ಅಕ್ರಮ ಹಣ ಸಂದಾಯ ಪ್ರಕರಣ: ಕೇರಳ ಮುಖ್ಯಮಂತ್ರಿ ಪುತ್ರಿ ವೀಣಾಗೆ ಹಿನ್ನಡೆ, ಅರ್ಜಿ ವಜಾಗೊಳಿಸಿದ ಹೈಕೋರ್ಟ್

| Updated By: Rakesh Nayak Manchi

Updated on: Feb 17, 2024 | 8:26 AM

ಯಾವುದೇ ಸೇವೆ ನೀಡದಿದ್ದರೂ ಕೊಚ್ಚಿನ್ ಮಿನರಲ್ಸ್‌ನಿಂದ ಕೇರಳದ ರಾಜಕೀಯ ವ್ಯಕ್ತಿಗಳಿಗೆ 135 ಕೋಟಿ ರೂಪಾಯಿ ನೀಡಲಾಗಿದ್ದು, ಈ ಪೈಕಿ 1.72 ಕೋಟಿ ರೂಪಾಯಿಗಳನ್ನು ಕೇರಳ ಸಿಎಂ ಪುತ್ರಿ ಟಿ.ವೀಣಾ ನಿರ್ದೇಶಕಿಯಾಗಿರುವ ಕರ್ನಾಟಕದ ಕಂಪನಿಗೆ ವರ್ಗಾವಣೆಯಾಗಿತ್ತು. ಈ ಸಂಬಂಧ ವೀಣಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ನ್ಯಾಯಾಲಯದಲ್ಲಿ ಅವರಿಗೆ ಹಿನ್ನಡೆಯಾಗಿದ್ದು, ಅರ್ಜಿ ವಜಾಗೊಂಡಿದೆ.

ಅಕ್ರಮ ಹಣ ಸಂದಾಯ ಪ್ರಕರಣ: ಕೇರಳ ಮುಖ್ಯಮಂತ್ರಿ ಪುತ್ರಿ ವೀಣಾಗೆ ಹಿನ್ನಡೆ, ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಅಕ್ರಮ ಹಣ ಸಂದಾಯ ಪ್ರಕರಣ: ಕೇರಳ ಮುಖ್ಯಮಂತ್ರಿ ಪುತ್ರಿ ವೀಣಾಗೆ ಹಿನ್ನೆಡೆ, ಅರ್ಜಿ ವಜಾಗೊಳಿಸಿದ ಹೈಕೋರ್ಟ್
Follow us on

ಬೆಂಗಳೂರು, ಫೆ.17: ಅಕ್ರಮ ಹಣ ಸಂದಾಯ ಪ್ರಕರಣ ಸಂಬಂಧ ತನಿಖಾ ಸಂಸ್ಥೆ ಎಸ್​​ಎಫ್​ಐಎ ತನಿಖೆ ವಿರುದ್ಧ ಕರ್ನಾಟಕ ಹೈಕೋರ್ಟ್ (Karnataka High Court) ಮೆಟ್ಟಿಲೇರಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಅವರ ಪುತ್ರಿ ವೀಣಾ ಟಿ ಅವರಿಗೆ ತೀವ್ರ ಹಿನ್ನಡೆಯಾಗಿದ್ದು, ವೀಣಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಶುಕ್ರವಾರ ವಜಾಗೊಳಿಸಿದೆ. ಅದರಂತೆ ಎಸ್​​ಎಫ್​​ಐಎ ತನಿಖೆ ಮುಂದುವರಿಸಲಿದೆ.

ಯಾವುದೇ ಸೇವೆ ನೀಡದಿದ್ದರೂ ಕೊಚ್ಚಿನ್ ಮಿನರಲ್ಸ್‌ನಿಂದ ಕೇರಳದ ರಾಜಕೀಯ ವ್ಯಕ್ತಿಗಳಿಗೆ 135 ಕೋಟಿ ರೂಪಾಯಿ ನೀಡಲಾಗಿದೆ ಎಂಬ ಅಂಶ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿ ವೇಳೆ ತಿಳಿದುಬಂದಿತ್ತು. ಅಲ್ಲದೆ, ಈ ಹಣದ ಪೈಕಿ 1.72 ಕೋಟಿ ರೂಪಾಯಿಗಳನ್ನು ಟಿ.ವೀಣಾ ನಿರ್ದೇಶಕಿಯಾಗಿರುವ ಕರ್ನಾಟಕದಲ್ಲಿರುವ ಎಕ್ಸಲಾಜಿಕ್ ಸಲ್ಯೂಷನ್ಸ್ ಪ್ರೈ.ಲಿ.ಗೆ ವರ್ಗಾವಣೆಯಾಗಿರುವುದು ಕಂಡುಬಂದಿತ್ತು.

ಯಾವುದೇ ಸೇವೆ ನೀಡದಿದ್ದರೂ ಹಣ ಸಂದಾಯ ಮಾಡಿದ ಪ್ರಕರಣ ಸಂಬಂಧ ಐಟಿ ಅಧಿಕಾರಿಗಳು ಎಸ್ಎಫ್ಐಒ ಗಮನಕ್ಕೆ ತಂದಿತ್ತು. ಅದರಂತೆ ಪ್ರಕರಣ ದಾಖಲಿಸಿಕೊಂಡ ಎಸ್ಎಫ್ಐಒ ತನಿಖೆ ನಡೆಸುತ್ತಿದೆ. ಇದರ ವಿರುದ್ಧ ವೀಣಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಕೇರಳ ಕರಾವಳಿಯುದ್ದಕ್ಕೂ ಕೊಚ್ಚಿನ್ ಮಿನರಲ್ಸ್ ಕಡಲತೀರದ ಮರಳು ಗಣಿಗಾರಿಕೆಯಲ್ಲಿ ಮರಳಿನ ತೊಡಗಿರುವುದರಿಂದ ಅಕ್ರಮ ಹಣ ಸಂದಾಯ ಪ್ರಕರಣ ಸಂಬಂಧ ಎಸ್‌ಎಫ್‌ಐಒ ತನಿಖೆಗೆ ಆದೇಶಿಸಿದೆ. ಕೇರಳ ರಾಜ್ಯದ ವಿವಿಧ ರಾಜಕಾರಣಿಗಳು ಮತ್ತು ವೀಣಾ ಒಡೆತನದ ಇಎಸ್‌ಪಿಎಲ್ ಸೇರಿದಂತೆ ಇತರ ಕೆಲವು ಸಂಸ್ಥೆಗಳಿಗೆ 135 ಕೋಟಿ ರೂಪಾಯಿಗಳಷ್ಟು ಅಕ್ರಮವಾಗಿ ಪಾವತಿ ಮಾಡಲಾಗಿದೆ. ಇದು ಸಾರ್ವಜನಿಕ ಹಿತಾಸಕ್ತಿಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಪೀಠಕ್ಕೆ ತಿಳಿಸಿದರು.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ಷೇಪರ್ಹ ಹೇಳಿಕೆ: ಸಂಸದ ಅನಂತಕುಮಾರ ಹೆಗಡೆಗೆ ಹೈಕೋರ್ಟ್ ಚಾಟಿ

ಸಿಎಂ ವಿಜಯನ್ ಪುತ್ರಿ ಟಿ.ವೀಣಾರ ಕಂಪನಿಗೆ ಕೊಚ್ಚಿನ್ ಮಿನರಲ್ಸ್ ಹಣ ಸಂದಾಯ ಮಾಡಿದೆ. ಮಾಹಿತಿ ಕೇಳಿದರೆ ಜಿಎಸ್‌ಟಿ ಪಾವತಿಸಿರುವುದಾಗಿ ಕಂಪನಿ ಹೇಳುತ್ತಿದೆ. ಹಲವು ವ್ಯವಹಾರಗಳು ಅನುಮಾನಾಸ್ಪದವಾಗಿವೆ. ಇಎಸ್‌ಪಿಎಲ್ ವಿರುದ್ಧ ಮಾತ್ರವಲ್ಲದೆ ಸಿಎಂಆರ್‌ಎಲ್ ಮತ್ತು ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ವಿರುದ್ಧವೂ ತನಿಖೆಗೆ ಆದೇಶಿಸಲಾಗಿದೆ ಎಂದು ವಾದಿಸಿದರು.

ವಿಚಾರಣಾ ಅಧಿಕಾರಿಗಳು ಈಗಾಗಲೇ ಎಸ್‌ಎಫ್‌ಐಒಗೆ ದಾಖಲೆಗಳನ್ನು ಹಸ್ತಾಂತರಿಸಿರುವುದರಿಂದ ಈ ಹಂತದಲ್ಲಿ ನ್ಯಾಯಾಲಯದ ಹಸ್ತಕ್ಷೇಪವನ್ನು ಕೇಳಲಾಗುವುದಿಲ್ಲ. ಕಂಪನಿಗಳ ರಿಜಿಸ್ಟ್ರಾರ್‌ನ ವಿಚಾರಣಾ ಅಧಿಕಾರಿಗಳಿಗೆ ಐಟಿ ಇಲಾಖೆಯೊಂದಿಗೆ ದಾಖಲೆಗಳನ್ನು ಪ್ರವೇಶಿಸಲು ಅಧಿಕಾರವಿಲ್ಲ, ಆದರೆ ಎಸ್‌ಎಫ್‌ಐಒಗೆ ಅಧಿಕಾರವಿದೆ ಮತ್ತು ಆದ್ದರಿಂದ ತನಿಖೆ ನಡೆಸಲು ಆದ್ಯತೆ ನೀಡಲಾಗಿದೆ ಎಂದು ಅವರು ವಾದಿಸಿದರು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಅರವಿಂದ್ ದಾತಾರ್, ದೊಡ್ಡ ಪ್ರಮಾಣದ ಹಗರಣಗಳ ತನಿಖೆ ನಡೆಸಲು ಉದ್ದೇಶಿಸಿರುವ ಎಸ್‌ಎಫ್‌ಐಒಗೆ ಅನುಮತಿ ನೀಡಿದರೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯ ನಿಬಂಧನೆಗಳನ್ನು ಅನ್ವಯಿಸಿ ಅರ್ಜಿದಾರರನ್ನು ಬಂಧಿಸುವ ಮತ್ತು ಆಸ್ತಿಗಳನ್ನು ಜಪ್ತಿ ಮಾಡುವ ಸಾಧ್ಯತೆಗಳಿವೆ. 1.76 ಕೋಟಿ ವ್ಯವಹಾರದ ತನಿಖೆಯು ಯಾವುದೇ ದೊಡ್ಡ ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡಿಲ್ಲ ಎಂದು ವಾದಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:25 am, Sat, 17 February 24