ಉತ್ತರ ಪ್ರದೇಶ: ರೈತರ ಪ್ರತಿಭಟನೆ ವೇಳೆ ಸಚಿವರ ಬೆಂಗಾವಲು ವಾಹನ ಹರಿದು ಇಬ್ಬರು ಸಾವು; ರೈತರ ಸಂಘಟನೆ ಟ್ವೀಟ್
Farmers Protest: ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಕೇಂದ್ರ ಗೃಹ ಸಚಿವರ ಕಾರ್ಯಕ್ರಮವನ್ನು ವಿರೋಧಿಸಿ ರಸ್ತೆ ಬದಿಯಲ್ಲಿ ನಿಂತ ರೈತರ ಮೇಲೆ ಸಚಿವರ ಬೆಂಗಾವಲು ವಾಹನಗಳು ಹರಿದು 2 ರೈತರು ಸಾವನ್ನಪ್ಪಿದ್ದಾರೆ ಮತ್ತು 8 ರೈತರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಟ್ವೀಟ್ ಮಾಡಿದೆ.
ಲಕ್ನೊ: ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಉಪಮುಖ್ಯಮಂತ್ರಿ ಕೇಶವ ಮೌರ್ಯ ಮತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಭೇಟಿಗಾಗಿ ರೈತರು ಬೆಳಿಗ್ಗೆಯಿಂದ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಇಬ್ಬರು ರೈತರ ಮೇಲೆ ಸಚಿವರ ಬೆಂಗಾವಲು ವಾಹನ ಹರಿದು ಸಾವಿಗೀಡಾಗಿದ್ದಾರೆಎಂದು ರೈತರು ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ. ವಾಹನಗಳಿಗೆ ಬೆಂಕಿ ಹಚ್ಚಿ ಉರಿಯುತ್ತಿರುವುದು, ಗಾಯಗೊಂಡವರು ನೆಲದ ಮೇಲೆ ಮಲಗಿರುವುದು ವಿಡಿಯೊದಲ್ಲಿದೆ.ಈ ಪ್ರದೇಶದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎಂಟು ರೈತರು ಗಾಯಗೊಂಡಿದ್ದಾರೆ ಎಂದು ರೈತ ಸಂಘಗಳು ಹೇಳಿಕೊಂಡಿವೆ.
लखीमपुर खीरी मे घटित घटना पर अपडेट#FarmersaProtest @ANI @PTI_News @ndtv @news24tvchannel @aajtak @PCITweets @AP @Outlookindia @thetribunechd @AmarUjalaNews @BBCHindi @HindustanTimes @HansrajMeena @thetribunechd @PragyaLive @GaonConnection @pressfreedom @MeetThePress pic.twitter.com/9QGL6rizmQ
— Rakesh Tikait (@RakeshTikaitBKU) October 3, 2021
“ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಕೇಂದ್ರ ಗೃಹ ಸಚಿವರ ಕಾರ್ಯಕ್ರಮವನ್ನು ವಿರೋಧಿಸಿ ರಸ್ತೆ ಬದಿಯಲ್ಲಿ ನಿಂತ ರೈತರ ಮೇಲೆ ಸಚಿವರ ಬೆಂಗಾವಲು ವಾಹನಗಳು ಹರಿದು 2 ರೈತರು ಸಾವನ್ನಪ್ಪಿದ್ದಾರೆ ಮತ್ತು 8 ರೈತರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಟ್ವೀಟ್ ಮಾಡಿದೆ.
उत्तर प्रदेश के लखीमपुर खीरी में केंद्रीय गृह राज्य मंत्री के कार्यक्रम का विरोध कर रहे सड़क के किनारे खड़े किसानों पर मंत्री के काफिले की गाड़ियां द्वारा कुचले जाने पर 2 किसानों की मौत हो गयी है व 8 किसान गंभीर जख्मी है।@AHindinews @ndtvindia @aajtak @BBCHindi @thewire_in
— Kisan Ekta Morcha (@Kisanektamorcha) October 3, 2021
ಸರ್ಕಾರಿ ಕಾರ್ಯಕ್ರಮ ಪ್ರಯುಕ್ತ ಉಪ ಮುಖ್ಯಮಂತ್ರಿ ಮೌರ್ಯ ವರು ಖೇರಿಗೆ ಭೇಟಿ ನೀಡಿದ್ದರು. ಈ ಪ್ರದೇಶದಿಂದ ಬಂದಿರುವ ಮಿಶ್ರಾ ಅವರು ತಮ್ಮ ಗ್ರಾಮದಲ್ಲಿ ಸಮಾರಂಭವೊಂದನ್ನು ನಡೆಸುತ್ತಿದ್ದರು, ಅದರಲ್ಲಿ ಉಪ ಮುಖ್ಯಮಂತ್ರಿ ಕೂಡ ಭಾಗವಹಿಸಬೇಕಿತ್ತು. ಆದಾಗ್ಯೂ ಈ ಸಾವು ನೋವುಗಳ ಬಗ್ಗೆ ಆಡಳಿತದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.