Priyanka Gandhi: ಉತ್ತರ ಪ್ರದೇಶದ ಹರಗಾಂವ್ನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಬಂಧನ
ಉತ್ತರ ಪ್ರದೇಶದ ಹರಗಾಂವ್ನಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಉತ್ತರ ಪ್ರದೇಶದ ಪೊಲೀಸರು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಗೃಹ ಬಂಧನದಲ್ಲಿರಿಸಿದ್ದಾರೆ.
ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರ ಭೇಟಿಯ ವಿರುದ್ಧ ನಡೆದ ರೈತರ ಪ್ರತಿಭಟನೆಯ ಸಂದರ್ಭದಲ್ಲಿನ ಹಿಂಸಾಚಾರದಲ್ಲಿ 8 ಮಂದಿ ಮೃತಪಟ್ಟಿರುವ ಲಖಿಂಪುರ ಖೇರಿಗೆ ತೆರಳುವಾಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರನ್ನು ಬಂಧಿಸಲಾಗಿದೆ ಎಂದು ಎಎನ್ಐ ವರದಿ ಮಾಡಿದೆ. ಲಖೀಮ್‌ಪುರ್ ಖೇರಿಗೆ ತೆರಳುತ್ತಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಸೀತಾಪುರದ ಹರಗಾಂವ್ ಬಳಿ ಇಂದು ಮುಂಜಾನೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಕುರಿತು ಎಎನ್ಐ ಹಂಚಿಕೊಂಡಿರುವ ಟ್ವೀಟ್:
Youth Congress National President Srinivas BV claims “Priyanka Gandhi Vadra arrested from Hargaon.” pic.twitter.com/PzmLiEUvUI
— ANI UP (@ANINewsUP) October 4, 2021
ಈ ಕುರಿತು ರಾಷ್ಟ್ರೀಯ ಯೂಥ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಟ್ವೀಟ್ ಟ್ವೀಟ್ ಮಾಡಿದ್ದು, ಅದರಲ್ಲಿ ಪ್ರಿಯಾಂಕಾ ಪೊಲೀಸರೊಂದಿಗೆ ಮಾತನಾಡುತ್ತಿರುವ ವಿಡಿಯೊವಿದೆ. ಇದನ್ನು ಹಂಚಿಕೊಂಡಿರುವ ಅವರು, ‘ಈ ದೇಶದಲ್ಲಿ ಏನಾಗುತ್ತಿದೆ? Z+ ಭದ್ರತೆಯಿರುವ ನಾಯಕಿಯನ್ನು ಯಾವುದೇ ವಾರಂಟ್ ಇಲ್ಲದೇ ಪೊಲೀಸರು ಬಂಧಿಸಿದ್ದಾರೆ’ ಎಂದು ಕ್ಯಾಪ್ಶನ್ ನೀಡಿದ್ದಾರೆ.
ಆ ಟ್ವೀಟ್ ಇಲ್ಲಿದೆ:
आखिर कौनसा कानून अब इस देश में लागू है?
Z+ सुरक्षा श्रेणी प्राप्त एक नेता को बिना किसी वारंट के गिरफ्तारी , एक सांसद के साथ गुंडों जैसा बर्ताव, आखिर देश और उप्र में चल क्या रहा है?
— Srinivas BV (@srinivasiyc) October 4, 2021
ಪ್ರಿಯಾಂಕಾರನ್ನು ಬಂಧಿಸಿರುವ ಕುರಿತು ಉತ್ತರ ಪ್ರದೇಶ ಕಾಂಗ್ರೆಸ್ ಟ್ವೀಟ್ ಇಲ್ಲಿದೆ:
श्रीमती @priyankagandhi जी के कपड़े खींचे जा रहे हैं। पुलिस के द्वारा भोर के अंधेरे में उनके हाथ मोड़े जा रहे हैं।
मुख्यमंत्री जी ! तानाशाही लाख कर लो, हम अन्याय और नफरत के खिलाफ कुर्बानी देने वाले लोग हैं। झुकेंगे नहीं, लड़ेंगे… #लखीमपुर_किसान_नरसंहार pic.twitter.com/HZiojipujc
— UP Congress (@INCUttarPradesh) October 4, 2021
ಪ್ರಿಯಾಂಕಾ ಗಾಂಧಿಯವರನ್ನು ಉತ್ತರ ಪ್ರದೇಶ ಪೊಲೀಸರು ಗೃಹಬಂಧನದಲ್ಲಿರಿಸಿದ್ದರು. ಪ್ರಿಯಾಂಕಾ ಆ ಆದೇಶವನ್ನು ಧಿಕ್ಕರಿಸಿ ಭಾನುವಾರ ರಾತ್ರಿ ಲಖನೌದಿಂದ ಲಖಿಂಪುರ್ ಖೇರಿಗೆ ತೆರಳಿದರು. ಉತ್ತರ ಪ್ರದೇಶ ಪೊಲೀಸರು ಇಂದು (ಸೋಮವಾರ) ಬೆಳಗಿನ ಜಾವ 5.30 ರ ಸುಮಾರಿಗೆ ಹರಗಾಂವ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಪ್ರಿಯಾಂಕಾರನ್ನು ಬಂಧಿಸಿದ್ದಾರೆ. ಅವರನ್ನು ಸೀತಾಪುರ ಜಿಲ್ಲೆಯ ಅತಿಥಿ ಗೃಹಕ್ಕೆ ಕರೆದೊಯ್ಯಲಾಗಿದೆ. ಜನರು ಬೆಂಬಲ ನೀಡಲು ಆ ಪ್ರದೇಶವನ್ನು ತಲುಪುವಂತೆ ಯುಪಿ ಕಾಂಗ್ರೆಸ್ ಟ್ವೀಟ್ ಮಾಡಿದ. ಈ ಕುರಿತು ಇಂಡಿಯಾ ಟುಡೆ ವರದಿ ಮಾಡಿದೆ.
ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ಗೃಹಬಂಧನ:
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಗೃಹಬಂಧನದಲ್ಲಿರಸಲಾಗಿದೆ. ಅವರನ್ನು ಲಕ್ನೋದಲ್ಲಿರುವ ಅವರ ಮನೆಯಲ್ಲಿ ಬಂಧನದಲ್ಲಿರಸಲಾಗಿದೆ.
ಲಖಿಂಪುರ- ಖೇರಿಯಲ್ಲಿ ಏನಾಗಿತ್ತು? ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಉಪಮುಖ್ಯಮಂತ್ರಿ ಕೇಶವ ಮೌರ್ಯ ಮತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಭೇಟಿಗಾಗಿ ರೈತರು ಬೆಳಿಗ್ಗೆಯಿಂದ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಇಬ್ಬರು ರೈತರ ಮೇಲೆ ಸಚಿವರ ಬೆಂಗಾವಲು ವಾಹನ ಹರಿದು ಸಾವಿಗೀಡಾಗಿದ್ದಾರೆ ಎಂದು ರೈತರು ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿತ್ತು. ವಾಹನಗಳಿಗೆ ಬೆಂಕಿ ಹಚ್ಚಿ ಉರಿಯುತ್ತಿರುವುದು, ಗಾಯಗೊಂಡವರು ನೆಲದ ಮೇಲೆ ಮಲಗಿರುವುದು ವಿಡಿಯೊದಲ್ಲಿದೆ. ಪ್ರಕರಣದಲ್ಲಿ ಒಟ್ಟು 8 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಪ್ರದೇಶದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇದನ್ನೂ ಓದಿ:
ಶಾರುಖ್ ಪುತ್ರನ ಅರೆಸ್ಟ್ ಬೆನ್ನಲ್ಲೇ ಓಡೋಡಿ ಬಂದ ಸಲ್ಮಾನ್ ಖಾನ್; ‘ಮನ್ನತ್’ನಲ್ಲಿ ನಡೆದಿದ್ದು ಏನು?
Karnataka Weather Today: ಬೆಂಗಳೂರಿನಲ್ಲಿ ಇಂದೂ ಮಳೆ ಸಾಧ್ಯತೆ; ಕರ್ನಾಟಕದಲ್ಲಿ ನಾಳೆಯಿಂದ ಆರೆಂಜ್ ಅಲರ್ಟ್ ಘೋಷಣೆ
Published On - 7:46 am, Mon, 4 October 21