CMAT Admit Card 2021: ಸಿಎಂಎಟಿ ಪರೀಕ್ಷಾ ಪ್ರವೇಶ ಪತ್ರ ಇಂದು ಬಿಡುಗಡೆ; ಪರೀಕ್ಷೆ ಯಾವಾಗ? ಹಾಲ್​ಟಿಕೆಟ್ ಡೌನ್​ಲೋಡ್ ಹೇಗೆ? ಇಲ್ಲಿದೆ ಮಾಹಿತಿ..

|

Updated on: Mar 24, 2021 | 12:18 PM

ಮಾರ್ಚ್​ 31ರಂದು ದೇಶಾದ್ಯಂತ CMAT ಪರೀಕ್ಷೆ ನಡೆಯಲಿದ್ದು, ಎರಡು ಶಿಫ್ಟ್​ಗಳಲ್ಲಿ ಆಯೋಜಿಸಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12ಗಂಟೆವರೆಗೆ ಒಂದು ಶಿಫ್ಟ್ ಮತ್ತು ಮಧ್ಯಾಹ್ನ 2ಗಂಟೆಯಿಂದ ಸಂಜೆ 6/6.30ರವರೆಗೆ ಇನ್ನೊಂದು ಶಿಫ್ಟ್ ಇರಲಿದೆ.

CMAT Admit Card 2021: ಸಿಎಂಎಟಿ ಪರೀಕ್ಷಾ ಪ್ರವೇಶ ಪತ್ರ ಇಂದು ಬಿಡುಗಡೆ; ಪರೀಕ್ಷೆ ಯಾವಾಗ? ಹಾಲ್​ಟಿಕೆಟ್ ಡೌನ್​ಲೋಡ್ ಹೇಗೆ? ಇಲ್ಲಿದೆ ಮಾಹಿತಿ..
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಸಾಮಾನ್ಯ ನಿರ್ವಹಣಾ ಪ್ರವೇಶ ಪರೀಕ್ಷೆ (CMAT)-2021ರ ಪ್ರವೇಶ ಪತ್ರ ಇಂದು ಮಧ್ಯಾಹ್ನ 12ಗಂಟೆಯೊಳಗೆ ಬಿಡುಗಡೆಯಾಗುವ ಸಾಧ್ಯತೆ ಇದ್ದು ಪರೀಕ್ಷಾರ್ಥಿಗಳು cmat.nta.nic.in. ವೆಬ್​​ಸೈಟ್​ಗೆ ಹೋಗಿ, ಅಲ್ಲಿ ಕೊಟ್ಟಿರುವ ಲಿಂಕ್​ ಮೂಲಕ ಡೌನ್​ಲೋಡ್​ ಮಾಡಿಕೊಳ್ಳಬಹುದಾಗಿದೆ. ಇನ್ನು ಪ್ರವೇಶ ಪತ್ರ ಡೌನ್​ ಲೋಡ್​ ಮಾಡಿಕೊಳ್ಳಲು, CMAT ಅಪ್ಲಿಕೇಶನ್​​ನ ನಂಬರ್​, ಪಾಸ್​ವರ್ಡ್​ ಮತ್ತು ಜನ್ಮದಿನವನ್ನು ನಮೂದಿಸಬೇಕು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತಿಳಿಸಿದೆ. CMAT ಪರೀಕ್ಷಾ ದಿನಾಂಕ, ಆಯಾ ಪರೀಕ್ಷಾರ್ಥಿಗಳ ಪರೀಕ್ಷಾ ಕೇಂದ್ರ, ಸಮಯ ಮತ್ತು ಪರೀಕ್ಷೆಗೆ ಸಂಬಂಧಪಟ್ಟ ಸೂಚನೆಗಳನ್ನು ಈ ಪ್ರವೇಶ ಪತ್ರ ಒಳಗೊಂಡಿರಲಿದೆ.

ಮಾರ್ಚ್​ 31ರಂದು ದೇಶಾದ್ಯಂತ CMAT ಪರೀಕ್ಷೆ ನಡೆಯಲಿದ್ದು, ಎರಡು ಶಿಫ್ಟ್​ಗಳಲ್ಲಿ ಆಯೋಜಿಸಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12ಗಂಟೆವರೆಗೆ ಒಂದು ಶಿಫ್ಟ್ ಮತ್ತು ಮಧ್ಯಾಹ್ನ 2ಗಂಟೆಯಿಂದ ಸಂಜೆ 6/6.30ರವರೆಗೆ ಇನ್ನೊಂದು ಶಿಫ್ಟ್​ ಎಂದು ವಿಂಗಡಿಸಲಾಗಿದೆ.

ಪ್ರವೇಶ ಪತ್ರ ಡೌನ್​ಲೋಡ್​ ಮಾಡಿಕೊಳ್ಳುವುದು ಹೇಗೆ?

  • ಮೊದಲು CMAT ಅಧಿಕೃತ ವೆಬ್​​ಸೈಟ್​ cmat.nta.nic.in.ಗೆ ಹೋಗಿ
  • ಅಲ್ಲಿ ಹೋಂ ಪೇಜ್​ನಲ್ಲಿರುವ ಅಡ್ಮಿಟ್​ ಕಾರ್ಡ್​ ಲಿಂಕ್​ ಮೇಲೆ ಕ್ಲಿಕ್​ ಮಾಡಿ
  • ನಿಮ್ಮ ಹೆಸರು, ಪಾಸ್​​ವರ್ಡ್ ಹಾಕಿ ಲಾಗಿನ್​ ಆಗಿ
  • CMAT ಹಾಲ್​​ಟಿಕೆಟ್​ 2021ನ್ನು ಡೌನ್​​ಲೋಡ್ ಮಾಡಿಕೊಳ್ಳಲು ಕ್ಲಿಕ್​ ಮಾಡಿ.

ಪರೀಕ್ಷೆ​ ಸ್ವರೂಪ ಹೇಗಿರಲಿದೆ?
ಒಟ್ಟು 500 ಅಂಕದ CMAT ಪರೀಕ್ಷೆಯ ಪೇಪರ್​ 5 ಸೆಕ್ಷನ್​​ಗಳನ್ನು ಒಳಗೊಂಡಿರಲಿದೆ. ಪರಿಮಾಣಾತ್ಮಕ ತಂತ್ರಗಳು ಮತ್ತು ಡೇಟಾ ವ್ಯಾಖ್ಯಾನ, ಭಾಷಾ ಗ್ರಹಿಕೆ, ಲಾಜಿಕಲ್​ ರೀಸನಿಂಗ್​, ಸಾಮಾನ್ಯ ತಿಳಿವಳಿಕೆ ಮತ್ತು ಹೊಸ ಆಯ್ಕೆಯಾದ ನಾವೀನ್ಯ ಮತ್ತು ಉದ್ಯಮಶೀಲತೆ ಎಂಬ ವಿಭಾಗಗಳಡಿ ಪ್ರಶ್ನೆಗಳು ಇರಲಿವೆ. ಪ್ರತಿ ವಿಭಾಗದಲ್ಲೂ 25 ಪ್ರಶ್ನೆಗಳಿದ್ದು, 100 ಅಂಕ ನಿಗದಿಯಾಗಿರುತ್ತದೆ.

ಇದನ್ನೂ ಓದಿ:  Aadhaar- PAN Card Linking: ಆಧಾರ್ ಮತ್ತು ಪ್ಯಾನ್ ಕಾರ್ಡ್ ಮಾರ್ಚ್ 31ರೊಳಗೆ ಜೋಡಣೆ ಆಗದಿದ್ದಲ್ಲಿ 1000 ರೂಪಾಯಿ ಶುಲ್ಕ

Bank Holidays: ಬ್ಯಾಂಕ್​ ಕೆಲಸವೇನಾದ್ರೂ ಇದ್ರೆ ಬೇಗ ಮುಗಿಸಿಕೊಳ್ಳಿ.. ಮಾ. 27ರ ನಂತರ ಸಾಲುಸಾಲು ರಜೆಗಳು ಬರಲಿವೆ