Coronavirus cases in India: ದೇಶದಲ್ಲಿ 20,799 ಹೊಸ ಕೊವಿಡ್ ಪ್ರಕರಣ ಪತ್ತೆ, ಚೇತರಿಕೆ ಪ್ರಮಾಣ ಶೇ 97.89
Covid-19: ರಾಷ್ಟ್ರೀಯ ಕೊವಿಡ್ ಚೇತರಿಕೆಯ ಪ್ರಮಾಣವು ಶೇಕಡಾ 97.89 ರಷ್ಟು ದಾಖಲಾಗಿದೆ, ಇದು ಮಾರ್ಚ್ 2020 ರಿಂದ ಗರಿಷ್ಠವಾಗಿದೆ. ಕಳೆದ 24 ಗಂಟೆಗಳಲ್ಲಿ ಕನಿಷ್ಠ 26,718 ಮಂದಿ ಚೇತರಿಸಿಕೊಂಡಿದ್ದು ಒಟ್ಟು ಚೇತರಿಕೆಯ ಸಂಖ್ಯೆ 3,31,21,247 ಆಗಿದೆ.
ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 20,799 ಹೊಸ ಕೊವಿಡ್ -19 (Covid-19) ಪ್ರಕರಣಗಳನ್ನು ವರದಿ ಆಗಿದೆ. ಇದು ನಿನ್ನೆಯ 22,842 ಪ್ರಕರಣಗಳಿಂದ ಸುಮಾರು ಒಂಬತ್ತು ಪ್ರತಿಶತದಷ್ಟು ಇಳಿಕೆಯಾಗಿದೆ. ಇದೇ ಅವಧಿಯಲ್ಲಿ, ಆರೋಗ್ಯ ಸಚಿವಾಲಯದ ಪ್ರಕಾರ 180 ಸಾವುಗಳು ದಾಖಲಾಗಿವೆ. ಭಾರತದ ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ ಶೇಕಡಾ 1 ಕ್ಕಿಂತ ಕಡಿಮೆ, ಪ್ರಸ್ತುತ 0.78 ಶೇಕಡಾ ಇದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,64,458 ಆಗಿದೆ. ರಾಷ್ಟ್ರೀಯ ಕೊವಿಡ್ ಚೇತರಿಕೆಯ ಪ್ರಮಾಣವು ಶೇಕಡಾ 97.89 ರಷ್ಟು ದಾಖಲಾಗಿದೆ, ಇದು ಮಾರ್ಚ್ 2020 ರಿಂದ ಗರಿಷ್ಠವಾಗಿದೆ. ಕಳೆದ 24 ಗಂಟೆಗಳಲ್ಲಿ ಕನಿಷ್ಠ 26,718 ಮಂದಿ ಚೇತರಿಸಿಕೊಂಡಿದ್ದು ಒಟ್ಟು ಚೇತರಿಕೆಯ ಸಂಖ್ಯೆ 3,31,21,247 ಆಗಿದೆ. ದಿನನಿತ್ಯದ ಸಕಾರಾತ್ಮಕತೆ ದರ ಶೇ 2.10 ಆಗಿದ್ದು ಇದು ಕಳೆದ 35 ದಿನಗಳಲ್ಲಿ ಶೇಕಡಾ 3 ಕ್ಕಿಂತ ಕಡಿಮೆ. ಸಾಪ್ತಾಹಿಕ ಧನಾತ್ಮಕ ದರವು ಶೇ 1.63 ರಷ್ಟಿದೆ.
ಥಾಣೆಯಲ್ಲಿ 81 ಹೊಸ ಕೊವಿಡ್ -19 ಪ್ರಕರಣಗಳು, 4 ಸಾವು ಥಾಣೆಯಲ್ಲಿ 281 ಹೊಸ ಕೊರೊನಾವೈರಸ್ ಪ್ರಕರಣಗಳು ವರದಿಯಾಗಿದ್ದು, ಮಹಾರಾಷ್ಟ್ರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5,60,175 ಕ್ಕೆ ಏರಿಕೆಯಾಗಿದೆ. ಭಾನುವಾರ ದಾಖಲಾದ ಈ ಹೊಸ ಪ್ರಕರಣಗಳಲ್ಲದೆ, ವೈರಸ್ ಇನ್ನೂ ನಾಲ್ಕು ಜನರ ಜೀವವನ್ನು ಬಲಿ ತೆಗೆದುಕೊಂಡಿದೆ. ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 11,420 ಕ್ಕೆ ತಲುಪಿದೆ.
India reports 20,799 new COVID cases, 26,718 recoveries, and 180 deaths in the last 24 hours
Active cases: 2,64,458 Total recoveries: 3,31,21,247 Death toll: 4,48,997
Total vaccination: 90,79,32,861 pic.twitter.com/DCfS2tCYlB
— ANI (@ANI) October 4, 2021
ಕರ್ನಾಟಕದಲ್ಲಿ 664 ಹೊಸ ಕೊವಿಡ್ -19 ಪ್ರಕರಣ, ಪತ್ತೆ 8 ಸಾವು ಕರ್ನಾಟಕದಲ್ಲಿ ಭಾನುವಾರ ಒಟ್ಟು 664 ಹೊಸ ಕೋವಿಡ್ -19 ಪ್ರಕರಣಗಳು, 711 ಚೇತರಿಕೆ ಮತ್ತು 8 ಸಾವುಗಳು ವರದಿಯಾಗಿವೆ. ರಾಜ್ಯ ಅಧಿಕೃತ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ಒಟ್ಟು ಪ್ರಕರಣಗಳು 12,301 ಸಕ್ರಿಯ ಪ್ರಕರಣಗಳು ಸೇರಿದಂತೆ 29,77,889 ಕ್ಕೆ ಏರಿದೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 37,819 ಜನರು ಕೊರೊನಾವೈರಸ್ ಸೋಂಕಿಗೆ ಬಲಿಯಾಗಿದ್ದಾರೆ, ಒಟ್ಟಾರೆ ಚೇತರಿಕೆ 29,27,740 ಆಗಿದೆ.
ಗರಿಷ್ಠ ಪ್ರಕರಣಗಳನ್ನು ದಾಖಲಿಸಿರುವ ಮೊದಲ ಐದು ರಾಜ್ಯಗಳಲ್ಲಿ ಕೇರಳವು 12,297 ಪ್ರಕರಣಗಳನ್ನು ಹೊಂದಿದೆ. ಮಹಾರಾಷ್ಟ್ರ 2,692 ಪ್ರಕರಣಗಳು, ತಮಿಳುನಾಡು 1,531 ಪ್ರಕರಣಗಳು, ಆಂಧ್ರ ಪ್ರದೇಶ 765 ಪ್ರಕರಣಗಳು ಮತ್ತು ಪಶ್ಚಿಮ ಬಂಗಾಳ 701 ಪ್ರಕರಣಗಳು ಹೊಂದಿವೆ. ಈ ಐದು ರಾಜ್ಯಗಳಿಂದ ಸುಮಾರು ಶೇ 86.47 ಹೊಸ ಪ್ರಕರಣಗಳು ವರದಿಯಾಗಿದ್ದು ಹೊಸ ಪ್ರಕರಣಗಳಲ್ಲಿ ಕೇರಳವು ಶೇ59.12 ಪ್ರಕರಣ ವರದಿ ಮಾಡಿದೆ. ಕೇರಳದಲ್ಲಿ 74 ಹೊಸ ಸಾವು ವರದಿಯಾಗಿದ್ದು, ಮಹಾರಾಷ್ಟ್ರದಲ್ಲಿ 41 ದೈನಂದಿನ ಸಾವುಗಳು ಸಂಭವಿಸಿವೆ.
ಕಳೆದ 24 ಗಂಟೆಗಳಲ್ಲಿ ಭಾರತವು ಒಟ್ಟು 23,46,176 ಡೋಸ್‌ಗಳನ್ನು ನೀಡಿದ್ದು ಒಟ್ಟು ಡೋಸ್‌ಗಳ ಮೊತ್ತವನ್ನು 90,79,32,861 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 9,91,676 ಮಾದರಿಗಳನ್ನು ಪರೀಕ್ಷಿಸಲಾಗಿದೆ.
ಇದನ್ನೂ ಓದಿ: Priyanka Gandhi: ಉತ್ತರ ಪ್ರದೇಶದ ಹರಗಾಂವ್ನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಬಂಧನ