnamurthy (@krishna0302) October 4, 2021
ಇದನ್ನೂ ಓದಿ: 7th Pay Commission: ಕೇಂದ್ರ ಸರ್ಕಾರಿ ನೌಕರರ ಎಕ್ಸ್ಗ್ರೇಷಿಯಾ ಇಡಿಗಂಟು ಪಾವತಿಯಲ್ಲಿ ಭಾರೀ ಬದಲಾವಣೆ
ತುಮಕೂರಿನ ಕಡಬದಿಂದ ಬಸ್ ಸಂಚಾರ ಆರಂಭ; ಬಸ್ ಚಾಲನೆ ಮಾಡಿ ಹಸಿರು ನಿಶಾನೆ ತೋರಿದ ಶಾಸಕ ಎಸ್.ಆರ್.ಶ್ರೀನಿವಾಸ್
Published On - 11:37 am, Mon, 4 October 21