AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Holidays: ಬ್ಯಾಂಕ್​ ಕೆಲಸವೇನಾದ್ರೂ ಇದ್ರೆ ಬೇಗ ಮುಗಿಸಿಕೊಳ್ಳಿ; ಮಾ. 27ರಿಂದ ಏಪ್ರಿಲ್​ 4ರವರೆಗೆ ರಜೆ ಇರಲಿದೆ

ಇದರಲ್ಲಿ ಮಾರ್ಚ್​ 31 ಮತ್ತು ಏಪ್ರಿಲ್​ 3ರಂದು ಬ್ಯಾಂಕ್​ಗಳು ಕಾರ್ಯನಿರ್ವಹಿಸಲಿವೆ. ಆದರೆ ಮಾರ್ಚ್​ 31ರಂದು ಪಾಟ್ನಾದಲ್ಲಿ ಬ್ಯಾಂಕ್​​ಗಳಿಗೆ ರಜೆ ಮುಂದುವರಿಯಲಿವೆ. ಇನ್ನು ಬ್ಯಾಂಕ್​ ರಜೆಗಳು ಎಟಿಎಂ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ.

Bank Holidays: ಬ್ಯಾಂಕ್​ ಕೆಲಸವೇನಾದ್ರೂ ಇದ್ರೆ ಬೇಗ ಮುಗಿಸಿಕೊಳ್ಳಿ; ಮಾ. 27ರಿಂದ ಏಪ್ರಿಲ್​ 4ರವರೆಗೆ ರಜೆ ಇರಲಿದೆ
ಪ್ರಾತಿನಿಧಿಕ ಚಿತ್ರ
Follow us
Lakshmi Hegde
| Updated By: Digi Tech Desk

Updated on:Mar 25, 2021 | 9:46 AM

ನಿಮಗೆ ಬ್ಯಾಂಕ್​ ಕೆಲಸವೇನಾದರೂ ಇದ್ದರೆ ಮಾರ್ಚ್​ 27ರೊಳಗೆ ಮುಗಿಸಿಕೊಂಡು ಬಿಡಿ. ಯಾಕೆಂದರೆ ಮಾರ್ಚ್​ 27ರಿಂದ ಏಪ್ರಿಲ್​ 4ರವರೆಗೂ ಬ್ಯಾಂಕ್​ಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ. ರಿಸರ್ವ್ ಬ್ಯಾಂಕ್​​ ಆಫ್​ ಇಂಡಿಯಾ (RBI) ಬಿಡುಗಡೆ ಮಾಡಿದ ಕ್ಯಾಲೆಂಡರ್​​ನಲ್ಲಿ ಬ್ಯಾಂಕ್​ಗಳ ರಜೆಯ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಸುಮಾರು ಏಳುದಿನವೂ ಬಹುತೇಕ ರಜೆಯೇ ಆಗಿದ್ದು, ಗ್ರಾಹಕರು ಆದಷ್ಟು ಬೇಗ ತಮ್ಮ ಕೆಲಸ ಮುಗಿಸಿಕೊಳ್ಳಬೇಕು. ಇಲ್ಲವೇ ಏಪ್ರಿಲ್​ ನಾಲ್ಕರ ನಂತರ ಪ್ಲ್ಯಾನ್​ ಮಾಡಿಕೊಳ್ಳಬೇಕು.

ಹಣಕಾಸು ವರ್ಷದ ಅಂತ್ಯ, ನಾಲ್ಕನೇ ಶನಿವಾರ, ಹೋಳಿ ಹಬ್ಬಗಳೆಲ್ಲ ಒಟ್ಟಿಗೇ ಬಂದಿದ್ದರಿಂದ ಬ್ಯಾಂಕ್​ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಅದರಲ್ಲಿ ಮಾರ್ಚ್ 30 ಮತ್ತ ಏಪ್ರಿಲ್​ 3ರಂದು ಬ್ಯಾಂಕ್​​ಗಳು ಕಾರ್ಯನಿರ್ವಹಿಸಲಿವೆ. ಅದರಲ್ಲಿ ಮಾರ್ಚ್​ 30ರಂದು ಬಿಹಾರದ ಪಾಟ್ನಾದಲ್ಲಿ ಯಾವ ಬ್ಯಾಂಕ್​ಗಳು ಕಾರ್ಯನಿರ್ವಹಿಸುವುದಿಲ್ಲ. ಉಳಿದಂತೆ ದೇಶದ ಬೇರೆಕಡೆಗಳಲ್ಲಿ ಎಲ್ಲ ಬ್ಯಾಂಕ್​ಗಳ ಸೇವೆಯೂ ಇರುತ್ತದೆ ಎಂದು ಆರ್​ಬಿಐ ತಿಳಿಸಿದೆ. ಗೊಂದಲ ಬೇಡ.. ಕೆಳಗೆಕೊಟ್ಟಿರುವ ರಜೆಯ ವಿವರವನ್ನೊಮ್ಮೆ ಓದಿಕೊಂಡುಬಿಡಿ..:

  • ಮಾರ್ಚ್​ 27ರಂದು ತಿಂಗಳ ಕೊನೇ (ನಾಲ್ಕನೇ) ಶನಿವಾರದ ರಜೆ
  • ಮಾರ್ಚ್​ 28 ಭಾನುವಾರ
  • ಮಾರ್ಚ್​ 29ರಂದು ಹೋಳಿ ಹಬ್ಬದ ನಿಮಿತ್ತದ ರಜೆ
  • ಮಾರ್ಚ್​ 31: ಹಣಕಾಸು ವರ್ಷದ ಅಂತ್ಯದ ಸಲುವಾಗಿ ಎಲ್ಲ ಬ್ಯಾಂಕ್​​ಗಳಿಗೂ ರಜೆ
  • ಏಪ್ರಿಲ್​ 1: ವಾರ್ಷಿಕ ಅಕೌಂಟ್​ಗಳ ಮುಕ್ತಾಯದ ದಿನ
  • ಏಪ್ರಿಲ್​ 2: ಗುಡ್​ ಫ್ರೈಡೇ
  • ಏಪ್ರಿಲ್​ 4: ಭಾನುವಾರ

ಇದರಲ್ಲಿ ಮಾರ್ಚ್​ 30 ಮತ್ತು ಏಪ್ರಿಲ್​ 3ರಂದು ಬ್ಯಾಂಕ್​ಗಳು ಕಾರ್ಯನಿರ್ವಹಿಸಲಿವೆ. ಆದರೆ ಮಾರ್ಚ್​ 31ರಂದು ಪಾಟ್ನಾದಲ್ಲಿ ಬ್ಯಾಂಕ್​​ಗಳಿಗೆ ರಜೆ ಮುಂದುವರಿಯಲಿವೆ. ಇನ್ನು ಬ್ಯಾಂಕ್​ ರಜೆಗಳು ಎಟಿಎಂ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಮೊಬೈಲ್​ ಬ್ಯಾಂಕಿಂಗ್, ಆನ್​ಲೈನ್​ ಬ್ಯಾಂಕಿಂಗ್​ಗಳೂ ಗ್ರಾಹಕರಿಗೆ ಲಭ್ಯ ಇರಲಿವೆ. ಆದರೆ ಬ್ಯಾಂಕ್​​ಗೆ ಹೋಗಿ, ಹಣ ಡಿಪಾಸಿಟ್ ಮಾಡುವುದು, ಹಣ ವಿತ್​ ಡ್ರಾ ಮಾಡುವುದು ಸೇರಿ ಇನ್ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ.

ಇದನ್ನೂ ಓದಿ: Bigg Boss Kannada: ಬಿಗ್​ ಬಾಸ್ ಕೇಳಿದ 10 ಜನರಲ್​ ನಾಲೆಡ್ಜ್​ ಪ್ರಶ್ನೆಗೆ ಉತ್ತರಿಸದೇ ಸೋತ ಶಮಂತ್​! ನಿಮಗೆ ಉತ್ತರ ಗೊತ್ತಾ?

ದರ್ಶನ್​-ಸುದೀಪ್​ ಒಂದಾಗಿಸಲು ಪಣ ತೊಟ್ಟ ಫ್ಯಾನ್ಸ್​! ಈ ಮನವಿಗೆ ಒಪ್ಪಿಕೊಳ್ತಾರಾ ಕಿಚ್ಚ-ದಚ್ಚು?

Published On - 11:20 am, Wed, 24 March 21

ಕಲಬುರಗಿಯಿಂದ ಕೇದಾರನಾಥಕ್ಕೆ 70 ರ ವ್ಯಕ್ತಿಯ ಪಾದಯಾತ್ರೆ: ವಿಡಿಯೋ ವೈರಲ್
ಕಲಬುರಗಿಯಿಂದ ಕೇದಾರನಾಥಕ್ಕೆ 70 ರ ವ್ಯಕ್ತಿಯ ಪಾದಯಾತ್ರೆ: ವಿಡಿಯೋ ವೈರಲ್
ದಕ್ಷಿಣ ಕನ್ನಡ ಜಿಲ್ಲಿಗೆ ಹೆಚ್ಚು ಸಮಯ ನೀಡಲಾಗುತ್ತಿಲ್ಲ: ದಿನೇಶ್ ಗುಂಡೂರಾವ್
ದಕ್ಷಿಣ ಕನ್ನಡ ಜಿಲ್ಲಿಗೆ ಹೆಚ್ಚು ಸಮಯ ನೀಡಲಾಗುತ್ತಿಲ್ಲ: ದಿನೇಶ್ ಗುಂಡೂರಾವ್
ಸರ್ವಪಕ್ಷ ಸಭೆ ಕರೆಯಲಿದ್ದೇನೆ, ಪಾಲಿಕೆ ಎಲ್ಲರಿಗೂ ಸೇರಿದ್ದು: ಶಿವಕುಮಾರ್
ಸರ್ವಪಕ್ಷ ಸಭೆ ಕರೆಯಲಿದ್ದೇನೆ, ಪಾಲಿಕೆ ಎಲ್ಲರಿಗೂ ಸೇರಿದ್ದು: ಶಿವಕುಮಾರ್
ಆಂಧ್ರಪ್ರದೇಶ ಮೂಲದ ಕಳ್ಳನಿಂದ ₹ 11 ಲಕ್ಷದ ವಾಹನಗಳು ವಶಕ್ಕೆ
ಆಂಧ್ರಪ್ರದೇಶ ಮೂಲದ ಕಳ್ಳನಿಂದ ₹ 11 ಲಕ್ಷದ ವಾಹನಗಳು ವಶಕ್ಕೆ
ರಾಕೇಶ್ ಪೂಜಾರಿ ನೋಡಲು ರಿಷಬ್ ಏಕೆ ಬರಲಿಲ್ಲ? ಕೊನೆಗೂ ಸಿಕ್ತು ಉತ್ತರ
ರಾಕೇಶ್ ಪೂಜಾರಿ ನೋಡಲು ರಿಷಬ್ ಏಕೆ ಬರಲಿಲ್ಲ? ಕೊನೆಗೂ ಸಿಕ್ತು ಉತ್ತರ
ನಾಗರಹೊಳೆಯಲ್ಲಿ ಕುಟುಂಬಸ್ಥರ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಸಫಾರಿ
ನಾಗರಹೊಳೆಯಲ್ಲಿ ಕುಟುಂಬಸ್ಥರ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಸಫಾರಿ
Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು