ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಚಳಿ ಪರಿಸ್ಥಿತಿ ಮತ್ತೆ ಮುಂದುವರೆದಿದೆ. ಕೆಲವು ದಿನಗಳಿಂದ ಕನಿಷ್ಠ ತಾಪಮಾನ 3-4 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಇದೇ ಉಷ್ಣಾಂಶ ನಾಲ್ಕು ದಿನಗಳವರೆಗೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮಂಗಳವಾರ ತಿಳಿಸಿದೆ.
ಮುಂದಿನ ಕೆಲದಿನಗಳ ಕಾಲ ಮಂಜು ಆವರಿಸಿದ ವಾತಾವರಣ ಕೂಡ ಕಂಡುಬರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇಂದು (ಮಂಗಳವಾರ) ಹವಾಮಾನ ಇಲಾಖೆಯ ವರದಿಯಂತೆ ಅತಿ ಕನಿಷ್ಠ ತಾಪಮಾನ 5.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಳೆದ ಭಾನುವಾರ 3.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಆ ಮೂಲಕ ಈ ಋತುವಿನ ಅತಿ ಕಡಿಮೆ ತಾಪಮಾನವನ್ನು ದೆಹಲಿ ಅನುಭವಿಸಿತ್ತು.
ಸೋಮವಾರ 5.5 ಡಿಗ್ರಿ ಸೆಲ್ಸಿಯಸ್ ಇದ್ದ ಕನಿಷ್ಠ ಉಷ್ಣಾಂಶ ಇಂದು ಮತ್ತೆ 0.2ರಷ್ಟು ಕುಸಿತ ಕಂಡಿದೆ. ಸೋಮವಾರ ಗರಿಷ್ಠ 23.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ದೆಹಲಿಯಲ್ಲಿ ಗುರುವಾರ 15.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಶುಕ್ರವಾರ ಗರಿಷ್ಠ 19.8 ಡಿಗ್ರಿ ಸೆಲ್ಸಿಯಸ್ ಮತ್ತು ಶನಿವಾರ 21.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಜಫಾರ್ಪುರ್ ಕಳೆದ ಶುಕ್ರವಾರ ಕನಿಷ್ಠ 2.7 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡಿತ್ತು.
ರಾಜಸ್ಥಾನದ ಮೌಂಟ್ ಅಬು ಪ್ರದೇಶದಲ್ಲೂ ಶೀತಗಾಳಿಯ ಪರಿಣಾಮ ಭಾನುವಾರ ಮೈನಸ್ 1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ವಿಪರೀತ ಚಳಿ ಅನುಭವಿಸಿದ ಪ್ರವಾಸಿಗರು, ಮನಾಲಿಯಂಥಾ ಸ್ಥಳಗಳಲ್ಲಿ ನೋಡಬಹುದಾದ ಮಂಜುಗಡ್ಡೆಯನ್ನು ನಾವು ಇಲ್ಲಿ ಕಾಣುತ್ತಿದ್ದೇವೆ ಎಂದು ಹೇಳಿದ್ದರು.
ಉತ್ತರ ಭಾರತದಲ್ಲೆಡೆ ಚಳಿಯಿಂದ ನಡುಗುತ್ತಿರುವ ಜನರು ಚಳಿಯಿಂದ ಪಾರಾಗಲು ಸ್ವೆಟರ್, ಕಂಬಳಿಯ ಮೊರೆ ಹೋಗಿದ್ದಾರೆ. ಬೆಂಕಿ ಹಾಕಿ ಮೈ ಕಾಯಿಸಿಕೊಳ್ಳುತ್ತಿರುವ ದೃಶ್ಯಗಳು ಉತ್ತರ ಪ್ರದೇಶ, ರಾಜಸ್ಥಾನ ಇತರೆಡೆಗಳಲ್ಲಿ ಕಂಡುಬಂದಿದೆ. ಜೊತೆಗೆ, ಜಮ್ಮು ಕಾಶ್ಮೀರ, ಲಡಾಖ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಹಿಮಪಾತ ಕೂಡ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.
Delhi: Protesting farmers comfort themselves by lighting bonfire as cold weather conditions continue in the national capital.
Farmers' protest against Centre's three farm laws enters 27th day at Singhu border (Delhi-Haryana border) pic.twitter.com/7ECu4zpjhz
— ANI (@ANI) December 22, 2020
Kanpur: Labourers in the city say they're facing lot of problems in cold weather due to lack of facilities.
"Administration is not providing any facilities like wood for bonfire etc. We're somehow managing to survive this extreme cold weather," says a labourer. pic.twitter.com/64xkCfyWrU
— ANI UP/Uttarakhand (@ANINewsUP) December 22, 2020
Gorakhpur: Thick blanket of fog engulfs the city. Locals say fog & cold weather conditions are disrupting their normal life.
"It's becoming impossible to step outside in the morning. My entire schedule is getting disrupted," says Akhtar Hussain, Resident of Golghar, Gorakhpur. pic.twitter.com/lpT3yQf9Qi
— ANI UP/Uttarakhand (@ANINewsUP) December 22, 2020
ದೆಹಲಿಯಲ್ಲಿ ಚಳಿಚಳಿ: 3.4 ಡಿಗ್ರಿ ಸೆಲ್ಸಿಯಸ್ಗೆ ಕುಸಿದ ಉಷ್ಣಾಂಶ, ನಡುಗಿದ ಜನ
Published On - 10:59 am, Tue, 22 December 20